ರಾಮನಗರ: ಮನೆಗಳ್ಳತನ ಮಾಡುತ್ತಿದ್ದ ನಾಲ್ವರು ಆರೋಪಿಗಳ ಬಂಧನ
ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕು ಮತ್ತೋಡು ಹೋಬಳಿ ಗಂಜಿಗೆರೆಯ ರವಿ, ರಂಗನಾಥ, ಶಿವ ಹಾಗೂ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕು ಮುಷ್ಟಿಗೆರೆ ವಾಸಿ ವಿಠಲ ಬಾಳಪ್ಪ ಪದಜಂತಿ ಬಂಧಿತರು.
ಕುದೂರು(ಫೆ.24): ಮನೆಗಳ್ಳತನ ಪ್ರಕರಣದಲ್ಲಿ 4 ಆರೋಪಿಗಳನ್ನು ಬಂಧಿಸಿರುವ ಕುದೂರು ಠಾಣೆ ಪೊಲೀಸರು 5.80 ಲಕ್ಷ ರು. ಮೌಲ್ಯದ ಚಿನ್ನಾಭರಣ ವಶ ಪಡಿಸಿಕೊಂಡಿದ್ದಾರೆ. ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕು ಮತ್ತೋಡು ಹೋಬಳಿ ಗಂಜಿಗೆರೆಯ ರವಿ, ರಂಗನಾಥ, ಶಿವ ಹಾಗೂ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕು ಮುಷ್ಟಿಗೆರೆ ವಾಸಿ ವಿಠಲ ಬಾಳಪ್ಪ ಪದಜಂತಿ ಬಂಧಿತರು.
ಫೆ.7ರಂದು ಆರೋಪಿಗಳು ಮಾಗಡಿ ತಾಲೂಕು ಸೋಲೂರು ಹೋಬಳಿ ಬಾಣವಾಡಿ ಗ್ರಾಮದಲ್ಲಿ 2 ಮನೆಗಳು ಮತ್ತು ಮೂಡಲಪಾಳ್ಯದಲ್ಲಿ ಒಂದು ಮನೆಯ ಬಾಗಿಲನ್ನು ಮುರಿದು ಬೀರುವಿನಲ್ಲಿದ್ದ ಸುಮಾರು 80 ಗ್ರಾಂ ಚಿನ್ನ, 500 ಗ್ರಾಂ ಬೆಳ್ಳಿ ಹಾಗೂ 45 ಸಾವಿರ ನಗದನ್ನು ಕಳ್ಳತನವಾಗಿತ್ತು. ಈ ಪ್ರಕರಣದಲ್ಲಿ ಆರೋಪಿಗಳ ಪತ್ತೆಗಾಗಿ ಪೊಲೀಸ ವಿಶೇಷ ತಂಡ ರಚನೆ ಮಾಡಲಾಗಿತ್ತು. ಸದರಿ ತಂಡವು ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡು ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಸಾವಿನ ಹೆದ್ದಾರಿಯಾಗ್ತಿದೆ ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ ವೇ! ಭೀಕರ ಅಪಘಾತ ಸ್ಥಳದಲ್ಲೇ ಮೂವರ ದುರ್ಮರಣ!
ಆರೋಪಿಗಳಿಂದ ಒಂದು ಮಾಂಗಲ್ಯ ಸರ, ಒಂದು ನಕ್ಲೇಸ್, ಒಂದು ಜೊತೆ ಹ್ಯಾಂಗಿಗ್ಸ್, ಎರಡು ಉಂಗುರ, ಒಂದು ಚಿನ್ನದ ಸರ, ಒಂದು ಬೆಳ್ಳಿ ಸರ ಸೇರಿ ಒಟ್ಟು 64 ಗ್ರಾಂ ಚಿನ್ನ, ಸುಮಾರು 500 ಗ್ರಾಂ ತೂಕದ ಬೆಳ್ಳಿ ವಸ್ತುಗಳು ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಇಂಡಿಕಾ ಕಾರನ್ನು ಪೊಲೀಸರು ದಸ್ತಗಿರಿ ಮಾಡಿದ್ದಾರೆ.