ಬೆಂಗ್ಳೂರಲ್ಲಿ ಭರ್ಜರಿ ಭೇಟೆ: 2.86 ಕೋಟಿಯ ಡ್ರಗ್ಸ್ ಜಪ್ತಿ
ಐವರಿ ಕೋಸ್ಟ್ ದೇಶದ ತೋನೊ ಸೆಕಾ, ನೈಜೀರಿಯಾದ ಕ್ರೊಮೇರ್ ಜಾಬ್, ಅಬೂಬಕರ್, ರಾಮ್ ಬಂಧಿತರಾಗಿದ್ದು, ಆರೋಪಿಗಳಿಂದ ₹86 ಲಕ್ಷ ಮೌಲ್ಯದ 950 ಗ್ರಾಂ ಕೊಕೇನ್ ಹಾಗೂ ₹2 ಕೋಟಿ ಮೌಲ್ಯದ 2.24 ಕೇಜಿ ಎಂಡಿಎಂಎ ಜಪ್ತಿ
ಬೆಂಗಳೂರು(ಏ.06): ರಾಜಧಾನಿಯ ಡ್ರಗ್ಸ್ ದಂಧೆ ಮೇಲೆ ಭರ್ಜರಿ ಕಾರ್ಯಾಚರಣೆ ನಡೆಸಿರುವ ಸಿಸಿಬಿ ಹಾಗೂ ಸ್ಥಳೀಯ ಪೊಲೀಸರು, ಇಬ್ಬರು ವಿದೇಶಿ ಪ್ರಜೆಗಳು ಸೇರಿದಂತೆ ನಾಲ್ವರನ್ನು ಸೆರೆ ಹಿಡಿದು ₹2.86 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದಾರೆ. ಐವರಿ ಕೋಸ್ಟ್ ದೇಶದ ತೋನೊ ಸೆಕಾ, ನೈಜೀರಿಯಾದ ಕ್ರೊಮೇರ್ ಜಾಬ್, ಅಬೂಬಕರ್, ರಾಮ್ ಬಂಧಿತರಾಗಿದ್ದು, ಆರೋಪಿಗಳಿಂದ ₹86 ಲಕ್ಷ ಮೌಲ್ಯದ 950 ಗ್ರಾಂ ಕೊಕೇನ್ ಹಾಗೂ ₹2 ಕೋಟಿ ಮೌಲ್ಯದ 2.24 ಕೇಜಿ ಎಂಡಿಎಂಎ ಜಪ್ತಿಯಾಗಿದೆ.
ಬೊಮ್ಮನಹಳ್ಳಿ, ಚೆನ್ನಮ್ಮನಕೆರೆ ಅಚ್ಚುಕಟ್ಟು ಹಾಗೂ ದೇವನಹಳ್ಳಿ ವ್ಯಾಪ್ತಿಯಲ್ಲಿ ಸಿಸಿಬಿ ಹಾಗೂ ಸ್ಥಳೀಯ ಪೊಲೀಸರು ಪ್ರತ್ಯೇಕವಾಗಿ ದಾಳಿ ನಡೆಸಿ ಪೆಡ್ಲರ್‌ಗಳನ್ನು ಬಂಧಿಸಿದ್ದಾರೆ ಎಂದು ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.
ಡ್ರಗ್ಸ್ ತಗೊಂಡು ಲೈವ್ಗೆ ಬಂದ್ರಾ? ಅಂಬಾನಿ ಫಂಕ್ಷನ್ನಲ್ಲಿ ಕುಣಿಯಲು ಚಾರ್ಜ್ ಮಾಡಿದ್ರಾ? ಆಮೀರ್ ಹೇಳಿದ್ದೇನು?
ಸಿಸಿಬಿ ಆರೋಪಿ:
ಎರಡು ವರ್ಷಗಳ ಹಿಂದೆ ಬ್ಯುಸಿನೆಸ್ ವೀಸಾದಡಿ ಭಾರತಕ್ಕೆ ಬಂದಿದ್ದ ನೈಜೀರಿಯಾ ದೇಶದ ಸೆಕಾ, ಆರಂಭದಲ್ಲಿ ಮುಂಬೈ ಹಾಗೂ ದೆಹಲಿಯಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಿದ್ದ. ಆನಂತರ ಬೆಂಗಳೂರಿಗೆ ಆಗಮಿಸಿದ ಆತ, ಬೊಮ್ಮನಹಳ್ಳಿ ಸಮೀಪ ನೆಲೆಸಿದ್ದ. ಸುಲಭವಾಗಿ ಹಣ ಸಂಪಾದನೆಗೆ ಡ್ರಗ್ಸ್ ದಂಧೆಗಿಳಿದ ಸೆಕಾ, ತನ್ನ ಪರಿಚಿತರಿಗೆ ಆನ್‌ಲೈನ್ ಮೂಲಕ ಡ್ರಗ್ಸ್ ಮಾರುತ್ತಿದ್ದ. ಈ ಹಿಂದೆ ಡ್ರಗ್ಸ್ ಪ್ರಕರಣದಲ್ಲಿ ಆತನನ್ನು ಬಂಧಿಸಿ ಶಂಕರಪುರ ಪೊಲೀಸರು ಜೈಲಿಗೆ ಕಳುಹಿಸಿದ್ದರು. ನಂತರ ಜಾಮೀನು ಪಡೆದು ಹೊರಬಂದು ಮತ್ತೆ ಚಾಳಿಯನ್ನು ಸೆಕಾ ಮುಂದುವರೆಸಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಅಂತಾರಾಷ್ಟ್ರೀಯ ಮಟ್ಟದ ಡ್ರಗ್ಸ್ ಜಾಲದ ಜತೆ ನಂಟು ಹೊಂದಿದ್ದ ಸೆಕಾ, ಆ ಜಾಲದ ಮೂಲಕ ನಗರಕ್ಕೆ ಸಿಂಥೆಟಿಕ್ ಡ್ರಗ್ಸ್ ತರಿಸಿಕೊಳ್ಳುತ್ತಿದ್ದ. ಆನಂತರ ದುಬಾರಿ ಬೆಲೆಗೆ ಆತ ಮಾರಾಟ ಮಾಡುತ್ತಿದ್ದ. ಈ ಡ್ರಗ್ಸ್ ಸಂಗ್ರಹಕ್ಕಾಗಿ ಬೊಮ್ಮನಹಳ್ಳಿ ಬಳಿ ಕೊಠಡಿಗೆ ಬಾಡಿಗೆ ಪಡೆದಿದ್ದ. ಪೊಲೀಸರಿಗೆ ಅನುಮಾನ ಬರಬಾರದು ಎಂದು ಭಾವಿಸಿ ತನ್ನ ವಾಸವನ್ನು ಬೇರೆಡೆ ಮಾಡಿಕೊಂಡಿದ್ದ. ಇತ್ತೀಚೆಗೆ ಆತನ ಬಗ್ಗೆ ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಇನ್‌ಸ್ಪೆಕ್ಟರ್ ಶಿವರಾಜು ಅವರಿಗೆ ಸಿಕ್ಕಿತು. ಈ ಸುಳಿವು ಆಧರಿಸಿ ಕಾರ್ಯಾಚರಣೆಗಿಳಿದ ಸಿಸಿಬಿ ತಂಡ, ಆರೋಪಿಯನ್ನು ಬಂಧಿಸಿ ಆತನಿಂದ ಬಿಳಿ, ಹಳದಿ ಹಾಗೂ ಪಿಂಕ್ ಬಣ್ಣದ ₹2 ಕೋಟಿ ಮೌಲ್ಯದ ಎಂಡಿಎಂಎ ಅನ್ನು ಜಪ್ತಿ ಮಾಡಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಬೆಂಗ್ಳೂರಲ್ಲಿ ಡ್ರಗ್ ಮಾಫಿಯಾ: ಖಾಸಗಿ ವೈದ್ಯ ಸೇರಿ ನಾಲ್ವರು ಅರೆಸ್ಟ್
ಶಿಕ್ಷಣಕ್ಕಾಗಿ ಬಂದು ಡ್ರಗ್ಸ್ ದಂಧೆತ್ಯಾಗರಾಜನಗರದ ಬಿಬಿಎಂಪಿ ಮೈದಾನ ಸಮೀಪ ಡ್ರಗ್ಸ್ ಮಾರಾಟಕ್ಕೆ ಯತ್ನಿಸಿದ್ದ ಮತ್ತೊಬ್ಬ ನೈಜೀರಿಯಾ ಪ್ರಜೆ ಸಿ.ಕೆ.ಅಚ್ಚುಕಟ್ಟು ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಹೆಣ್ಣೂರು ನಿವಾಸಿ ಕ್ರೋಮೇರಾ ಬಂಧಿತನಾಗಿದ್ದು, ಆರೋಪಿಯಿಂದ ₹6.5 ಲಕ್ಷ ಮೌಲ್ಯದ 81 ಗ್ರಾಂ ಕೊಕೇನ್ ಜಪ್ತಿ ಮಾಡಲಾಗಿದೆ. ಶೈಕ್ಷಣಿಕ ವೀಸಾದಡಿ ಭಾರತಕ್ಕೆ ಬಂದ ಆತ, ಬಳಿಕ ಬೆಂಗಳೂರಿಗೆ ಬಂದು ನೆಲೆಸಿದ್ದ. ಕಳೆದ ಏಳೆಂಟು ವರ್ಷಗಳಿಂದ ನಗರದಲ್ಲಿ ಆತ ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದಾನೆ. ಈ ಹಿಂದೆ ಆತನನ್ನು ಬಂಧಿಸಿ ಇಂದಿರಾನಗರ ಪೊಲೀಸರು ಜೈಲಿಗೆ ಕಳುಹಿಸಿದ್ದರು. ಮತ್ತೆ ಡ್ರಗ್ಸ್ ದಂಧೆಯನ್ನು ಆತ ಶುರು ಮಾಡಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.
₹80 ಲಕ್ಷ ಕೊಕೇನ್ ಜಪ್ತಿ
ದೇವನಹಳ್ಳಿ ಪಟ್ಟಣದ ಪ್ರಸನ್ನ ರಸ್ತೆಯಲ್ಲಿ ಡ್ರಗ್ಸ್ ಮಾರಾಟಕ್ಕೆ ಯತ್ನಿಸಿದ್ದ ಮತ್ತಿಬ್ಬರು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಅಬೂಬಕರ್ ಹಾಗೂ ರಾಮ್ ಬಂಧಿತರಾಗಿದ್ದು, ಆರೋಪಿಗಳಿಂದ ₹80 ಲಕ್ಷ ಮೌಲ್ಯದ 850 ಕೊಕೇನ್ ಜಪ್ತಿ ಮಾಡಲಾಗಿದೆ.