ಬೆಂಗಳೂರು(ಮಾ.13): ಖಾಸಗಿ ಕಂಪನಿ ಉದ್ಯೋಗಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಸವೇಶ್ವರ ನಗರ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ಬೆಳಗ್ಗೆ ಸಂಭವಿಸಿದೆ. ಬಸವೇಶ್ವರ ನಗರದ ಪಟ್ಟಲ್ಲಮ್ಮ ದೇವಸ್ಥಾನ ಸಮೀಪದ ನಿವಾಸಿ ಕಮಲಾಕರ್‌ ಮಡಿವಾಳ (29) ಮೃತ ವ್ಯಕ್ತಿ. ಕಮಲಾಕರ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನರಾಗಿದ್ದಾರೆ. ಕೆಲ ವರ್ಷಗಳಿಂದ ಪತ್ನಿ ಶಿಲ್ಪಾ ಹಾಗೂ ಮೂರು ವರ್ಷಗಳಿಂದ ನಗರದಲ್ಲಿ ನೆಲೆಸಿದ್ದರು.

ಸೇನೆಯಲ್ಲಿ ಕೆಲಸ ಮಾಡುತ್ತಿದ್ದ ಕಮಲಾಕರ್‌ ವಿವಾಹವಾದ ಬಳಿಕ ಸೇನೆಯಿಂದ ಸ್ವಯಂ ನಿವೃತ್ತಿ ಪಡೆದು ಖಾಸಗಿ ಕಂಪನಿಯಲ್ಲಿ ಗನ್‌ಮ್ಯಾನ್‌ ಆಗಿ ಕೆಲಸಕ್ಕೆ ಸೇರಿದ್ದರು. ಶುಕ್ರವಾರ ಬೆಳಗ್ಗೆ 8.30ರ ಸುಮಾರಿಗೆ ಎಂದಿನಂತೆ ಕೆಲಸಕ್ಕೆ ಹೋಗಿದ್ದ ವ್ಯಕ್ತಿ ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ ಮನೆಗೆ ವಾಪಸ್‌ ಆಗಿದ್ದರು. ರೂಮ್‌ಗೆ ತೆರಳಿದ್ದ ಕಮಲಾಕರ್‌ ಪಿಸ್ತೂಲ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜೋರು ಶಬ್ದ ಕೇಳಿ ಶಿಲ್ಪಾ ಕೂಡಲೇ ರೂಮ್‌ಗೆ ಹೋಗಿದ್ದು, ಅಷ್ಟೊತ್ತಿಗೆ ಕಮಲಾಕರ್‌ ಮೃತಪಟ್ಟಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಕಲಬುರಗಿ: ಮಗನೊಂದಿಗೆ ತಾಯಿ ನೇಣಿಗೆ ಶರಣು

ಯಾವುದೇ ಕೌಟುಂಬಿಕ ಕಲಹ ಇರಲಿಲ್ಲ. ಪತಿ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದು, ಒತ್ತಡದಲ್ಲಿದ್ದರು ಎಂದು ಪತ್ನಿ ಹೇಳಿಕೆ ನೀಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.