Asianet Suvarna News Asianet Suvarna News

ಬೀದರ್: ಕಾರಿಗೆ ಕಂಟೇನರ್ ಡಿಕ್ಕಿ, ನಾಲ್ವರು ದುರ್ಮರಣ

ಎರ್ಟಿಗಾ ಕಾರಿಗೆ ಕಂಟೇನರ್ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ನಾಲ್ವರು ಮೃತಪಟ್ಟಿರುವ ಘಟನೆ ಬೀದರ್ ನಲ್ಲಿ ನಡೆದಿದೆ.
 

Four Dies In Road Accident at Bidar District rbj
Author
Bengaluru, First Published Aug 15, 2022, 10:37 PM IST

ಬೀದರ್, (ಆಗಸ್ಟ್.15): ದೇಶದೆಲ್ಲೆಡೆ 75ನೇ ಸ್ವಾತಂತ್ರ್ಯ ದಿನಾಚರಣೆಯನ್ನ ಸಂಭ್ರಮದಿಂದ ಆಚರಣೆ ಮಾಡಿದ್ದಾರೆ. ಎಲ್ಲರ ಮನೆ ಮನದಲ್ಲಿ ತ್ರಿವರ್ಣ ಧ್ವಜ ರಂಗು ಮೂಡಿಸಿದೆ. 

ಮತ್ತೊಂದೆಡೆ ಬೀದರ್‌ನಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಎರ್ಟಿಗಾ ಕಾರಿಗೆ ಕಂಟೇನರ್ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ನಾಲ್ವರು ಮೃತಪಟ್ಟಿರುವ ಘಟನೆ ಬೀದರ್ ನಲ್ಲಿ ನಡೆದಿದೆ.

ಟಿಪ್ಪು Vs ಸಾವರ್ಕರ್‌ ಫೋಟೋ ವಾರ್: ಶಿವಮೊಗ್ಗದಲ್ಲಿ ನಿಷೇಧಾಜ್ಞೆ ಜಾರಿ

ಬೀದರ್ ತಾಲೂಕಿನ ಬಂಗೂರು ಬಳಿ ಅಪಘಾತ ಸಂಭವಿಸಿದ್ದು ಮೃತರು ಹೈದರಾಬಾದ್ ನ ಬೇಗಂಪೇಟೆ ನಿವಾಸಿಗಳು ಎಂದು ತಿಳಿದುಬಂದಿದೆ. ಬೇಗಂಪೇಟೆ ನಿವಾಸಿಗಳು ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಗಾಣಗಾಪುರ ದೇವಸ್ಥಾನಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಅಪಘಾತ ಸಂಭವಿಸಿದೆ.

ಇನ್ನು ಅಪಘಾತದಲ್ಲಿ ಆರು ಮಂದಿಗೆ ಗಾಯಗಳಾಗಿದ್ದು ಅವರನ್ನು ಮನ್ನಾಕೇಳಿ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ. ಮನ್ನಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ರಸ್ತೆ ಅಪಘಾತ ಇಬ್ಬರು ಸಾವು
ಕೊಪ್ಪಳ: ರಸ್ತೆ ಅಪಘಾತ ಇಬ್ಬರು ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಗಂಗಾವತಿ ತಾಲೂಕಿನ ಸಂಗಾಪೂರ ಬಳಿ ನಿನ್ನೆ ತಡರಾತ್ರಿ ನಡೆದಿದೆ. ವೃದ್ದನನ್ನು ಬಚಾವ್ ಮಾಡಲು‌ ಹೋಗಿ ವಾಹನ ಸವಾರ ಮಂಜುನಾಥ್ (31)ಸಾವನ್ನಪ್ಪಿದ್ದಾನೆ.  ಮಂಜುನಾಥ್ ಗಂಗಾವತಿ ತಾಲೂಕಿನ‌‌ ಮಲ್ಲಾಪೂರ‌ ನಿವಾಸಿ. ವೃದ್ದನನ್ನು ಬಚಾವ್ ಮಾಡೋ ವೇಳೆ ವೃದ್ಧನಿಗೂ ಗಾಯವಾಗಿದೆ. ಗಂಗಾವತಿ ಉಪವಿಭಾಗ ಆಸ್ಪತ್ರೆಗೆ ವೃದ್ದನನ್ನು ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಆದರೆ ಚಿಕಿತ್ಸೆ ಫಲಿಸದೇ ವೃದ್ದನೂ ಮೃತಪಟ್ಟಿದ್ದಾರೆ. ಮೃತ ವೃದ್ದನ ಗುರುತು ಪತ್ತೆಯಾಗಿಲ್ಲ. ಗಂಗಾವತಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.

ವಿದ್ಯುತ್ ತಂತಿ ಸ್ಪರ್ಶಿಸಿ ಚಾಲಕ ಸ್ಥಳದಲ್ಲೇ ಸಾವು
ಹಾವೇರಿ: ವಿದ್ಯುತ್ ತಂತಿ ಸ್ಪರ್ಶಿಸಿ ಗೂಡ್ಸ್ ವಾಹನದ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹಾವೇರಿ ತಾಲೂಕಿನ ಕೂರಗುಂದ ಗ್ರಾಮದಲ್ಲಿ ನಡೆದಿದೆ. ಶೇಬುಲ್ಲಾ 23 ವರ್ಷ ಮೃತ ಚಾಲಕ. ಮೃತ ಶೇಬುಲ್ಲಾ, ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ಗ್ರಾಮದ ನಿವಾಸಿಯಾಗಿದ್ದಾನೆ.

ರೈತರ ಜಮೀನಿನಲ್ಲಿ ಹೂಕೋಸು ತುಂಬಿಕೊಂಡು ವಾಹನದ ಮೇಲೆ ಹತ್ತಿದ್ದ ವೇಳೆ ವಿದ್ಯುತ್ ಲೈನ್ ಸ್ಪರ್ಶಿಸಿ ದುರ್ಘಟನೆ ಸಂಭವಿಸಿದೆ. ಗುತ್ತಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
 

Follow Us:
Download App:
  • android
  • ios