ನಗರದಲ್ಲಿ ಇಸ್ಪೀಟ್ ಜೂಜಾಟದ ಅಡ್ಡೆ ಮೇಲೆ ದಾಳಿ ನಡೆಸಿದ ಪಟ್ಟಣ ಠಾಣೆ ಪೊಲೀಸರು 20 ಸಾವಿರ ರು. ನಗದು ಹಾಗೂ ಒಂದು ಮೊಬೈಲ್ ವಶಪಡಿಸಿಕೊಂಡು, ಪ್ರಕರಣ ದಾಖಲಿಸದೇ, ಠಾಣಾಧಿಕಾರಿಗೂ ತಿಳಿಸದೆ ಕರ್ತವ್ಯಲೋಪವೆಸಗಿದ ಹಿನ್ನೆಲೆಯಲ್ಲಿ ನಾಲ್ವರು ಪೊಲೀಸರನ್ನು ಎಸ್ಪಿ ಡಾ.ಅರುಣ್ ಅಮಾನತು ಮಾಡಿದರಲ್ಲದೇ, ಈ ನಾಲ್ವರನ್ನು ಬಂಧಿಸಿದ್ದಾರೆ.
ಹೊಸಪೇಟೆ (ಅ.28): ನಗರದಲ್ಲಿ ಇಸ್ಪೀಟ್ ಜೂಜಾಟದ ಅಡ್ಡೆ ಮೇಲೆ ದಾಳಿ ನಡೆಸಿದ ಪಟ್ಟಣ ಠಾಣೆ ಪೊಲೀಸರು 20 ಸಾವಿರ ರು. ನಗದು ಹಾಗೂ ಒಂದು ಮೊಬೈಲ್ ವಶಪಡಿಸಿಕೊಂಡು, ಪ್ರಕರಣ ದಾಖಲಿಸದೇ, ಠಾಣಾಧಿಕಾರಿಗೂ ತಿಳಿಸದೆ ಕರ್ತವ್ಯಲೋಪವೆಸಗಿದ ಹಿನ್ನೆಲೆಯಲ್ಲಿ ನಾಲ್ವರು ಪೊಲೀಸರನ್ನು ಎಸ್ಪಿ ಡಾ.ಅರುಣ್ ಅಮಾನತು ಮಾಡಿದರಲ್ಲದೇ, ಈ ನಾಲ್ವರನ್ನು ಬಂಧಿಸಿದ್ದಾರೆ.
ದೀಪಾವಳಿ ಹಬ್ಬದ ನಿಮಿತ್ತ ನನ್ನ ಸ್ನೇಹಿತರ ಜತೆಗೆ ಇಸ್ಪೀಟ್ ಜೂಜಾಟವಾಡುತ್ತಿದ್ದಾಗ ದಾಳಿ ನಡೆಸಿ, ನಮ್ಮ ಬಳಿ ಇದ್ದ 20 ಸಾವಿರ ರು. ನಗದು ಹಾಗೂ ಒಂದು ಮೊಬೈಲ್ ವಶಪಡಿಸಿಕೊಂಡಿದ್ದಾರೆ ಎಂದು ವೆಂಕಟೇಶ್ ಎಂಬುವವರು ಪಟ್ಟಣ ಠಾಣೆಯಲ್ಲಿ ದೂರು ದಾಖಲಿಸಿದ್ದು, ದೂರಿನ ಅನ್ವಯ ತನಿಖೆ ನಡೆಸಿದ ಪಟ್ಟಣ ಠಾಣೆ ಪೊಲೀಸರು, ದಾಳಿ ನಡೆಸಿದ ಮಹೇಶ್, ಅಭಿಷೇಕ, ಮಂಜುನಾಥ ಮತ್ತು ಶ್ರೀಕಾಂತ್ ಮೇಟಿ ಎಂಬುವವರನ್ನು ಬಂಧಿಸಿ, ಎಸ್ಪಿ ಡಾ. ಅರುಣ್ ಕೆ. ಅವರು ಈ ನಾಲ್ವರು ಪೊಲೀಸರನ್ನು ಅಮಾನತುಗೊಳಿಸಿದ್ದಾರೆ.
Kolar: ಅಮಾಯಕರ ಜೀವದ ಜೊತೆ ಚೆಲ್ಲಾಟ: ಕರ್ತವ್ಯ ಲೋಪ ಎಸಗಿದ ಇನ್ಸ್ಪೆಕ್ಟರ್ ಅಮಾನತು
3 ಪೊಲೀಸರ ಅಮಾನತು: ಪೊಲೀಸ್ ಠಾಣೆಯಲ್ಲಿ ಪೇದೆಗಳು ಗುಂಡು ಪಾರ್ಟಿ ನಡೆಸಿದ ವಿಡಿಯೋ ವೈರಲ್ ಆಗಿದ್ದು, ವಿಡಿಯೋದಲ್ಲಿದ್ದ ಠಾಣೆ ಸಿಬ್ಬಂದಿಯನ್ನು ಕೋಲಾರ ಎಸ್‌ಪಿ ಸಸ್ಪೆಂಡ್ ಮಾಡಿದ್ದಾರೆ. ಶ್ರೀನಿವಾಸಪುರ ತಾಲೂಕಿನ ಗೌನಿಪಲ್ಲಿ ಠಾಣೆಯಲ್ಲಿ ಕಳೆದ ಒಂದುವರೆ ವರ್ಷದ ಹಿಂದೆ ಅಲ್ಲಿನ ಕೆಲ ಸಿಬ್ಬಂದಿಗಳು ಠಾಣೆಯಲ್ಲಿ ಮದ್ಯ ಸೇವಿಸಿ ಮಾಂಸದೂಟ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಸಿಬ್ಬಂದಿಯೊಬ್ಬರು ಲೈಟ್ ಬಿಲ್ ವಿಚಾರವಾಗಿ ವ್ಯಂಗ್ಯವಾಗಿ ಮಾತನಾಡಿ ನಾಳೆಯಿಂದ ಎಲೆಕ್ಟ್ರ್ರಿಕಲ್ ಬಿಲ್ ಜಾಸ್ತಿ ಬರುತ್ತೆ ಎಂದಾಗ ಅದಕ್ಕೆ ಮತ್ತೊಬ್ಬ ಸಿಬ್ಬಂದಿ ಉತ್ತರಿಸಿ ಮೆನ್ ವೈಯರ್‌ಗೆ ಹಾಕು ನಾನಿದ್ದೀನಿ ಏನೇ ತೊಂದರೆ ಬಂದ್ರು ನೋಡ್ಕೋತೀನಿ ಎಂದು ತೆಲಗು ಭಾಷೆಯಲ್ಲಿ ಸಂವಾದ ನಡೆಸಿರುವ ವಿಡಿಯೋ ಇತ್ತಿಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತಿತ್ತು.
ಈ ವಿಡಿಯೋ ಕೋಲಾರದ ಜಿಲ್ಲಾ ವರಿಷ್ಠಾಧಿಕಾರಿ ದೇವರಾಜ್ ಗಮನಕ್ಕೆ ಬಂದು ಅವರು ವಿಚಾರಣೆ ನಡೆಸಿ ವಿಡಿಯೋದಲ್ಲಿದ್ದ ಮುಖ್ಯಪೇದೆ ಚಲಪತಿ, ಪೇದೆಗಳಾದ ರಮೇಶ್ ಬಾಬು ಮತ್ತು ಮಂಜುನಾಥ್ ಅವರುಗಳನ್ನು ಅಮಾನತ್ತು ಮಾಡಿದ್ದಾರೆ. ಈ ಘಟನೆ ನಡೆದಾಗ ಗೌವನಪಲ್ಲಿ ಠಾಣೆಯಲ್ಲಿ ಸಬ್ ಇನ್ಸಪೇಕ್ಟರ್ ಹುದ್ದೆ ಖಾಲಿ ಇತ್ತು ಎಂದು ಎಸ್ಪಿ ತಿಳಿಸಿದ್ದಾರೆ.
Bengaluru: ಬೆಟ್ಟಿಂಗ್ ಬೆದರಿಕೆಯೊಡ್ಡಿ ಸುಲಿಗೆ: ಐವರು ಪೊಲೀಸರು ಅಮಾನತು
ಸಿಪಿಐ ಕರಿಯಪ್ಪ ಸಸ್ಪೆಂಡ್: ಕೆರೂರು ಪಟ್ಟಣದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದ ಗಲಾಟೆ ಹಿನ್ನೆಲೆಯಲ್ಲಿ ಬಾದಾಮಿ ಸಿಪಿಐ ಕರಿಯಪ್ಪ ಬನ್ನೆ ಅವರನ್ನು ಸೇವೆಯಿಂದ ಅಮಾನತುಗೊಳಿಸಿ, ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಜಯಪ್ರಕಾಶ ಆದೇಶ ಹೊರಡಿಸಿದ್ದಾರೆ. ಕೆರೂರಿನಲ್ಲಿ ನಡೆದ ಗಲಾಟೆ ಹಿನ್ನೆಲೆಯಲ್ಲಿ ಸಿಪಿಐ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಹಿಂದೂ ಜಾಗರಣಾ ವೇದಿಕೆ ಸರಣಿ ಪ್ರತಿಭಟನೆಗಳನ್ನು ನಡೆಸಿತ್ತು. ಅ.10ರಂದು ಅಹೋರಾತ್ರಿ ಧರಣಿ ನಡೆಸಲು ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ಮುಂದಾಗಿದ್ದರು. ಈ ಹಿನ್ನೆಲೆಯಲ್ಲಿ ಬಾದಾಮಿ ಸಿಪಿಐ ಕರಿಯಪ್ಪ ಅವರನ್ನು ಅಮಾನತು ಮಾಡಲಾಗಿದೆ.
