* ಪಾರ್ಟಿಯಲ್ಲಿ ಮೊಬೈಲ್ ಎಗರಿಸುತ್ತಿದ್ದ ಖತರ್ನಾಕ್ ಕಳ್ಳರು * ಮಹದೇವಪುರ ಪೊಲೀಸರ ಬಲೆಗೆ* ಗೇಟಲ್ಲೇ ಕಳ್ಳರಿಗೆ ಖೆಡ್ಡಾ
ಬೆಂಗಳೂರು(ಮಾ.24): ಹೈಫೈ ಡಿಜೆ ಪಾರ್ಟಿಗಳಿಗೆ ಟಾಕುಠೀಕಾಗಿ ಉಡುಪು ಹಾಕಿಕೊಂಡು ವಿಲಾಸಿಗಳ ಸೋಗಿನಲ್ಲಿ ತೆರಳಿ ಮೊಬೈಲ್(Mobile) ಎಗರಿಸುತ್ತಿದ್ದ ಖತರ್ನಾಕ್ ಗ್ಯಾಂಗ್ ಮಹದೇವಪುರ ಠಾಣೆ ಪೊಲೀಸರಿಗೆ(Police) ಸಿಕ್ಕಿಬಿದ್ದಿದೆ.
ಉತ್ತರ ಪ್ರದೇಶದ(Uttar Pradesh) ಗಾಜಿಯಾಬಾದ್‌ನ ಸದ್ದಾಂ, ದೆಹಲಿ ವಸೀಂ ಅಹಮ್ಮದ್, ಮಹಮ್ಮದ್ ಆದೀಲ್ ಹಾಗೂ ಇರ್ಷಾದ್ ಬಂಧಿತರು(Arrest). ಆರೋಪಿಗಳಿಂದ(Accused) 24 ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ. ಇತ್ತೀಚಿಗೆ ಮಹದೇವಪುರದ ಫೀನಿಕ್ಸ್ ಮಾರ್ಕೆಟ್ ಸಿಟಿ ಮಾಲ್‌ನಲ್ಲಿ ನಡೆದ ಹೋಳಿ ಹಬ್ಬದಲ್ಲಿ ಕೈ ಚಳಕ ತೋರಿಸಿ ಈ ನಾಲ್ವರು ಖಾಲಿ ಬಲೆಗೆ ಬಿದ್ದಿದ್ದಾರೆ. ಈ ವೇಳೆ ತಪ್ಪಿಸಿಕೊಂಡಿರುವ ಮತ್ತೊಬ್ಬ ಆರೋಪಿ ಪತ್ತೆಗೆ ತನಿಖೆ ನಡೆದಿದೆ ಎಂದು ವೈಟ್‌ಫೀಲ್ಡ್ ವಿಭಾಗದ ಡಿಸಿಪಿ ಎಸ್.ಗಿರೀಶ್ ತಿಳಿಸಿದ್ದಾರೆ.
Mangaluru: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವೇಶ್ಯಾವಾಟಿಕೆಯಲ್ಲಿ ಅರೆಸ್ಟ್..!
ದೆಹಲಿಯಿಂದ ಬಂದಿದ್ರು:
ತಮ್ಮೂರಿನಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ ಆರೋಪಿಗಳು, ಸುಲಭವಾಗಿ ಹಣ ಸಂಪಾದನೆಗೆ ಪೇಜ್ ತ್ರಿ ಹಾಗೂ ಡಿಜೆ ಸೇರಿದಂತೆ ಹೈ-ಫೈ ಪಾರ್ಟಿಗಳಲ್ಲಿ ಮೊಬೈಲ್ ಕಳ್ಳತನಕ್ಕಿಳಿದಿದ್ದರು(Theft). ಅಂತೆಯೇ ಮಹದೇವಪುರದ ಫೀನಿಕ್ಸ್ ಮಾರ್ಕೆಟ್‌ನ ಸಿಟಿ ಮಾಲ್‌ನಲ್ಲಿ ಮಾ.19ರಂದು ‘ಸನ್ ಬರ್ನ್ ಹೋಲಿ ವಿಕೆಂಡ್’ ಹೆಸರಿನಲ್ಲಿ ಡಿಜೆ ಸಂಗೀತ ಸಂಜೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಅಂತರಾಷ್ಟ್ರೀಯ ಖ್ಯಾತ ಗಾಯಕ ಕಾಶ್ಮೀರ್ ಅತಿಥಿಯಾಗಿದ್ದರು. ಅಲ್ಲದೆ ಕಾರ್ಯಕ್ರಮದಲ್ಲಿ 2-3 ಸಾವಿರ ಯುವಕ-ಯುವತಿಯರು ಪಾಲ್ಗೊಳ್ಳುವವರಿದ್ದರು. ಈ ಡಿಜೆ ಕಾರ್ಯಕ್ರಮ ಬಗ್ಗೆ ಆನ್‌ಲೈನ್‌ನಲ್ಲಿ ತಿಳಿದುಕೊಂಡಿದ್ದ ಆರೋಪಿಗಳು, ಅಲ್ಲಿ ಮೊಬೈಲ್ ಕಳ್ಳತನಕ್ಕೆ ಸಂಚು ರೂಪಿಸಿದ್ದರು.
2 ತಾಸಲ್ಲಿ 10 ಲಕ್ಷದ ಮೊಬೈಲ್ ಕಳವು:
ಅಂತೆಯೇ ಆನ್‌ಲೈನ್‌ನಲ್ಲಿ ಕಾರ್ಯಕ್ರಮದ ಟಿಕೆಟ್ ಖರೀದಿಸಿದ ಆರೋಪಿಗಳು, ಅಂದು ಸಂಜೆ 5 ಗಂಟೆಗೆ ದೆಹಲಿಯಿಂದ ನಿಜಾಮುದ್ದೀನ್ ರಾಜಧಾನಿ ಎಕ್ಸ್‌ಪ್ರೆಸ್ ರೈಲಿನಲ್ಲಿ ನಗರಕ್ಕೆ ಬಂದಿದ್ದರು. ಬಳಿಕ ಛದ್ಮ ಪೋಷಾಕು ಧರಿಸಿದ ಆರೋಪಿಗಳು, ತಾವು ಹೋಳಿ ಹಬ್ಬದ ಸಂಭ್ರಮಕ್ಕೆ ಬಂದಿರುವವರಂತೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಅವರ ವೇಷಭೂಷಣವು ಶ್ರೀಮಂತರಂತೆ ಬಿಂಬಿತವಾಗಿದ್ದರಿಂದ ಜನರಿಗೆ ಅನುಮಾನ ಬಂದಿಲ್ಲ. ಆಗ ಡಿಜೆ ಸಂಗೀತಕ್ಕೆ ಮೈ ಮರೆತು ಕುಣಿದು ಕುಪ್ಪಳಿಸುತ್ತಿದ್ದ ಯುವಕ-ಯುವತಿಯರ ಮೊಬೈಲ್‌ಗಳನ್ನು ಆರೋಪಿಗಳು ಎಗರಿಸಿದ್ದರು. ಎರಡು ತಾಸಿನಲ್ಲೇ ಸುಮಾರು 10 ಲಕ್ಷ ರು. ಮೌಲ್ಯದ 24 ಮೊಬೈಲ್‌ಗಳು ಕಳ್ಳತನವಾಗಿದ್ದವು ಎಂದು ಪೊಲೀಸರು ಹೇಳಿದ್ದಾರೆ.
Hassan: ದಂತಕ್ಕಾಗಿ ಕಾಡಾನೆ ಹತ್ಯೆ: ಮೂವರ ಬಂಧನ
ಗೇಟಲ್ಲೇ ಕಳ್ಳರಿಗೆ ಖೆಡ್ಡಾ
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವಿದ್ಯಾರಣ್ಯಪುರದ ಪ್ರವಣ್ ಎಂಬುವರ ಮೊಬೈಲ್ ಕಳುವಾಗಿತ್ತು. ರಾತ್ರಿ 8.30ರ ವೇಳೆಗೆ ಮಹದೇವಪುರ ಠಾಣೆಗೆ ತೆರಳಿದ ಪ್ರಣವ್, ಪಾರ್ಟಿಯಲ್ಲಿ ತನ್ನ ಸ್ಯಾಮ್‌ಸಾಂಗ್(Samsung) ಎಸ್21+ ಮೊಬೈಲ್ ಕಳ್ಳತನವಾಗಿದೆ ಎಂದು ದೂರು ಸಲ್ಲಿಸಿದ್ದ. ಅಲ್ಲದೆ, ಡಿಜೆ ಸಂಗೀತ ಕಾರ್ಯಕ್ರಮದಲ್ಲೇ ಮೊಬೈಲ್ ಕಳ್ಳತನವಾಗಿದ್ದು, ನನ್ನಂತೆ ಕಾರ್ಯಕ್ರಮಕ್ಕೆ ಬಂದಿರುವ ಇನ್ನು ಕೆಲವರ ಮೊಬೈಲ್ ಕಳ್ಳತನವಾಗಿದೆ ಎಂದಿದ್ದರು.
ಈ ದೂರು ಸ್ವೀಕರಿಸಿದ ಕೂಡಲೇ ಎಫ್‌ಐಆರ್(FIR) ದಾಖಲಿಸಿ ಇನ್ಸ್‌ಪೆಕ್ಟರ್ ಹರಿಯಪ್ಪ ಮತ್ತು ಸಬ್ ಇನ್ಸ್‌ಪೆಕ್ಟರ್ ಸರೋಜಿನಿ ವಾಗ್ಮೋರೆ ನೇತೃತ್ವದ ತಂಡವು ಕಾರ್ಯಾಚರಣೆಗೆ ಇಳಿದಿತ್ತು. ಡಿಜೆ ಕಾರ್ಯಕ್ರಮ ಮುಗಿಸಿ ಹೊರ ಹೋಗಲು ಒಂದೇ ಗೇಟ್ ಇತ್ತು. ಆ ಗೇಟ್‌ನಲ್ಲಿ ನಿಂತು ಪ್ರತಿಯೊಬ್ಬರನ್ನು ತಪಾಸಣೆ ನಡೆಸಿ ಹೊರಬಿಡುವಾಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ವಿಚಾರಣೆ ವೇಳೆ ನಾಲ್ವರು ತಪ್ಪೊಪ್ಪಿಕೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಆಟೋದಲ್ಲಿ ಹಿಂಬಾಲಿಸಿ ದರೋಡೆ ಮಾಡುತ್ತಿದ್ದ ಖದೀಮರ ಸೆರೆ
ಬೆಂಗಳೂರು(ಮಾ.22): ಆಟೋದಲ್ಲಿ ಹಿಂಬಾಲಿಸಿ ನಡೆದು ಹೋಗುವವರನ್ನು ಅಡ್ಡಗಟ್ಟಿ ದರೋಡೆ(Robbery) ಮಾಡುತ್ತಿದ್ದ ಇಬ್ಬರು ಕುಖ್ಯಾತ ದರೋಡೆಕೋರರನ್ನು ಸಂಪಿಗೆಹಳ್ಳಿ ಠಾಣೆ ಪೊಲೀಸರು(Police) ಬಂಧಿಸಿದ್ದಾರೆ. ಶಿವಾಜಿನಗರ ಮಹಮ್ಮದ್ ಅರ್ಬಾಜ್(24) ಮತ್ತು ಥಣಿಸಂದ್ರದ ಸೈಯದ್ ಅರ್ಬಾಜ್(24) ಬಂಧಿತರು(Arrest). ಆರೋಪಿಗಳಿಂದ(Accused) ಚಿನ್ನದ ಸರ, ಬೆಳ್ಳಿಯ ಸರ, ಒಂದು ಮೊಬೈಲ್, ಕೃತ್ಯಕ್ಕೆ ಬಳಸಿದ್ದ ಆಟೋರಿಕ್ಷಾ ಸೇರಿದಂತೆ ಒಟ್ಟು 2.15 ಲಕ್ಷ ರು. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
