Asianet Suvarna News Asianet Suvarna News

ಬೆಂಗಳೂರು: ಹವಾ ಸೃಷ್ಟಿಸಲು ಹಲ್ಲೆ ಮಾಡಿದ್ದ ಯುವಕನ ಕೊಂದ ನಾಲ್ವರು ಅರೆಸ್ಟ್‌

ಜೀವನಹಳ್ಳಿಯ ಅರುಣ್ ಕುಮಾರ್, ಜಾನ್ ಜಾಕೋಬ್ ಆ್ಯಂಡೋ, ಪ್ರಶಾಂತ್, ಸಂಜೀವ್ ಬಂಧಿತರು. ಆರೋಪಿಗಳು ಜೂ.29ರಂದು ರಾತ್ರಿ ಜೀವನಹಳ್ಳಿ ರೈಲ್ವೆ ಹಳಿ ಬಳಿ ಕುರುಬರಹಳ್ಳಿ ನಿವಾಸಿ ವಿಶ್ಲೇಶ್ ಎಂಬಾತನ ಮೇಲೆ ಚಾಕುವಿನಿಂದ ಇರಿದು ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ಪರಾರಿ ಆಗಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ತನಿಖೆ ಕೈಗೊಂಡು ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. 

Four Arrested For Young Man Murder Case in Bengaluru grg
Author
First Published Jul 2, 2024, 8:48 AM IST

ಬೆಂಗಳೂರು(ಜು.02):  ಇತ್ತೀಚೆಗೆ ಜೀವನಹಳ್ಳಿ ರೈಲ್ವೆ ಹಳಿ ಬಳಿ ನಡೆದಿದ್ದ ವಿಫ್ಟ್ಸ್ ಅಲಿಯಾಸ್ ಅಪ್ಪು(34) ಎಂಬಾತನ ಕೊಲೆ ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ಪುಲಕೇಶಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಜೀವನಹಳ್ಳಿಯ ಅರುಣ್ ಕುಮಾರ್, ಜಾನ್ ಜಾಕೋಬ್ ಆ್ಯಂಡೋ, ಪ್ರಶಾಂತ್, ಸಂಜೀವ್ ಬಂಧಿತರು. ಆರೋಪಿಗಳು ಜೂ.29ರಂದು ರಾತ್ರಿ ಜೀವನಹಳ್ಳಿ ರೈಲ್ವೆ ಹಳಿ ಬಳಿ ಕುರುಬರಹಳ್ಳಿ ನಿವಾಸಿ ವಿಶ್ಲೇಶ್ ಎಂಬಾತನ ಮೇಲೆ ಚಾಕುವಿನಿಂದ ಇರಿದು ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ಪರಾರಿ ಆಗಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ತನಿಖೆ ಕೈಗೊಂಡು ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿ ಗಳು ತಿಳಿಸಿದ್ದಾರೆ.

ಸೋದರನ ಬೆಡ್‌ ಮೇಲೆ ಅತ್ತಿಗೆ ಜೊತೆಯೇ ಸಂಬಂಧ ಬೆಳಸಿದ ನಾದಿನಿ

ಕೊಲೆಯಾದ ಅಪ್ಪು ಈ ಹಿಂದೆ ಜೀವನಹಳ್ಳಿ ಕೊಳಗೇರಿಯಲ್ಲಿ ನೆಲೆಸಿದ್ದ. ಏರಿಯಾದಲ್ಲಿ ಪ್ರಾಬಲ್ಯ ಸಾಧಿಸಲು ಏರಿಯಾದ ಹುಡುಗರ ಮೇಲೆ ವಿನಾಕಾರಣ ಹಲ್ಲೆ ಮಾಡುತ್ತಿದ್ದ. ಅದರಂತೆ ಇತ್ತೀಚೆಗೆ ಆರೋಪಿಗಳಾದ ಅರುಣ್ ಕುಮಾರ್ ಮತ್ತು ಜಾನ್ ಜಾಕೋಬ್ ಮೇಲೆ ಹಲ್ಲೆ ಮಾಡಿದ್ದ. ಸುಖಾಸುಮ್ಮನೆ ತಮ್ಮ ಹಲ್ಲೆ ಮಾಡಿದ್ದಕ್ಕೆ ಅರುಣ್ ಮತ್ತು ಜಾನ್ ಕೋಪಗೊಂಡಿದ್ದರು. ಅಪ್ಪು ಮೇಲೆ ದ್ವೇಷ ಸಾಧಿಸುತ್ತಿದ್ದರು. ಕೊಲೆಯಾದ ಅಪ್ಪು ವಿರುದ್ಧ ಈ ಹಿಂದೆ ಪುಲಕೇಶಿನಗರ ಠಾಣೆ ಪೊಲೀಸರು ಮಾದಕವಸ್ತು ಮಾರಾಟದ ಆರೋಪದಡಿ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು.

ಹಲ್ಲೆ ಮಾಡಿದ್ದಕ್ಕೆ ದ್ವೇಷ

ರೈಲ್ವೆ ಹಳಿ ಬಳಿ ಮೃತದೇಹ ಬಿದ್ದಿರುವ ಬಗ್ಗೆ ಸ್ಥಳೀ ಯರು ನೀಡಿದ ಮಾಹಿತಿ ಮೇರೆಗೆ ಪುಲಕೇಶಿನಗರ ಠಾಣೆ ಪೊಲೀಸರು ಪರಿಶೀಲಿಸಿದ್ದರು. ಪ್ರಕರಣ ದಾಖ ಲಿಸಿಕೊಂಡು ಆರೋಪಿಗಳ ಪತ್ತೆಗೆ ಮುಂದಾಗಿದ್ದ ಪೊಲೀಸರು ಈಗ ನಾಲ್ವರು ಆರೋಪಿಗಳನ್ನು ಬಂಧಿಸಿ ದ್ದಾರೆ. ಸುಖಾ ಸುಮ್ಮನೆ ತಮ್ಮ ಮೇಲೆ ಹಲ್ಲೆ ಮಾಡಿದ್ದ ಕ್ಕಾಗಿ ವಿಶ್ಲೇಶ್ ಅಲಿಯಾಸ್ ಅಪ್ಪುನನ್ನು ಕೊಲೆ ಮಾಡಿ ದ್ದಾಗಿ ಆರೋಪಿಗಳು ವಿಚಾರಣೆ ವೇಳೆ ತನ್ನೊಪ್ಪಿಕೊಂಡಿ ದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅವನದ್ದೇ ಚಾಕು ಕಿತ್ತು ಇರಿತ

ಅಪ್ಪು ಕಳೆದ ಶನಿವಾರ ಮಧ್ಯಾಹ್ನ ಜೀವನಹಳ್ಳಿಗೆ ಬಂ ದಿದ್ದ ಅಪ್ಪು ಮತ್ತೆ ಮತ್ತೆ ಅರುಣ್ ಮತ್ತು ಜಾನ್ ಜತೆಗೆ ಕಿರಿಕ್ ತೆಗೆದು ಗಲಾಟೆ ಮಾಡಿ ಹೋಗಿದ್ದ. ರಾತ್ರಿ ಮತ್ತೆ ಜೀವನ ಹಳ್ಳಿಯ ರೈಲ್ವೆ ಹಳಿ ಬಳಿ ಬಂದಿದ್ದ ಅಪ್ಪು, ಅರುಣ್, ಜಾನ್ ಸೇರಿ ನಾಲ್ವರ ಜತೆಗೆ ಗಲಾಟೆ ಮಾಡಿದ್ದ. ಇದರಿಂದ ಕೆರಳಿದ ಆರೋಪಿಗಳು ಅಪ್ಪು ಬಳಿ ಇದ್ದ ಚಾಕು ವನ್ನೇ ಕಿತ್ತುಕೊಂಡು ಹೊಟ್ಟೆ, ಎದೆ ಭಾಗಕ್ಕೆ ಹಲವು ಬಾರಿ ಇರಿದ್ದರು. ಕಲ್ಲನ್ನು ಅಪ್ಪು ತಲೆ ಮೇಲೆ ಎತ್ತಿಹಾಕಿದ್ದರು.

Latest Videos
Follow Us:
Download App:
  • android
  • ios