ಬೆಂಗಳೂರು(ಝ.05): ಹನಿಟ್ರ್ಯಾಪ್‌ ಮೂಲಕ ಶ್ರೀಮಂತ ವ್ಯಕ್ತಿಗಳಿಂದ ಲಕ್ಷಾಂತರ ರುಪಾಯಿ ಸುಲಿಗೆ ಮಾಡುತ್ತಿದ್ದ ಮಾಜಿ ಶಿಕ್ಷಕಿಯೊಬ್ಬಳು ಇಂದಿರಾನಗರ ಠಾಣೆ ಪೊಲೀಸರು ಬಲೆಗೆ ಬಿದ್ದಿದ್ದಾಳೆ.

ದೇವಯ್ಯಪಾ​ರ್ಕ್ ನಿವಾಸಿ ಕವಿ​ತಾ​(38) ಬಂಧಿತೆ. ಪ್ರೇಮ್‌ ಡ್ಯಾನಿ​ಯಲ್‌ ಎಂಬುವರು ಕೊಟ್ಟದೂರಿನ ಮೇರೆಗೆ ಮಹಿಳೆಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

2ನೇ ಹೆಂಡತಿಯೊಂದಿಗೆ ಸಂಬಂಧ, ಪಕ್ಕದ ಮನೆಯವನ ಶಿಶ್ನವನ್ನೇ ಕತ್ತರಿಸಿದ!

ಕವಿತಾ ಚಿಕ್ಕ​ಮ​ಗ​ಳೂರು ಜಿಲ್ಲೆ​ಯಲ್ಲಿ ಸರ್ಕಾರಿ ಶಾಲಾ ಶಿಕ್ಷ​ಕಿ​ಯಾಗಿ ಕರ್ತವ್ಯ ನಿರ್ವ​ಹಿ​ಸು​ತ್ತಿದ್ದಳು. ಅಲ್ಲಿನ ಮುಖ್ಯ​ಶಿಕ್ಷ​ಕ​ರ ಮೇಲೆ ಹಲ್ಲೆ ನಡೆ​ಸಿದ ಆರೋ​ಪ​ದ​ಡಿ​ಯಲ್ಲಿ ಈಕೆಯ ವಿರುದ್ಧ ಲಿಂಗ​ದ​ಹಳ್ಳಿ ಠಾಣೆ​ಯಲ್ಲಿ ದೂರು ದಾಖ​ಲಾ​ಗಿತ್ತು. ಅಲ್ಲದೆ, ಸರಿ​ಯಾಗಿ ಕೆಲ​ಸಕ್ಕೆ ಹಾಜ​ರಾ​ಗ​ದಿ​ರು​ವುದು, ಮೌಲ್ಯ​ಮಾ​ಪ​ನ​ಕ್ಕೆ ​ಹೋಗದೆ ನಿರ್ಲಕ್ಷ್ಯ ಮಾಡಿದ ಆರೋಪ​ದ​ಡಿ​ಯಲ್ಲಿ ಈಕೆ​ಯನ್ನು 2009ರಲ್ಲಿ ಕೆಲ​ಸ​ದಿಂದ ವಜಾ ಮಾಡ​ಲಾ​ಗಿದೆ. ಇದಾದ ಬಳಿಕ ಆರೋಪಿ ನಗರಕ್ಕೆ ಬಂದು ನೆಲೆಸಿದ್ದಳು.

ವಿವಾಹವಾಗುವ ನೆಪದಲ್ಲಿ ಹನಿಟ್ರ್ಯಾಪ್‌: ಖಾಸಗಿ ಕಂಪ​ನಿ​ಯಲ್ಲಿ ಕೆಲಸ ಮಾಡುವ ಪ್ರೇಮ್‌ ಡ್ಯಾನಿ​ಯಲ್‌ ‘ಜೀವನ್‌ ಸಾಥಿ.ಕಾಂ’ನಲ್ಲಿ ತಮ್ಮ ವೈಯ​ಕ್ತಿಕ ವಿವ​ರ ಹಾಕಿ​ದ್ದರು. ತನ್ನ ವಿವರನ್ನು ಕೂಡ ಹಾಕಿದ್ದ ಕವಿತಾ, ಪ್ರೇಮ್‌ ಸ್ವವಿವರ ನೋಡಿ ವಿವಾಹವಾಗುವ ಬಗ್ಗೆ ಪ್ರಸ್ತಾಪ ಮಾಡಿದ್ದಳು.

ವೈಟ್ ಕಾರ್ ಎಡವಟ್ಟು.. ಸಿಗ್ನಲ್ ಕೊಟ್ಟರೂ ನಿಲ್ಲಿಸಲಿಲ್ಲ.. ವಿದ್ಯಾರ್ಥಿ ಮೇಲೆ ಗುಂಡಿನ ಮಳೆ!

ಡಿ.26ರಂದು ಪ್ರೇಮ್‌ಗೆ ಕರೆ ಮಾಡಿದ್ದ ಕವಿ​ತಾ, ಬಳಿಕ ಮನೆಗೆ ಹೋಗಿದ್ದಾಳೆ. ಪ್ರೇಮ್‌ ಜತೆ ಸಲು​ಗೆ​ಯಿಂದ ನಡೆದುಕೊಂಡಿದ್ದಳು. ​ಆ ದೃಶ್ಯ​ವ​ನ್ನು​ ಇ​ಬ್ಬರು ಲ್ಯಾಪ್‌ಟಾಪ್‌ ಮೂಲಕ ಸೆರೆ​ಹಿ​ಡಿ​ದು ​ಕೊಂಡಿದ್ದರು. ನಂತ​ರ ತಡ​ರಾತ್ರಿ 12.30ರ ಸುಮಾ​ರಿಗೆ ಏಕಾ​ಏ​ಕಿ ಆರೋಪಿ, ಪ್ರೇಮ್‌ ಅವರ ಕುತ್ತಿ​ಗೆ​ಯ​ಲ್ಲಿದ್ದ ಚಿನ್ನದ ಸರ ಹಾಗೂ ಮನೆ​ಯ​ಲ್ಲಿ​ದ್ದ ಹಣ​ ಕೊಡು​ವಂತೆ ಒತ್ತಾ​ಯಿ​ಸಿ​ದ್ದಾಳೆ. ಪ್ರೇಮ್‌ ನಿರಾ​ಕ​ರಿ​ಸಿದ್ದು, ಇಬ್ಬರ ನಡುವೆ ವಾಗ್ವಾದ ನಡೆ​ದಿದೆ. ಅದ​ರಿಂದ ಆಕ್ರೋ​ಶ​ಗೊಂಡ ಕವಿತಾ, ಹಣ, ಚಿನ್ನದ ಸರ ಕೊಡ​ದಿ​ದ್ದರೆ ಅತ್ಯಾ​ಚಾರ ಆರೋ​ಪ​ದಡಿ ಪ್ರಕ​ರಣ ದಾಖ​ಲಿ​ಸು​ವು​ದಾಗಿ ಹೇಳಿ ಇಂದಿ​ರಾ​ನ​ಗರ ಪೊಲೀಸ್‌ ಠಾಣೆ​ಯಲ್ಲಿ ಪ್ರೇಮ್‌ ವಿರುದ್ಧ ದೂರು ನೀಡಿ​ದ್ದಳು.

ಬಯಲಾದ ಸತ್ಯ:

ವಿಚಾ​ರ​ಣೆಗೆ ಬಂದ ಪ್ರೇಮ್‌, ನಡೆದ ಘಟನೆಯನ್ನು ವಿವ​ರಿ​ದ್ದರು. ಲ್ಯಾಪ್‌​ಟಾ​ಪ್‌​ನಲ್ಲಿದ್ದ ವಿಡಿ​ಯೋ​ವನ್ನು ತೋರಿಸಿ ಕವಿತಾ, .5 ಲಕ್ಷ ಕೊಡ​ಬೇಕು. ಇಲ್ಲ​ವಾ​ದರೆ ಅತ್ಯಾ​ಚಾರ ಆರೋ​ಪ​ದಡಿ ದೂರು ನೀಡು​ತ್ತೇನೆ ಎಂದು ಬೆದ​ರಿಕೆ ಹಾಕಿ​ದ್ದಳು. ಹೀಗಾಗಿ ಎರಡು ಲಕ್ಷ ಕೊಟ್ಟಿದ್ದೆ. ಆದರೂ ಆಕೆ ಮತ್ತೊ​ಮ್ಮೆ ಹಣಕ್ಕೆ ಬೇಡಿಕೆ ಇಟ್ಟಿ​ದ್ದಳು. ಕೊಡ​ದಿ​ದ್ದಾಗ ಅತ್ಯಾ​ಚಾ​ರದ ದೂರು ನೀಡಿ​ದ್ದಾಳೆ ಎಂದು ಆರೋಪಿ ಪ್ರೇಮ್‌ ವಿಚಾ​ರ​ಣೆ​ಯಲ್ಲಿ ಹೇಳಿಕೆ ನೀಡಿ​ದ್ದ​ರು. ಅಲ್ಲದೆ, ಕವಿತಾ ವಿರುದ್ಧ ಪ್ರತ್ಯೇ​ಕ​ವಾಗಿ ದೂರು ನೀಡಿ​ದ್ದರು. ಈ ಹಿನ್ನೆ​ಲೆ​ಯಲ್ಲಿ ಆಕೆ​ಯನ್ನು ಠಾಣೆಗೆ ಕರೆಸಿ ವಿಚಾ​ರಣೆ ನಡೆ​ಸಿ​ದಾಗ ಸತ್ಯಾಂಶ ಬೆಳ​ಕಿಗೆ ಬಂದಿದೆ ಎಂದು ಪೊಲೀ​ಸರು ಹೇಳಿ​ದ​ರು.

50-60 ಮಂದಿಗೆ ವಂಚನೆ?

ಹನಿ​ಟ್ರ್ಯಾಪ್‌ ಮಾಡು​ವು​ದನ್ನೇ ಆರೋಪಿ ವೃತ್ತಿ​ಯ​ನ್ನಾ​ಗಿ​ಸಿ​ಕೊಂಡಿ​ದ್ದಳು. ಮ್ಯಾಟ್ರಿ​ಮೋ​ನಿ​ಯ​ಲ್‌​ನಲ್ಲಿ ಪರಿ​ಚ​ಯ​ವಾ​ಗುವ ಶ್ರೀಮಂತ ವ್ಯಕ್ತಿ​ಗ​ಳನ್ನು ಸಂಪ​ರ್ಕಿ​ಸುವ ಆರೋಪಿ, ಅವ​ರೊಂದಿಗೆ ಸಲು​ಗೆ​ಯಿಂದ ಇರು​ತ್ತಿ​ದ್ದಳು. ಆ ವಿಡಿ​ಯೋ​ವನ್ನು ತೆಗೆ​ದು​ಕೊಂಡು ಹಣ ನೀಡು​ವಂತೆ ಒತ್ತಾ​ಯಿ​ಸು​ತ್ತಿ​ದ್ದಳು. ಹಣ ನೀಡ​ದಿ​ದ್ದರೆ ಅತ್ಯಾ​ಚಾರ ಆರೋ​ಪ​ದಡಿ ಪ್ರಕ​ರಣ​ ದಾ​ಖ​ಲಿ​ಸು​ವು​ದಾಗಿ ಲಕ್ಷಾಂತರ ರುಪಾಯಿ ವಸೂಲಿ ಮಾಡುತ್ತಿದ್ದಳು. ಈ ಹಿಂದೆ ಮಲ್ಲೇ​ಶ್ವರಂ ಮತ್ತು ಮಹ​ದೇ​ವ​ಪುರ ಠಾಣೆ​ಯಲ್ಲಿ ಹಣ ನೀಡದವರ ವಿರುದ್ಧ ಅತ್ಯಾಚಾರ ದೂರು ನೀಡಿದ್ದಾಳೆ. ಸುಮಾರು 50-60 ಮಂದಿಗೆ ಹನಿ​ಟ್ರ್ಯಾಪ್‌ ಮೂಲಕ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.