ಕಾಡುಗೋಡಿಯ ಕಂಪನಿಯೊಂದರ ಕಚೇರಿ ಬೀಗ ಮುರಿದು 20 ಲ್ಯಾಪ್‌ಟಾಪ್‌ಗಳು, ವಾಷ್ ರೂಮ್ ಟ್ಯಾಪ್ ಗಳು ಸೇರಿದಂತೆ ಇತರೆ ವಸ್ತುಗಳನ್ನು ಕಳವು ಮಾಡಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ತನಿಖೆ ನಡೆಸಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.  

ಬೆಂಗಳೂರು(ಆ.17): ಬೀಗ ಹಾಕಿದ ಮನೆಗಳು ಹಾಗೂ ಕಚೇರಿಗಳ ಬೀಗ ಮುರಿದು ಕಳವು ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಕಾಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹಳೇ ಬೈಯಪ್ಪನಹಳ್ಳಿಯ ಅರುಣ್ (23), ಅಜಯ್ (24), ಪ್ರತಾಪ್ (25) ಹಾಗೂ ಸಾಯಿ ಅಲಿಯಾಸ್ ಅಪ್ಪು(25) ಬಂಧಿತರು. ಆರೋಪಿಗಳಿಂದ ₹4 ಲಕ್ಷ ಮೌಲ್ಯದ 24 ಗ್ರಾಂ ಚಿನ್ನಾಭರಣಗಳು, ದ್ವಿಚಕ್ರ ವಾಹನ ಹಾಗೂ ವಿವಿಧ ಕಂಪನಿಗಳ 11 ಲ್ಯಾಪ್ಟಾಪ್ ಜಪ್ತಿ ಮಾಡಲಾಗಿದೆ. 

ನಗರದಲ್ಲಿ ಕಳ್ಳತನ, ಕಾಡಿನಲ್ಲಿ ವಾಸ: ಐನಾತಿ ಕಳ್ಳನ ಬಂಧನ

ಇತ್ತೀಚೆಗೆ ಕಾಡುಗೋಡಿಯ ಕಂಪನಿಯೊಂದರ ಕಚೇರಿ ಬೀಗ ಮುರಿದು 20 ಲ್ಯಾಪ್‌ಟಾಪ್‌ಗಳು, ವಾಷ್ ರೂಮ್ ಟ್ಯಾಪ್ ಗಳು ಸೇರಿದಂತೆ ಇತರೆ ವಸ್ತುಗಳನ್ನು ಕಳವು ಮಾಡಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ತನಿಖೆ ನಡೆಸಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.