Chikkodi: ಫೋನ್‌ ಪೇ ಸ್ಕ್ರೀನ್ ಶಾಟ್ ತೋರಿಸಿ ಪಂಗನಾಮ ಹಾಕುತ್ತಿದ್ದ ಖದೀಮರ ಬಂಧನ

ನಿಮ್ಮ ಅಂಗಡಿಗಳಲ್ಲಿ ನೀವು ಫೋನ್‌ ಪೇ, ಗೂಗಲ್ ಪೇ ಯೂಸ್ ಮಾಡ್ತಿದ್ದಿರಾ? ಹಾಗಾದರೆ ಈ ಸುದ್ದಿಯನ್ನು ನೀವು ಮಿಸ್ ಮಾಡದೇ ಓದಬೇಕು. ಫೋನ್ ಪೇ, ಗೂಗಲ್ ಪೇ ಮೂಲಕ ಹಣ ಸಂದಾಯ ಮಾಡೋರು ಹೇಗೆಲ್ಲ ಮೋಸ ಮಾಡುತ್ತಾರೆ ಅನ್ನೋದಕ್ಕೆ ಇಲ್ಲೊಂದು ಸ್ಪಷ್ಟ ನಿದರ್ಶನ ಸಿಕ್ಕಿದೆ. 

fruad gang arrested for digital payments at chikkodi gvd

ವರದಿ: ಮುಷ್ತಾಕ್ ಪೀರಜಾದೇ, ಏಷ್ಯಾನೆಟ್ ಸುವರ್ಣನ್ಯೂಸ್

ಚಿಕ್ಕೋಡಿ (ಆ.04): ನಿಮ್ಮ ಅಂಗಡಿಗಳಲ್ಲಿ ನೀವು ಫೋನ್‌ ಪೇ, ಗೂಗಲ್ ಪೇ ಯೂಸ್ ಮಾಡ್ತಿದ್ದಿರಾ? ಹಾಗಾದರೆ ಈ ಸುದ್ದಿಯನ್ನು ನೀವು ಮಿಸ್ ಮಾಡದೇ ಓದಬೇಕು. ಫೋನ್ ಪೇ, ಗೂಗಲ್ ಪೇ ಮೂಲಕ ಹಣ ಸಂದಾಯ ಮಾಡೋರು ಹೇಗೆಲ್ಲ ಮೋಸ ಮಾಡುತ್ತಾರೆ ಅನ್ನೋದಕ್ಕೆ ಇಲ್ಲೊಂದು ಸ್ಪಷ್ಟ ನಿದರ್ಶನ ಸಿಕ್ಕಿದೆ. ಲಕ್ಷಾಂತರ ರೂಪಾಯಿ ಮೌಲ್ಯದ ಬಂಗಾರದ ಅಭರಣ ಖರೀದಿಸಿ ಬಂಗಾರದ ಅಂಗಡಿ ಮಾಲೀಕರಿಗೆ ಮಕ್ಮಲ್ ಟೋಪಿ ಹಾಕಿದ ಗ್ಯಾಂಗ್ ಒಂದು ಇದೀಗ ಪೊಲೀಸರ ಬಲೆಗೆ ಬಿದ್ದಿದೆ. ಅಷ್ಟಕ್ಕೂ ಅವರು ಮಕ್ಮಲ್ ಟೋಪಿ ಹೇಗೆ  ಹಾಕ್ತಿದ್ರು ಅಂತೀರಾ ಈ ಸುದ್ದಿಯನ್ನು ನೋಡಿ.

ಡಿಜಿಟಲ್ ಇಂಡಿಯಾ ಕೇಂದ್ರ ಸರ್ಕಾರದ ಅತ್ಯಂತ ಜನಪ್ರಿಯ ಯೋಜನೆ. ನಗದು ವ್ಯವಹಾರವನ್ನು ಕಡಿಮೆ ‌ಮಾಡಬೇಕು ಡಿಜಿಟಲ್ ವ್ಯವಹಾರಕ್ಕೆ ಪ್ರೋತ್ಸಾಹ ನೀಡಬೇಕು ಎಂದು ಈ ಯೋಜನೆಯನ್ನ ಸರ್ಕಾರ ಜಾರಿಗೆ ತಂದಿದೆ. ಆದರೆ ಇದನ್ನೇ ದಾಳ ಮಾಡಿಕೊಂಡ ಖತರ್ನಾಕ್ ಗ್ಯಾಂಗ್ ಮಾಡಬಾರದನ್ನ ಮಾಡಿ ಈಗ ಪೊಲೀಸರ ಅತಿಥಿಯಾಗಿದೆ. ಬೆಳಗಾವಿ ಜಿಲ್ಲೆಯ ಗೋಕಾಕ್, ಹಾಗೂ ಹುಕ್ಕೇರಿ ಮತ್ತು ರಾಯಭಾಗ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಒಂದೇ ರೀತಿಯ ಪ್ರಕರಣಗಳು ವರದಿಯಾಗಿದ್ದವು.‌ 

ಲಾರಿ ಡಿಕ್ಕಿಯಾಗಿ ಬಾಲಕ ಸಾವು: ರೊಚ್ಚಿಗೆದ್ದ ಜನರಿಂದ ಲಾರಿ ಮೇಲೆ ಕಲ್ಲೆಸೆತ, ಚಾಲಕನಿಗೆ ಥಳಿತ

ಇದನ್ನ ಬೆನ್ನಟ್ಟಿದ ಪೊಲೀಸರು ಈಗ ಗ್ಯಾಂಗ್‌ನ ಹೆಡೆಮುರಿ ಕಟ್ಟಿದ್ದಾರೆ. ಬಂಗಾರದ ಅಂಗಡಿಗಳನ್ನು ಟಾರ್ಗೆಟ್ ಮಾಡ್ತಿದ್ದ ಖದೀಮರ ತಂಡ ಮೊದಲು ಒಂದು ತೊಲ ಬಂಗಾರ ಖರೀದಿ ಮಾಡಿ ಅದರ ಸಂಪೂರ್ಣ ಅಮೌಂಟ್ ಫೋನ್ ಪೇ ಮೂಲಕ ಸಂದಾಯ ಮಾಡಿ ಅನಂತರ ಅವರ ವಿಶ್ವಾಸ ಗಳಿಸಿ ನಂತರ ಅದೇ ಅಂಗಡಿಗಳಲ್ಲಿ ಹೆಚ್ಚು ಬಂಗಾರ ಖರೀದಿ ಮಾಡಿ ಅದರ ಹಣ ಸಂದಾಯ ಮಾಡದೇ ಅಷ್ಟೇ ಅಮೌಂಟ್ ಸ್ಕ್ರೀನ್ ಶಾಟ್ ಮಾಲೀಕರಿಗೆ ತೋರಿಸಿ ಮಕ್ಮಲ್‌ ಟೋಪಿ ಹಾಕಿ ಅಲ್ಲಿಂದ ಪರಾರಿಯಾಗ್ತಿತ್ತು. 

ಬೆಳಗಾವಿ ಜಿಲ್ಲೆಯ ಗೋಕಾಕ್ ನಗರ ಠಾಣೆ, ಹಾಗೂ ರಾಯಭಾಗ ಠಾಣೆ ಮತ್ತು ಹುಕ್ಕೇರಿ ಠಾಣೆಗಳಲ್ಲಿ ಈಗ ಬಂಧಿತರಾಗಿರುವ ಆರೋಪಿಗಳ ಮೇಲೆ  8 ಪ್ರಕರಣ ದಾಖಲಾಗಿದ್ದವು. ಸದ್ಯ ಕಾರ್ಯಾಚರಣೆ ನಡೆಸಿರುವ ಪೊಲೀಸರು ಮಹಾರಾಷ್ಟ್ರ ಜತ್ತ ಮೂಲದ ಹಾಗೂ ಕರ್ನಾಟಕದ ಕಾಗವಾಡ ಮೂಲದ ಇಬ್ಬರು ಆರೋಪಿಗಳನ್ನು ಬಂಧಿಸಿ ಅವರಿಂದ 22 ಲಕ್ಷ ರೂಪಾಯಿ ಮೌಲ್ಯದ 421 ಗ್ರಾಂ ಬಂಗಾರದ ಆಭರಣಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. 

ಬೆಳಗಾವಿ: ಹೆಚ್ಚಾದ ನಕಲಿ ಪತ್ರಕರ್ತರ ಹಾವಳಿ, ಹಣಕ್ಕಾಗಿ ಧಮ್ಕಿ..!

ಬಂಗಾರ ಖರೀದಿಸಿ ಹಣ ಜಮೆ ಮಾಡಿದ ಸ್ಕ್ರೀನ್ ಶಾಟ್ ತೋರಿಸಿ ಅಂಗಡಿ ಮಾಲೀಕರಿಗೆ ಮಕ್ಮಲ್ ಟೋಪಿ ಹಾಕುವ ಜನರ ಬಗ್ಗೆ ಎಚ್ಚರವಾಗಿರಿ ಅಂತ ಎಸ್ಪಿ ಸಂಜೀವ್ ಪಾಟೀಲ್ ಎಚ್ಚರಿಕೆ ನೀಡಿದ್ದಾರೆ. ಹಣ ಜಮೆ ಆಗಿದ್ದನ್ನು ಕನ್ಫರ್ಮ್ ಮಾಡಿಕೊಂಡು ವ್ಯವಹಾರ ಮಾಡಿ ಅಂತ ಎಚ್ಚರಿಸಿದ್ದಾರೆ. ಒಟ್ಟಿನಲ್ಲಿ ಬಂಗಾರ ಖರೀದಿಸಿ ಹಣ ಸಂದಾಯ ಮಾಡದೇ ಸ್ಕ್ರೀನ್ ಶಾಟ್ ತೋರಿಸಿ ಮಕ್ಮಲ್ ಟೋಪಿ ಹಾಕ್ತಿದ್ದ ಗ್ಯಾಂಗ್ ಈಗ ಪೊಲೀಸರ ಅತಿಥಿಯಾಗಿದ್ದಾರೆ.‌ ನೀವು ಸಹ ಗೂಗಲ್‌ ಪೇ, ಫೋನ್ ಪೇ ಮೂಲಕ ವ್ಯವಹಾರ ಮಾಡುತ್ತಿದ್ದರೆ ಹುಷಾರಾಗಿರೋದು ಒಳ್ಳೆಯದು.

Latest Videos
Follow Us:
Download App:
  • android
  • ios