ಪಾಟ್ನಾ (ಜ. 04)  ಹೆಂಡತಿಯೊಂದಿಗೆ ಸಂಬಂಧ ಹೊಂದಿದ್ದಾನೆ ಎಂಬ ಸಿಟ್ಟಿಗೆ ವ್ಯಕ್ತಿಯೊಬ್ಬ ಪಕ್ಕದ ಮನೆಯವನ ಪುರುಷತ್ವಕ್ಕೆ ಕತ್ತರಿ ಹಾಕಿದ್ದಾನೆ  ಬಿಹಾರದ ಗೋಪಾಲ್‌ಗಂಜ್ ಜಿಲ್ಲೆಯಲ್ಲಿ ಘಟನೆ ನಡೆದಿದ್ದು ಆರೋಪಿಯ ಎರಡನೇ ಹೆಂತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾದವನ ಶಿಶ್ನವನ್ನೇ ಕತ್ತರಿಸಿದ್ದಾನೆ.
 
ಮೃತ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದು ಮರುದಿನ ಬೆಳಗ್ಗೆ ಪ್ರಕರಣ  ಬೆಳಕಿಗೆ ಬಂದಿದೆ. ಆರೋಪಿ ಸ್ಥಳದಿಂದ ನಾಪತ್ತೆಯಾಗಿದ್ದು ಬಲೆ ಬೀಸಲಾಗಿದೆ.

ಪಕ್ಕದ ಮನೆಯಾಕೆಯ ಭೇಟಿಗೆ ಸುರಂಗ ಮಾರ್ಗ ಕೊರೆದಿದ್ದ!

ಶನಿವಾರ ತಡರಾತ್ರಿ ಮೃತ ವ್ಯಕ್ತಿ ಪಕ್ಕದ ಮನೆಗೆ ಹೋಗಿ  ಆರೋಪಿ ಎರಡನೆಯ ಹೆಂಡತಿಯನ್ನು ಭೇಟಿ ಮಾಡಿದ್ದಾನೆ. ಈ ಸಮಯದಲ್ಲಿ ಅಲ್ಲಿಗೆ ಬಂದ ವ್ಯಕ್ತಿ  ಕೃತ್ಯ ಎಸಗಿದ್ದಾನೆ.

ಮೃತ ವ್ಯಕ್ತಿಯ ಪತ್ನಿ ದೂರು ದಾಖಲಿಸಿದ್ದಾಳೆ.  ಐವರ ಮೇಲೆ ಆಕೆ  ದೂರು ನೀಡಿದ್ದು ಘಟನೆಗೆ ಜಮೀನು ವ್ಯಾಜ್ಯ ಕಾರಣ ಎಂದು ಆರೋಪಿಸಿದ್ದಾಳೆ. ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದು ಪೊಲೀಸರು ಶವ ವಶಕ್ಕೆ ಪಡೆದುಕೊಂಡಿದ್ದಾರೆ.