Asianet Suvarna News Asianet Suvarna News

ಮಂಡ್ಯ ಜಿಲ್ಲೆಯನ್ನು ಬೆಚ್ಚಿಬೀಳಿಸಿದ ಅಪ್ರಾಪ್ತೆಯ ಗ್ಯಾಂಗ್‌ರೇಪ್, ಮೂವರು ಕಿರಾತಕರು ಬಂಧನ

ಮಂಡ್ಯ ಜಿಲ್ಲೆಯನ್ನು ಬೆಚ್ಚಿ ಬೀಳಿಸಿದ  17 ವರ್ಷದ ಅಪ್ರಾಪ್ತೆ ಮೇಲೆ ನಡೆಸಿದ ಸಾಮೂಹಿಕ ಅತ್ಯಾಚಾರ ಘಟನೆಗೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ.

minor girl Gangrape three accused arrested in mandya gow
Author
First Published Nov 10, 2023, 12:42 PM IST

ಮದ್ದೂರು (ನ.10): ಮಂಡ್ಯ ಜಿಲ್ಲೆಯನ್ನು ಬೆಚ್ಚಿ ಬೀಳಿಸಿದ  17 ವರ್ಷದ ಅಪ್ರಾಪ್ತೆ ಮೇಲೆ ನಡೆಸಿದ ಸಾಮೂಹಿಕ ಅತ್ಯಾಚಾರ ಘಟನೆಗೆ ಸಂಬಂಧಿಸಿದಂತೆ ಮೂವರನ್ನು  ಬಂಧಿಸಲಾಗಿದೆ. ಮದ್ದೂರು ಪಟ್ಟಣ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಅಪ್ರಾಪ್ತೆಯನ್ನು ಪುಸಲಾಯಿಸಿ ಕರೆತಂದು ಈ ಕೃತ್ಯ ಎಸಗಲಾಗಿತ್ತು. ಅತ್ಯಾಚಾರ ಮಾಡಿದ್ದನ್ನು ವಿಡಿಯೋ ಚಿತ್ರೀಕರಿಸಿದ್ದ ಕಿರಾತಕರು ಬಳಿಕ ವೈರಲ್ ಮಾಡಿದ್ದರು. ನವೆಂಬರ್‌ 4 ರಂದು ನಡೆದಿದ್ದ ಘಟನೆ ವಿಡಿಯೋ ವೈರಲ್ ಆದ ಬಳಿಕ ಘಟನೆ ಬೆಳಕಿಗೆ ಬಂದಿತ್ತು. 

ಸಂತ್ರಸ್ತೆ ಪೋಷಕರ ದೂರಿನ ಆಧಾರದ ಮೇಲೆ  ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಮೂವರು ಕೂಡ ಮದ್ದೂರು ತಾಲೂಕಿನವರಾಗಿದ್ದು, ಲವ್ ಮಾಡುವುದಾಗಿ ನಂಬಿಸಿ ಸಲುಗೆ ಬೆಳೆಸಿಕೊಂಡ ಬಳಿಕ ನವೆಂಬರ್ 4 ರಂದು ಮದ್ದೂರಿನ ಲಾಡ್ಜ್ ಗೆ ಕರೆದುಕೊಂಡು ಹೋಗಿ ಸಾಮೂಹಿಕ ಆತ್ಯಾಚಾರ ಮಾಡಿದ್ದರು.

ಜಿಮ್‌ನಲ್ಲಿ ಭಾರತೀಯ ಮೂಲದ ಅಮೆರಿಕ ವಿದ್ಯಾರ್ಥಿ ಮೇಲೆ ಹಲ್ಲೆ, ಚಿಕಿತ್ಸೆ ಫಲಕಾರಿಯಾಗದೆ ಸಾವು!

ಈ ವೇಳೆ ಆತ್ಯಾಚಾರ ಮಾಡುತ್ತಿರುವ ವಿಡಿಯೋ ಮಾಡಿಕೊಂಡಿದ್ದ ಕಿರಾತಕರು ಬಳಿಕ ಅಪ್ರಾಪ್ತೆ ಮೊಬೈಲ್ ಗೆ ಕಳುಹಿಸಿ ಬೆದರಿಕೆ ಹಾಕಿದ್ದರು. ಕರೆದಾಗೆಲ್ಲ ಬರುವಂತೆ ಬ್ಲಾಕ್ ಮೇಲ್ ಮಾಡಿದ್ದರು. ಈ ಬಗ್ಗೆ ಅಪ್ರಾಪ್ತೆ ಪೋಷಕರ ಬಳಿ ಹೇಳಿಕೊಂಡಿದ್ದಳು. ಈ ಹಿನ್ನೆಲೆ ಅಪ್ರಾಪ್ತೆ ಪೋಷಕರಿಂದ ದೂರು ದಾಖಲಾಗಿದ್ದು, ದೂರಿನ ಅನ್ವಯ ಮೂವರನ್ನು ಬಂಧಿಸಿ ಆತ್ಯಾಚಾರ, ಪೋಕ್ಸೊ, ಆಟ್ರಾಸಿಟಿ ಸೆಕ್ಷನ್ ಅಡಿ‌ ಕೇಸ್ ದಾಖಲು ಮಾಡಲಾಗಿದೆ.

ಪುತ್ತೂರು: ‘ಕಲ್ಲೇಗ ಟೈಗರ್ಸ್’ ತಂಡ ಮುಖ್ಯಸ್ಥ ಯುವಕನ ಕಗ್ಗೊಲೆ

ಬಂಧಿತರನ್ನು ಗುರುತಿಸಲಾಗಿದ್ದು, ಎ1 ಪುನೀತ್‌, ಎ2 ಮಂಜುನಾಥ್, ಎ3  ಸಿದ್ದರಾಜು ಬಂಧಿತ ಆರೋಪಿಗಳು. ಮೂವರು ಕೂಡ ಮದ್ದೂರು ತಾಲೂಕಿನವರು. ಇದರಲ್ಲಿ ಓರ್ವ ಆರೋಪಿ ಆಕೆಯ ಕ್ಲಾಸ್‌ಮೆಟ್‌. ಪಾರ್ಟಿ ಮಾಡೋಣ ಎಂದು ನಂಬಿಸಿ ಬಳಿಕ ಸ್ನೇಹಿತರ ಜೊತೆ ಸೇರಿ ಲಾಡ್ಜ್‌ನಲ್ಲಿ ಸಾಮೂಹಿಕ ಅತ್ಯಾಚಾರ ಮಾಡಿದ್ದನು. ವಿಡಿಯೋ ವೈರಲ್‌ ಆದ ಬಳಿಕ ಇಡೀ ಮಂಡ್ಯ ಜಿಲ್ಲೆ  ಘಟನೆ ಬಗ್ಗೆ ಬೆಚ್ಚಿ ಬಿದ್ದಿತ್ತು. ಆರೋಪಿಗಳಲ್ಲಿ ಇಬ್ಬರು ಅಪ್ರಾಪ್ತರೆಂದು ಹೇಳಲಾಗುತ್ತಿದೆ.

Follow Us:
Download App:
  • android
  • ios