ರೈಲ್ವೇ ಹಳೆಯಲ್ಲಿ ಕುಳಿತು ಗೇಮ್ ಆಡ್ತಿದ್ದ ಮಕ್ಕಳು ರೈಲು ಬಂದಿದ್ದೇ ಗೊತ್ತಿಲ್ಲ, ಮಕ್ಕಳ ಮೇಲೆಯೇ ಹರಿದ ಟ್ರೈನ್

ಕೊಲ್ಕತ್ತಾ(ಆ.23): ಗೇಮಿಂಗ್ ಕ್ರೇಜ್ ಹೆಚ್ಚಾಗಿದೆ. ಆದಾಯ ತಂದುಕೊಡುವಂತ ಬಹಳಷ್ಟು ಗೇಮ್‌ಗಳು ಇವೆ. ಟೀಂ ಆಗಿ ಆಡುವುದು, ಕಪಲ್ ಆಗಿ ಆಡುವುದು, ಒಬ್ಬೊಬ್ಬರೇ ಆಡುವುದು ಹೀಗೆ ವೆರೈಟಿ ವೆರೈಟಿ ಗೇಮ್‌ಗಳು ಮೊಬೈಲ್‌ನಲ್ಲಿ ಸಿಗುತ್ತದೆ. ಮಕ್ಕಳೂ ಈ ಗೇಮ್‌ಗಳನ್ನು ಇಷ್ಟಪಡುತ್ತಾರೆ. ಲಾಕ್‌ಡೌನ್ ಆದ ಮೇಲಂತೂ ಗೇಮಿಂಗ್ ಬಗೆಗಿನ ಕ್ರೇಜ್ ಹೆಚ್ಚಾಗಿದೆ. ಆದರೆ ಎಷ್ಟೋ ಸಲ ಇದರಿಂದಾಗುವ ದೊಡ್ಡ ಅನಾಹುತಗಳು ಅರಿವಾಗದೇ ಹೋಗುತ್ತವೆ.

ಅಕ್ಷರಶಃ ಗೇಮ್‌ಗಳಿಗೆ ದಾಸರಾಗೋ ಮಕ್ಕಳು, ಯುವಜನರು ರಾತ್ರಿ ಪೂರಾ ಗೇಮ್ ಆಡುತ್ತಾ, ಮ್ಯಾಚ್, ಟೂರ್ನೆಮೆಂಟ್ ಎಂದು ಅದರಲ್ಲೇ ಮುಳುಗುತ್ತಾರೆ. ಪಶ್ಚಿಮ ಬಂಗಾಳದಲ್ಲಿ ಗೇಮಿಂಗ್‌ ಕ್ರೇಜ್ ಇರುವ 13-14 ವರ್ಷದ ಮಕ್ಕಳು ಒಂದೇ ಸಲಕ್ಕೆ ದುರಂತವಾಗಿ ಸಾವನ್ನಪ್ಪಿದ್ದಾರೆ. ಗೇಮಿಂಗ್‌ನಲ್ಲಿ ಮುಳುಗಿದ್ದ ಮಕ್ಕಳು ಅದೇ ಗೇಮ್‌ ಕ್ರೇಜ್‌ಗೆ ಬಲಿಯಾಗಿದ್ದಾರೆ.

ಉತ್ತರ ಬಂಗಾಳದ ಉತ್ತರ ದಿನಾಜ್‌ಪುರ ಜಿಲ್ಲೆಯ ಇಸ್ಲಾಂಪುರದಲ್ಲಿ ಭಾನುವಾರ ತಡರಾತ್ರಿ ತಮ್ಮ ಮೊಬೈಲ್‌ನಲ್ಲಿ ರೈಲ್ವೇ ಹಳಿಗಳಲ್ಲಿ ಆಟವಾಡುತ್ತಿರುವಾಗ 13-14 ವರ್ಷ ವಯಸ್ಸಿನ ನಾಲ್ಕು ಮಕ್ಕಳು ರೈಲಿನಡಿ ಸಿಲುಕಿ ಸಾವನ್ನಪ್ಪಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಹಾವಿನ ಜೊತೆ ರಾಖಿ ಹಬ್ಬ: ತಿಲಕ ಹಚ್ಚುವಾಗ ಹಾವು ಕಚ್ಚಿ ಸಾವು

ಭಾನುವಾರ ತಡರಾತ್ರಿ ರೈಲಿಗೆ ಸಿಲುಕಿ ನಾಲ್ವರು ಅಪ್ರಾಪ್ತ ಬಾಲಕರು ಸಾವನ್ನಪ್ಪಿದ್ದಾರೆ. ಗ್ರಾಮಸ್ಥರು ಮೃತದೇಹ ದಫನ್ ಮಾಡಿದ್ದಾರೆ. ಘಟನೆ ಸಂಬಂಧ ಯಾವುದೇ ದೂರುಗಳು ಸ್ವೀಕರಿಸಿಲ್ಲ ಎಂದು ಇಸ್ಲಾಂಪುರ ಪೊಲೀಸ್ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಸಚಿನ್ ಮಕ್ಕರ್ ಹೇಳಿದ್ದಾರೆ. ಹಿರಿಯ ರೈಲ್ವೇ ಅಧಿಕಾರಿಯೊಬ್ಬರು, ಭಾನುವಾರ ರಾತ್ರಿ 10 ರ ಸುಮಾರಿಗೆ ಹೊಸ ಜಲ್ಪೈಗುರಿಯಿಂದ 50 ಕಿಮೀ ದೂರದಲ್ಲಿರುವ ಚೋಪ್ರಾದಲ್ಲಿ ದುರಂತದ ನಡೆದ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು ಹೇಳಿದ್ದಾರೆ

ಸರ್ಕಾರಿ ರೈಲ್ವೆ ಪೊಲೀಸ್ ಜಿಆರ್‌ಪಿ ಮತ್ತು ರೈಲ್ವೆ ಪೊಲೀಸ್ ಪಡೆ (ಆರ್‌ಪಿಎಫ್) ಅಧಿಕಾರಿಗಳ ತಂಡ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದೆ. ಕತ್ತಲಾಗಿದ್ದರಿಂದ ನಮಗೆ ಯಾವುದೇ ಶವಗಳನ್ನು ಪತ್ತೆ ಮಾಡಲು ಸಾಧ್ಯವಾಗಲಿಲ್ಲ. ಬೆಳಗ್ಗೆ ಹುಡುಕಾಟ ಮಾಡಲಾಯಿತು. ನಂತರ ಮೊಬೈಲ್ ಫೋನ್‌ಗಳ ಮುರಿದ ಭಾಗಗಳು ಟ್ರ್ಯಾಕ್‌ನಲ್ಲಿ ಕಂಡುಬಂದಾಗ ವಿಷಯ ತಿಳಿದಿದೆ. ಗ್ರಾಮಸ್ಥರು ಅಷ್ಟೊತ್ತಿಗಾಗಲೇ ಮೃತದೇಹಗಳನ್ನು ತೆಗೆದಿದ್ದಾರೆ ಎಂದು ನಂತರ ನಮಗೆ ತಿಳಿಯಿತು ಎಂದು ರೈಲ್ವೇ ಅಧಿಕಾರಿ ಹೇಳಿದ್ದಾರೆ.

ಪೋಲಿಸ್ ಮತ್ತು ರೈಲ್ವೆ ಅಧಿಕಾರಿಗಳ ತಂಡವು ಗ್ರಾಮವನ್ನು ತಲುಪಿದಾಗ, ಅವರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸುವುದನ್ನು ಖಚಿತಪಡಿಸಿಕೊಳ್ಳಲು ಕುಟುಂಬ ಸದಸ್ಯರು ಈಗಾಗಲೇ ಸಂತ್ರಸ್ತರನ್ನು ಸಮಾಧಿ ಮಾಡಿರುವುದನ್ನು ಕಂಡುಬಂದಿದೆ ಎಂದು ರೈಲ್ವೆ ಅಧಿಕಾರಿ ಹೇಳಿದ್ದಾರೆ.