ದಾವಣಗೆರೆ(ನ.08): 15 ವರ್ಷದ ಬಾಲಕಿಯನ್ನು ಅಪಹರಿಸಿ ಲೈಂಗಿಕ ದೌರ್ಜನ್ಯವೆಸಗಿದ ಘಟನೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಗ್ರಾಮವೊಂದರಲ್ಲಿ ನಡೆದಿದೆ.  ಈ ಸಂಬಂಧ ಇಬ್ಬರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. 

ಹಾಲೇಶ್(25) ಎಂಬ ಆರೋಪಿಗೆ ಅಪಹರಿಸಲು ಸಹಕಾರ ನೀಡಿದ್ದ 68 ವರ್ಷದ ಹಾಲೇಶಪ್ಪ ಹಾಗೂ ರುದ್ರೇಶ್ ಎಂಬುವನನ್ನ ಬಂಧಿಸಿಲಾಗಿದೆ. 

ನಿರ್ಜನ ಪ್ರದೇಶದಲ್ಲಿ ಮೈಕೈ ಮುಟ್ಟಲು ಯತ್ನ, ನೊಂದ ಮಹಿಳೆ ಸುಸೈಡ್

15 ವರ್ಷದ ಬಾಲಕಿಯನ್ನು ಮದುವೆಯಾಗುವುದಾಗಿ ನಂಬಿಸಿ  ನಾಲ್ವರು ಸೇರಿ ಅಪಹರಿಸಿ ಲೈಂಗಿಕ ದೌರ್ಜನ್ಯವೆಸಗಿದ್ದರು ಎಂದು ಹೇಳಲಾಗುತ್ತಿದೆ. ಘಟನೆಗೆ ಸಂಬಂಧಿಸಿದಂರೆ ಮತ್ತೊಬ್ಬ ಆರೋಪಿ‌ ಹನುಮಂತಪ್ಪ ಪರಾರಿ ಎಲ್ಲರ ಮೇಲೆ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣದ ದಾಖಲಾಗಿದೆ.