*  ಮೇಖ್ರಿ ವೃತ್ತದ ಶೆಫ್‌ ಡಿಲೆಕ್ಸ್‌ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ನಲ್ಲಿ ನೃತ್ಯ*  ತಡರಾತ್ರಿವರೆಗೂ ಡಿಜೆ ಸಂಗೀತ*  ಗ್ರಾಹಕರಿಗೆ ಮದ್ಯ ಪೂರೈಕೆ 

ಬೆಂಗಳೂರು(ಮೇ.03): ರಾತ್ರಿ 10 ಗಂಟೆ ಬಳಿಕ ಜೋರಾಗಿ ಡಿಜೆ ಸಂಗೀತ(DJ Music) ಹಾಕಿಕೊಂಡು ಕಾನೂನು ಉಲ್ಲಂಘಿಸಿ ಯುವತಿಯರಿಂದ ಅಶ್ಲೀಲ ಡ್ಯಾನ್ಸ್‌(Dance) ಮಾಡಿಸುತ್ತಿದ್ದ ಆರೋಪದ ಮೇಲೆ ಮೇಖ್ರಿ ವೃತ್ತದ ‘ಶೆಫ್‌ ಡಿಲೆಕ್ಸ್‌ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌’ (Chef Delux Bar and Restaurant) ಮೇಲೆ ದಾಳಿ ಮಾಡಿರುವ ಸದಾಶಿವನಗರ ಠಾಣೆ ಪೊಲೀಸರು(Police) ನಾಲ್ವರು ನೌಕರರನ್ನು ಬಂಧಿಸಿದ್ದಾರೆ.

ಪಿ.ಜಿ.ಹಳ್ಳಿಯ ರವಿಕುಮಾರ್‌ ಜಿ. (49), ಚಿಕ್ಕಬೆಟ್ಟಹಳ್ಳಿಯ ರಾಘು ರಾಜನ್‌(27), ಆಂಧ್ರಪ್ರದೇಶದ ನೆಲ್ಲೂರು ಮೂಲದ ಡಿಜೆ ಮಲ್ಲಿಕಾರ್ಜುನ್‌ (36) ಹಾಗೂ ಮುನಿಯಪ್ಪ ಲೇಔಟ್‌ನ ಶೈಲೇಶ್‌ ರಾಘವ(37) ಬಂಧಿತ(Arrest) ನೌಕರರು. ಡ್ಯಾನ್ಸ್‌ ಬಾರ್‌ನ ಮಾಲಿಕ ರಮೇಶ್‌ ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ. ದಾಳಿ ವೇಳೆ ಡಿ.ಜೆ.ಮಿಕ್ಸರ್‌, ಸ್ಪೀಕರ್‌ಗಳು, ಒಂದು ಸಿಪಿಯು, ಕೀ ಬೋರ್ಡ್‌, ಡಿವಿಆರ್‌ಗಳು ಶೆಫ್‌ ಇನ್‌ ಡಿಲೆಕ್ಸ್‌ ಹೆಸರಿನ 50 ಮುಖ ಬೆಲೆಯ ಟೋಕನ್‌ ನೋಟ್‌ಗಳು, .12 ಸಾವಿರ ನಗದು ಹಾಗೂ ಎರಡು ಕ್ಯಾಶ್‌ ಕೌಂಟಿಂಗ್‌ ಮೆಷಿನ್‌ ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚಿಕ್ಕಮಗಳೂರು: ಆನೆ ದಂತದಲ್ಲಿ ಚೆಸ್ ಪಾನ್ ಕೆತ್ತನೆ, ಮಾರಾಟ ಮಾಡುವಾಗ ಸಿಕ್ಕಿಬಿದ್ದ

ಈ ಬಾರ್‌ನಲ್ಲಿ ಅಕ್ರಮ ಚಟುವಟಿಕೆ(Illegal Activity) ನಡೆಯುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಏ.30ರಂದು ರಾತ್ರಿ 11ಕ್ಕೆ ದಾಳಿ ಮಾಡಲಾಗಿದೆ. ಈ ವೇಳೆ ಬಾರ್‌ನಲ್ಲಿ ಜೋರಾಗಿ ಧ್ವನಿವರ್ಧಕ ಮತ್ತು ಡಿಸ್ಕೋ ಲೈಟ್ಸ್‌ಗಳನ್ನು ಅಳವಡಿಸಿ ಮಹಿಳೆಯರು ಅಸಭ್ಯ ರೀತಿ ಉಡುಪು ಧರಿಸಿ ನಾನಾ ರೀತಿಯಲ್ಲಿ ದೇಹ ಪ್ರದರ್ಶನ ಮಾಡಿಕೊಂಡು ಗ್ರಾಹಕರಿಗೆ(Customers) ಮದ್ಯ(Alcohol) ಪೂರೈಸುತ್ತಿದ್ದರು. ಅಷ್ಟೇ ಅಲ್ಲದೆ, ಹಾಲ್‌ ಮಧ್ಯೆ ನಿಂತು ಅಶ್ಲೀಲ ನೃತ್ಯ ಮಾಡುತ್ತಿದ್ದರು. ಪಾನಮತ್ತ ಕೆಲ ಗ್ರಾಹಕರು ಈ ಮಹಿಳೆಯರ ಮೇಲೆ ನೋಟುಗಳನ್ನು ಎಸೆದು ಅಶ್ಲೀಲ ಸನ್ನೆ ಮಾಡುತ್ತಿದ್ದರು. ಕೆಲ ಗ್ರಾಹಕರು ಆ ಮಹಿಳೆಯರೊಂದಿಗೆ ಡ್ಯಾನ್ಸ್‌ ಮಾಡುತ್ತಿರುವುದು ಕಂಡು ಬಂದಿತು. ಹೀಗಾಗಿ ಮ್ಯಾನೇಜರ್‌, ಡಿಜೆ ಸೇರಿ ನಾಲ್ವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸರಣಿ ಕಳ್ಳತನ: ಆರೋಪಿ ಬಂಧನ

ಹುಬ್ಬಳ್ಳಿ: ಇಲ್ಲಿನ ಎಪಿಎಂಸಿ ಯಾರ್ಡ್‌ನ ಮಳಿಗೆಗಳಲ್ಲಿ ಸರಣಿ ಕಳ್ಳತನ ಮಾಡಿದ ಆರೋಪಿಯನ್ನು ಎಪಿಎಂಸಿ ಠಾಣೆ ಪೊಲೀಸರು ಬಂಧಿಸಿದ್ದು, 2,160 ನಗದು, 5 ಗ್ರಾಂ ಬೆಳ್ಳಿ ನಾಣ್ಯ ವಶಪಡಿಸಿಕೊಂಡಿದ್ದಾರೆ. 

ಕಳೆದ ಒಂದೂವರೆ ತಿಂಗಳಲ್ಲಿ ಅಮರಗೋಳದ ಎಪಿಎಂಸಿ ಯಾರ್ಡ್‌ನÜಲ್ಲಿ ಒಟ್ಟು 5 ಅಂಗಡಿಗಳ ಕಳ್ಳತನ ನಡೆದಿದೆ. ಡಿಜಿಟಲ್‌ ಸಾಕ್ಷ್ಯದ ಅನ್ವಯ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಕಾರ್ಯಾಚರಣೆ ನಡೆಸಿದ ಎಪಿಎಂಸಿ ಠಾಣೆಯ ಪೊಲೀಸ್‌ ಇನ್‌ಸ್ಪೆಕ್ಟರ್‌ ಬಿ.ಎಸ್‌. ಮಂಟೂರ, ಸಿಬ್ಬಂದಿ ಕಾರ್ಯವನ್ನು ಹು-ಧಾ ಪೊಲೀಸ್‌ ಆಯುಕ್ತರು ಶ್ಲಾಘಿಸಿದ್ದಾರೆ.