* ಬಸ್ ಚಾಲಕನಿಂದ ಕೃತ್ಯ* ಆತನ ಬ್ಯಾಂಕ್ ಖಾತೆಯಲ್ಲಿ 2.5 ಕೋಟಿ ಪತ್ತೆ* ವಂಚಿಸುವುದನ್ನೇ ಉದ್ಯೋಗ ಮಾಡಿಕೊಂಡ ಅರೋಪಿ ಮಂಜುನಾಥ್
ಬೆಂಗಳೂರು(ಅ.17): ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಸಂಚಾರಿ ನಿರೀಕ್ಷರ ಹುದ್ದೆ ಕೊಡಿಸುವುದಾಗಿ ನಂಬಿಸಿ ನೂರಾರು ಮಂದಿಯಿಂದ ಕೋಟ್ಯಂತರ ರುಪಾಯಿ ಪಡೆದು ವಂಚಿಸಿರುವ(Fraud) ಆರೋಪದಡಿ ಕೆಎಸ್ಆರ್ಟಿಸಿ(KSRTC) ಚಾಲಕ ಸೇರಿ ಇಬ್ಬರು ಆರೋಪಿಗಳನ್ನು ಮಾಗಡಿ ರಸ್ತೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಳ್ಳಾರಿಯ(Ballari) ಹಗರಿಬೊಮ್ಮನಹಳ್ಳಿ ಮೂಲದ ಮಂಜುನಾಥ್ ಬಿಲ್ಲಾ ನಾಯಕ್ (45) ಹಾಗೂ ಆತನ ಸ್ನೇಹಿತ ಅನಿಲ್ (41) ಬಂಧಿತರು(Arrest). ಆರೋಪಿಗಳು(Accused) ಸುಮಾರು ನೂರಕ್ಕೂ ಅಧಿಕ ಮಂದಿಯಿಂದ ಕೋಟ್ಯಂತರ ರುಪಾಯಿ ಪಡೆದು ವಂಚಿಸಿದ್ದಾರೆ ಎನ್ನಲಾಗಿದೆ. ಆರೋಪಿಗಳ ಖಾತೆಯಲ್ಲಿದ್ದ ಸುಮಾರು 2.5 ಕೋಟಿ ಇರುವುದು ಪತ್ತೆಯಾಗಿದೆ ಎಂದು ಪೊಲೀಸರು(Police) ಹೇಳಿದ್ದಾರೆ.
ಶಂಕರ್ ಬಿದರಿಗೆ ಸೈಬರ್ ವಂಚಕರ ಗಾಳ.. 89 ಸಾವಿರ ಕಳಕೊಂಡ ನಿವೃತ್ತ ಅಧಿಕಾರಿ
ಆರೋಪಿ ಮಂಜುನಾಥ್ ಬಿಲ್ಲಾ ನಾಯಕ್ ಕೆಎಸ್ಆರ್ಟಿಸಿ ಚಾಲಕನಾಗಿದ್ದು(Driver), ತನ್ನ ಸ್ನೇಹಿತರನ್ನು ಮಧ್ಯವರ್ತಿಗಳನ್ನಾಗಿ ಮಾಡಿಕೊಂಡು ದಂಧೆ ನಡೆಸುತ್ತಿದ್ದ. ಇತ್ತೀಚೆಗೆ ಬಾಗಲಕೋಟೆ(Bagalkot) ಜಿಲ್ಲೆಯ ವಿ.ಎಸ್.ಅರಗಿಶೆಟ್ಟಿ ಎಂಬವರಿಗೆ ಟ್ರಾಫಿಕ್ ಇನ್‌ಸ್ಪೆಕ್ಟರ್(Traffic Ipector) ಹುದ್ದೆ ಕೊಡಿಸುವುದಾಗಿ 11 ಲಕ್ಷ ಪಡೆದು ವಂಚಿಸಿದ್ದರು. ಈ ಸಂಬಂಧ ಅರಗಿಶೆಟ್ಟಿ ಎಂಬುವರು ಕೊಟ್ಟ ದೂರಿನ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ.
ಮಂಜುನಾಥ್ ವಂಚಿಸುವುದನ್ನೇ ಉದ್ಯೋಗ(Job) ಮಾಡಿಕೊಂಡಿದ್ದಾನೆ. ಅದಕ್ಕಾಗಿ ಕಾರೊಂದನ್ನು ಖರೀದಿಸಿ ಅದಕ್ಕೆ ಕರ್ನಾಟಕ ಸರ್ಕಾರದ(Government Of Karnataka) ನಾಮಫಲಕ ಹಾಕಿಕೊಂಡು ಉತ್ತರ ಕರ್ನಾಟಕದಲ್ಲಿ(North Karnataka) ತನ್ನ ಸ್ನೇಹಿತರ ಜತೆ ಸುತ್ತಾಡುತ್ತಿದ್ದ. ಈ ವೇಳೆ ಮತ್ತು ಕರ್ತವ್ಯದ ವೇಳೆಯಲ್ಲಿ ಪರಿಚಯವಾಗುವ ಸಾರ್ವಜನಿಕರನ್ನು ಗುರಿಯಾಗಿಸಿಕೊಂಡು ಕೆಎಸ್‌ಆರ್‌ಟಿಸಿಯಲ್ಲಿ ಟ್ರಾಫಿಕ್ ಇನ್‌ಸ್ಪೆಕ್ಟರ್ ಉದ್ಯೋಗ ಕೊಡಿಸುವುದಾಗಿ ನಂಬಿಸುತ್ತಿದ್ದ. ಬಳಿಕ ಅವರಿಂದ ಹಣ ವಸೂಲಿ ಮಾಡಿಕೊಂಡು ನಾಪತ್ತೆಯಾಗುತ್ತಿದ್ದ. ಬಂದ ಹಣದಲ್ಲಿ ಮೋಜು ಮಾಡುತ್ತಿದ್ದ. ಬಂದ ಹಣದಲ್ಲಿ ಮಧ್ಯವರ್ತಿಯಾಗಿದ್ದ(Mediator) ಅನಿಲ್‌ಗೆ ಇಂತಿಷ್ಟು ಎಂದು ಹಣ ನೀಡುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದರು.
