ಕೊಲ್ಲಾಪುರ(ನ.01) ತನ್ನದೇ ಊರಿನ ಯುವಕರು ನೀಡಿದ್ದ ಕಿರುಕುಳದಿಂದ ಬೇಸತ್ತ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪರಿಣಾಮ ಆರೋಪ ಸ್ಥಾನದಲ್ಲಿರುವ ಯುವಕಕನೊಬ್ಬ ಸಹ ಆತ್ಮಹತ್ಯೆಗೆ ಯತ್ನ ಮಾಡಿದ್ದಾನೆ

ಕೊಲ್ಲಾಪುರದ ಪನ್ಹಾಲಾ ತಾಲೂಕಿನ ನಂದುದ್ರೆ ಗ್ರಾಮದಿಂದ  ಘಟನೆ ವರದಿಯಾಗಿದೆ.  ಆರೋಪಿ ಯುವಕನನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇತರ ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ.

ಪೋರ್ನ್ ಸೈಟಿಂದ ವಿಡಿಯೋ ತೆಗೆಯಲು ಆರು ತಿಂಗಳಿನಿಂದ ನಟಿ ಹೋರಾಟ

ಗ್ರಾಮದಲ್ಲಿ ಬಿಗುವಿನ ವಾತಾವರಣ ಇದ್ದು ಪೊಲೀಸ್ ಭದ್ರತೆ ನಿಯೋಜನೆ ಮಾಡಲಾಗಿದೆ. ಬಂಧಿತ ಯುವಕರನ್ನು ಅಕ್ಷಯ್ ಗಣಪತಿ ಚವಾಣ್ ಮತ್ತು ಪ್ರದೀಪ್ ಕೃಷ್ಣತ್ ಪಾಟೀಲ್ ಎಂದು ಗುರುತಿಸಲಾಗಿದೆ. ಮಹಿಳೆಯ ಸಾವಿನ ನಂತರ ಜನರ ಗುಂಪೊಂದು ಆರೋಪಿಗಳ ಮನೆಗಳಿಗೆ ನುಗ್ಗಿದೆ.

ಅಕ್ಟೋಬರ್ 23 ರಂದು, 20 ವರ್ಷದ ಮಹಿಳೆ ಕೊಟೊಲಿಯಿಂದ ಕೊಲೊಲಿಗೆ ಪ್ರಯಾಣಿಸುತ್ತಿದ್ದಾಗ ಮೂವರು ಯುವಕರು  ಆಕೆಯನ್ನು ತಡೆದಿದ್ದಾರೆ. ಮಹಿಳೆಯೊಂದಿಗೆ ಅನುಚಿತವಾಗಿ ವರ್ತನೆ ಮಾಡಿದ್ದು ಅಲ್ಲದೆ ದೇಹದ ಭಾಗ ಸ್ಪರ್ಶಿಸಲು ಯತ್ನಿಸಿದ್ದಾರೆ.  ಈ ಸುದ್ದಿ ಊರಿನಲ್ಲಿ ಹಬ್ಬಿದ ನಂತರ ಅವಮಾನದಿಂದ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.