ಬಿಜಿನಸ್ ಪ್ರಮೋಶನ್‌ಗೆ ಪವಿತ್ರ ಕ್ಷೇತ್ರದಲ್ಲಿ ಬೆತ್ತಲಾಗಿ ಮಲಗಿದ 27 ರ ಮಹಿಳೆ!

ಪವಿತ್ರ ಕ್ಷೇತ್ರದಲ್ಲಿ ಮಹಿಳೆಯ ಬೆತ್ತಲೆ ಪೋಟೋ ಶೂಟ್/ ಸ್ಥಳೀಯ ಕೌನ್ಸಿಲರ್ ದೂರಿನ ಆಧಾರದಲ್ಲಿ ಫ್ರೆಂಚ್ ಮಹಿಳೆ ಬಂಧನ/ ಕಾನೂನು ಬಾಹಿರ ಎಂದು ನನಗೆ ಗೊತ್ತಿರಲಿಲ್ಲ.

 

French woman arrested for shooting nude video And PhotoShoot on Rishikesh

ರಿಷಿಕೇಶ(ಆ. 30) ಪವಿತ್ರ ಕ್ಷೇತ್ರ ರಿಷಿಕೇಶದಲ್ಲಿ ಬೆತ್ತಲೆ ವಿಡಿಯೋ ಶೂಟ್ ಮಾಡಿದ್ದ ಪ್ರೆಂಚ್ ಮೂಲದ ಮಹಿಳೆಯನ್ನು ಬಂಧಿಸಲಾಗಿದೆ. 

ಉತ್ತರಾಖಂಡದ ರಿಷಿಕೇಶದ ಲಕ್ಷ್ಮಣ ಜುಲಾದಲ್ಲಿ ಬೆತ್ತಲೆ ಶೂಟ್ ಮಾಡಿದ್ದಳು.  ಸ್ಥಳೀಯ ವಾರ್ಡ್ ಕೌನ್ಸಿಲರ್ ಗಜೇಂದ್ರ ಸಜ್ವಾನ್ ನೀಡಿದ ದೂರಿನ ಆಧಾರದಲ್ಲಿ  27  ವರ್ಷದ ಮಹಿಳೆಯನ್ನು ವಶಕ್ಕೆ ಪಡೆಯಲಾಗಿದೆ.

ಸೋಶಿಯಲ್ ಮೀಡಿಯಾದಲ್ಲಿ ನಟಿಯ ಬೆತ್ತಲೆ ಡ್ಯಾನ್ಸ್

ಬೆತ್ತಲೆ ವಿಡಿಯೋ ಮಾಡಿದ್ದು ಅಲ್ಲದೇ ಫೋಟೋ ಶೂಟ್ ಮಾಡಿಸಿಕೊಂಡ ಮಹಿಳೆ ಅದನ್ನು ಸೋಶಿಯಲ್ ಮೀಡಿಯಾಕ್ಕೆ ಅಪ್ ಲೋಡ್ ಮಾಡಿದ್ದಳು . ಇದಾದ ಮೇಲೆ ವಿಚಾರ ನಮ್ಮ ಗಮನಕ್ಕೆ ಬಂದಿದ್ದು ದೂರು ನೀಡಿದ್ದೇವೆ ಎಂದು ಗಜೇಂದ್ರ ತಿಳಿಸಿದ್ದಾರೆ.

ರಿಷಿಕೇಶದ ಹೋಟೆಲ್ ಒಂದರಲ್ಲಿ ತಂಗಿದ್ದ ಮಹಿಳೆ ಪವಿತ್ರ ಕ್ಷೇತ್ರದಲ್ಲಿ ಬೆತ್ತಲೆ ಪೋಟೋ ಶೂಟ್ ಮಾಡಿಸಿಕೊಂಡಿದ್ದು ಆರಂಭಿಕ ತನಿಖೆಯಲ್ಲಿ ಗೊತ್ತಾಗಿದೆ.  ಈ ಜಾಗದಲ್ಲಿ ನ್ಯೂಡ್ ಪೋಟೋ ಶೂಟ್ ಕಾನೂನು ಬಾಹಿರ ಎಂದು ನನಗೆ ಗೊತ್ತಿರಲಿಲ್ಲ. ನನ್ನ ಬಿಸಿನಸ್ ಒಂದನ್ನು ಪ್ರಮೋಟ್ ಮಾಡಲು ಇಂಥ ಕೆಲಸ ಮಾಡಿದ್ದೆ ಎಂದು ಮಹಿಳೆ ಪೊಲೀಸ್  ತನಿಖೆ ವೇಳೆ ಹೇಳಿದ್ದಾಳೆ.

ಸೆ.1ರಿಂದ ಮದ್ಯಪ್ರಿಯರಿಗೆ ಮತ್ತಷ್ಟು ಕಿಕ್...!

"

Latest Videos
Follow Us:
Download App:
  • android
  • ios