ಶಿವಮೊಗ್ಗ: ದರೋಡೆಗೆ ಹೊಂಚು ಹಾಕಿದ್ದ ನಾಲ್ವರ ಸೆರೆ, ಅಪಾಯ ತಪ್ಪಿಸಿದ ಪೊಲೀಸರು

ಎನ್.ಟಿ. ರಸ್ತೆಯ ಫಲಕ್ ಶಾದಿ ಮಹಲ್‌ ಪಕ್ಕದಲ್ಲಿ ನಾಲ್ಕೈದು ಜನ ಯುವಕರ ಗುಂಪೊಂದು ಭಾರಿ ಅನಾಹುತ ಸೃಷ್ಠಿಸಲು ಮುಂದಾಗಿತ್ತು‌. ಎನ್.ಟಿ. ರಸ್ತೆಯ ಫಲಕ್ ಶಾದಿ ಮಹಲ್‌ನ ಪಕ್ಕದ ಖಾಲಿ ಜಾಗದಲ್ಲಿ, ಹೊಂದಿಕೊಂಡಿರುವ ರಸ್ತೆಯಲ್ಲಿ ಓಡಾಡುವ ಜನರು ಮತ್ತು ವಾಹನಗಳನ್ನು ತಡೆದು ದರೋಡೆಗೆ ಹೊಂಚು ಹಾಕುತ್ತಿದ್ದರು.
 

Four Arrested for Plan to Robbery in Shivamogga grg

ಶಿವಮೊಗ್ಗ(ನ.15):  ದರೋಡೆಗೆ ಸ್ಕೆಚ್ ಹಾಕಿ ನಿಂತಿದ್ದ ಯುವಕರನ್ನ ದೊಡ್ಡಪೇಟೆ ಪೊಲೀಸರು ಬಂಧಿಸಿ, 2 ಸ್ಟೀಲ್ ಡ್ರಾಗನ್, ಕಬ್ಬಿಣದ ರಾಡು ಹಾಗೂ ಲಾಂಗ್‌ ವಶಪಡಿಸಿಕೊಂಡಿದ್ದಾರೆ. ಹೋಟೆಲ್ ಕಾರ್ಮಿಕ, ಭದ್ರಾವತಿ ತಾಲೂಕಿನ ಬಾಬಳ್ಳಿ ಗ್ರಾಮದ ದೇವರಾಜ್ (31), ಕೋಟೆಗಂಗೂರಿನ ಸಾಗರ್ ಯಾನೆ ಶಬರೀಶ್ (22), ಭದ್ರಾವತಿ ಎಪಿಎಂಸಿ ಅಡಕೆ ಮಂಡಿಯಲ್ಲಿ ಕೆಲಸ ಮಾಡಿಕೊಂಡಿದ್ದ ನಾಗರಾಜ್ ಯಾನೆ ಕುಮಾರ (38), ರಾಗಿಗುಡ್ಡದ ಶೇಯಸ್ (22) ಬಂಧಿತ ಆರೋಪಿಗಳು. ಕೋಟೆಗಂಗೂರಿನ ಸಂತೋಷ್ ಎಂಬಾಂತ ತಲೆಮರೆಸಿಕೊಂಡಿದ್ದಾನೆ.

ನಗರದ ಎನ್.ಟಿ. ರಸ್ತೆಯ ಫಲಕ್ ಶಾದಿ ಮಹಲ್‌ ಪಕ್ಕದಲ್ಲಿ ನಾಲ್ಕೈದು ಜನ ಯುವಕರ ಗುಂಪೊಂದು ಭಾರಿ ಅನಾಹುತ ಸೃಷ್ಠಿಸಲು ಮುಂದಾಗಿತ್ತು‌. ಎನ್.ಟಿ. ರಸ್ತೆಯ ಫಲಕ್ ಶಾದಿ ಮಹಲ್‌ನ ಪಕ್ಕದ ಖಾಲಿ ಜಾಗದಲ್ಲಿ, ಹೊಂದಿಕೊಂಡಿರುವ ರಸ್ತೆಯಲ್ಲಿ ಓಡಾಡುವ ಜನರು ಮತ್ತು ವಾಹನಗಳನ್ನು ತಡೆದು ದರೋಡೆಗೆ ಹೊಂಚು ಹಾಕುತ್ತಿದ್ದರು.

ಮಂಡ್ಯ ಜಿಲ್ಲೆಯನ್ನು ಬೆಚ್ಚಿಬೀಳಿಸಿದ ಅಪ್ರಾಪ್ತೆಯ ಗ್ಯಾಂಗ್‌ರೇಪ್, ಮೂವರು ಕಿರಾತಕರು ಬಂಧನ

ಈ ಬಗ್ಗೆ ಮಾಹಿತಿ ಹಿನ್ನಲೆ ಪಿಎಸ್‌ಐ ವಸಂತ್ ಸ್ಥಳಕ್ಕೆ ತೆರಳಿ ಪರಿಶೀಲಿಸಿದರು. ಆಗ ನಾಲೈದು ಜನರು ಅಪಾಯಕರವಾದ ಆಯುಧಗಳನ್ನು ಹಿಡಿದು, ಸುಲಿಗೆ ಉದ್ದೇಶದಿಂದ ಹೊಂಚು ಹಾಕುತ್ತಿರುವುದು ತಿಳಿದುಬಂದಿದೆ. ಈ ಸಂದರ್ಭ ಆಯುಧಗಳ ಸಮೇತ 4 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇವರಲ್ಲಿ ಓರ್ವ ತಪ್ಪಿಸಿಕೊಂಡಿದ್ದಾನೆ. ಹಣದ ಆಸೆಗೆ ಈ ರೀತಿ ಕೃತ್ಯ ಮಾಡಿದ್ಯಾಗಿ ವಿಚಾರದಲ್ಲಿ ಆರೋಪಿಗಳು ಬಾಯಿ ಬಿಟ್ಟಿದ್ದಾರೆ. ಬಂಧಿತರಿಂದ ಕಬ್ಬಿಣದ ರಾಡು, ಮರದ ಹಿಡಿ ಇರುವ ಮಚ್ಚು, 50 ಗ್ರಾಂ ತೂಕದ ಖಾರದ ಪುಡಿ ಇರುವ ಕವರ್‌, 2 ಸ್ಟೀಲ್ ಡ್ರಾಗನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

Latest Videos
Follow Us:
Download App:
  • android
  • ios