Asianet Suvarna News Asianet Suvarna News

ಬೀದರ್‌: ಬಟ್ಟೆ ಒಗೆಯಲು ಹೋಗಿದ್ದ ಒಂದೇ ಕುಟುಂಬದ ನಾಲ್ವರ ದುರ್ಮರಣ

Crime News: ಬೀದರ್‌ನಲ್ಲಿ ಬಟ್ಟೆ ಒಗೆಯಲು ಹೋಗಿದ್ದ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದಾರೆ. ಚಿತ್ರದುರ್ಗದಲ್ಲಿ ಬೈಕ್, ಲಾರಿ ನಡುವೆ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವನಪ್ಪಿದ್ದಾನೆ.

four drown in Lake in Bidar accident in Chitradurga one dies mnj
Author
First Published Sep 26, 2022, 10:40 PM IST

ಬೀದರ್ (ಸೆ. 26): ಬಟ್ಟೆ ಒಗೆಯಲು ಹೋಗಿದ್ದ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದಾರೆ.  ಬೀದರ್ ತಾಲೂಕಿನ ಕಂಗಟಿ ಗ್ರಾಮದ ಕರೆಯಲ್ಲಿ ಈ ಘಟನೆ ನಡೆದಿದೆ. ದಸರಾ ಹಬ್ಬದ ನಿಮಿತ್ತ ಬಟ್ಟೆ ಒಗೆಯಲು ತಾಯಿ- ಮಕ್ಕಳು ಕೆರೆಗೆ ಹೋಗಿದ್ದರು.  ಆನಂದ,  ಪ್ರಜ್ವಲ್, ಸುನೀತಾ, ನಾಗೇಶ್ ಮೃತ ದುರ್ದೈವಿಗಳು.  ಕರೆಯಲ್ಲಿ ಬಟ್ಟೆ ಒಗೆಯುತ್ತಿದ್ದ ವೇಳೆ ಇಬ್ಬರು ಮಕ್ಕಳು ಈಜಾಡಲು ಹೋಗಿ ದುರ್ಘಟನೆ ನಡೆದಿದೆ ಎನ್ನಲಾಗುತ್ತಿದೆ.  ಸ್ಥಳಕ್ಕೆ ಜನವಾಡ ಪೊಲೀಸರು ಬೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ. 

ಚಿತ್ರದುರ್ಗ: ಚಿತ್ರದುರ್ಗದ ಮುರುಘಾಮಠದ ಬಳಿ ಬೈಕ್, ಲಾರಿ ನಡುವೆ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವನಪ್ಪಿದ್ದಾನೆ. ನಿತೀಶ (16) ಮೃತ ದುರ್ದೈವಿ. ಬೈಕಿನಲ್ಲಿದ್ದ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಒಂದೇ ಬೈಕಿನಲ್ಲಿ ಮೂವರು ಸಂಚರಿಸುತ್ತಿದ್ದಾಗ ಅಪಘಾತ ಸಂಭವಿಸಿದೆ. ಚಿತ್ರದುರ್ಗ ಸಂಚಾರಿ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. 

ಉತ್ತರಕನ್ನಡ:  ಸ್ಕೂಟಿ- ಪಿಕಪ್ ವಾಹನ ಮುಖಾಮುಖಿ ಢಿಕ್ಕಿ: ಸವಾರ ಸ್ಥಳದಲ್ಲೇ ಸಾವು: ಸ್ಕೂಟಿ- ಪಿಕಪ್ ವಾಹನ ಮುಖಾಮುಖಿ ಢಿಕ್ಕಯಾಗಿ ಸ್ಕೂಟಿ ಸವಾರ ಸ್ಥಳದಲ್ಲೇ ಸಾವನಪ್ಪಿರುವ ಘಟನೆ ಸಿದ್ದಾಪುರ ಶಿರಸಿ ರಸ್ತೆಯ ಕಾಳೇನಳ್ಳಿ ಗ್ರಾಮದ ಬಳಿ ನಡೆದಿದೆ.  ಸಿದ್ದಾಪುರ ತಾಲ್ಲೂಕಿನ ದೊಡ್ಡಜಡ್ಡಿ ಗ್ರಾಮದ ಹರೀಶ ರಾಮಚಂದ್ರ ನಾಯ್ಕ(24), ಮೃತ ಬೈಕ್ ಸವಾರ.  ಶಿರಸಿಗೆ ಹೊರಟಿದ್ದ ಯುವಕನ ಸ್ಕೂಟಿಗೆ ಎದುರಿನಿಂದ ಬಂದ ಪಿಕ್‌ಅಪ್ ಢಿಕ್ಕಿಯಾಗಿದೆ. ಸ್ಥಳಕ್ಕೆ ಸಿದ್ದಾಪುರ ಪೊಲೀಸರು ಭೇಟಿ, ಪರಿಶೀಲನೆ ನಡೆಸುತ್ತಿದ್ದಾರೆ.  ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಬೆಳಗಾವಿ ಪಾಲಿಗೆ ಕರಾಳವಾದ ಮಹಾಲಯ ಅಮಾವಾಸ್ಯೆ; ಪ್ರತ್ಯೇಕ ಅಪಘಾತದಲ್ಲಿ ಐವರ ಸಾವು!

ವಿಜಯಪುರ:  ವಾಹನ ಹಾಯ್ದು ಯುವಕ ಸಾವು: ಮಹಾರಾಷ್ಟ್ರದ ತುಳಜಾಪುರದಿಂದ ದೇವಿದೀಪ ತರುತ್ತಿದ್ದ ಯುವಕನೊಬ್ಬ ವಾಹನ ಹಾಯ್ದು ಮೃತಪಟ್ಟಘಟನೆ ಜಿಲ್ಲೆಯ ಹಲಸಂಗಿ ಬಳಿ ಸೋಮವಾರ ಸಂಭವಿಸಿದೆ. ಜತ್ತ ತಾಲೂಕಿನ ಉಮದಿ ಮೂಲದ ಕರಣ ಕೆಂಗಾರ್‌ (25) ಮೃತಪಟ್ಟಯುವಕ. ನವರಾತ್ರಿ ಪ್ರಯುಕ್ತ ತುಳಜಾಪುರದಿಂದ ಅಂಬಾ ಭವಾನಿ ದೇವಸ್ಥಾನದಿಂದ ದೀಪದ ಪಂಜು ತರುತ್ತಿದ್ದ ಯುವಕ ಚಡಚಣ ತಾಲೂಕಿನ ಹಲಸಂಗಿ ಬಳಿ ರಸ್ತೆಯಲ್ಲಿ ಈ ದುರ್ಘಟನೆ ನಡೆದಿದೆ. 

ರಸ್ತೆಯಲ್ಲಿ ಪಂಜಿನ ಜೊತೆಗೆ ನಡೆದುಕೊಂಡು ಬರುತ್ತಿದ್ದ ವೇಳೆ ಈ ಘಟನೆ ನಡೆದಿದ್ದು, ಯುವಕ ಕರಣ ದೀಪವನ್ನು ಮತ್ತೊಬ್ಬ ಯುವಕನಿಗೆ ಹಸ್ತಾಂತರಿಸಿ ವಾಹನ ಹತ್ತುವ ವೇಳೆÜ ಕೆಳಗೆ ಬಿದ್ದಿದ್ದಾನೆ. ಆಗ ಹಿಂಬದಿಯಿಂದ ವಾಹನವೊಂದು ವೇಗವಾಗಿ ಬಂದು ಯುವಕನ ಮೇಲೆ ಹಾಯ್ದ ಪರಿಣಾಮ ಯುವಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಝಳಕಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow Us:
Download App:
  • android
  • ios