ಮಾಜಿ ಸಚಿವ ಸಿಪಿ ಯೋಗೇಶ್ವರ್ ಭಾವ ಮಹದೇವಯ್ಯ ಕೊಲೆಯಾದ್ರಾ? ದಟ್ಟ ಕಾಡೊಳಗೆ ಮೂಟೆಯಲ್ಲಿ ಶವ ಪತ್ತೆ!
ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಅವರ ಭಾವ ಉದ್ಯಮಿ ಮಹದೇವಯ್ಯ ಅವರು ನಾಪತ್ತೆಯಾಗಿ ಮೂರು ದಿನದ ಬಳಿಕ ಚಾಮರಾಜನಗರದ ಕಾಡಿನಲ್ಲಿ ಮೂಟೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ರಾಮನಗರ (ಡಿ.04): ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಅವರ ಭಾವ ಉದ್ಯಮಿ ಮಹದೇವಯ್ಯ ಅವರು ನಾಪತ್ತೆಯಾಗಿ ಮೂರು ದಿನಗಳು ಕಳೆದ ನಂತರ ಚಾಮರಾಜನಗರದ ಕಾಡಿನಲ್ಲಿ ಅವರ ಶವ ಪತ್ತೆಯಾಗಿದೆ. ಇನ್ನು ಜಮೀನು ವಿಚಾರಕ್ಕೆ ಅವರನ್ನು ಸುಪಾರಿ ಕಿಲ್ಲರ್ಸ್ಗಳು ಕಿಡ್ನಾಪ್ ಮಾಡಿಕೊಂಡು ಹೋಗಿ ಹತ್ಯೆ ಮಾಡಿ ಕಾಡಿನಲ್ಲಿ ಮೂಟೆಯೊಳಗೆ ಶವವನ್ನು ತುಂಬಿಸಿ ಬೀಸಾಡಿದ್ದಾರೆ ಎಂಬ ಅನುಮಾನ ಕಂಡುಬಂದಿದೆ.
ಜಮೀನು ವಿಚಾರಕ್ಕೆ ಯೋಗೇಶ್ವರ್ ಅವರ ಭಾವ ಮಹದೇವಯ್ಯ ಅವರನ್ನು ಕಿಡ್ನಾಪ್ ಮಾಡಿ ಹತ್ಯೆ ಮಾಡಿದ್ರಾ ಎಂಬ ಅನುಮಾನ ಕಂಡುಬಂದಿದೆ. ರಿಯಲ್ ಎಸ್ಟೇಟ್ ಉದ್ಯಮಿ ಆಗಿರೋ ಮಹದೇವಯ್ಯ ಅವರನ್ನು ಕೊಲೆ ಮಾಡಲು ಸುಪಾರಿ ಕೊಡಲಾಗಿತ್ತಾ ಎಂಬ ಅನುಮಾನ ಕಂಡುಬಂದಿದ್ದು, ಸುಪಾರಿ ಕಿಲ್ಲರ್ಸ್ಗಳು ಕಿಡ್ನಾಪ್ ಮಾಡಿ ಅವರನ್ನು ಕೊಲೆ ಮಾಡಿ ಚಾಮರಾಜನಗರದ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಕೊಲೆ ಮಾಡಲಾಗಿದೆ ಎಂಬ ಅನುಮಾನ ಕಂಡುಬಂದಿದೆ. ಇನ್ನು ಮಹದೇವಯ್ಯ ಅವರ ಕಾರಿನಲ್ಲಿಯೇ ಕಿಡ್ನಾಪ್ ಮಾಡಿಕೊಂಡು ಕರೆದೊಯ್ದು ಕೊಲೆ ಮಾಡಿ ಮೂಟೆಯಲ್ಲಿ ಅವರ ಶವವನ್ನು ತುಂಬಿಸಿ ಕಾಡಿನಲ್ಲಿ ಎಸೆದು ಹೋಗಿದ್ದಾರೆ. ಚಾಮರಾಜನಗರದ ಹನೂರಿನ ರಾಮಾಪುರದ ಕಾಡಿನ ಬಳಿ ಮಹದೇವಯ್ಯ ಅವರ ಕಾರು ಪತ್ತೆಯಾಗಿದ್ದು, ಸುತ್ತಲಿನ ಕಾಡಿನಲ್ಲಿ ಪೊಲೀಸರು ಹಾಗೂ ಅರಣ್ಯಾಧಿಕಾರಿಗಳು ಶೋದ ಕಾರ್ಯ ನಡೆಸಿದಾಗ ಮೂಟೆಯಲ್ಲಿ ಶವ ಪತ್ತೆಯಾಗಿರುವುದ್ದು, ಅದರಲ್ಲಿ ಶವ ಇರುವುದು ಕಂಡುಬಂದಿದೆ.
ತಮಿಳುನಾಡಲ್ಲಿ ಭೋರ್ಗರೆಯುತ್ತಿದೆ ಮೈಚುಂಗ್ ಮಳೆ ಪ್ರವಾಹ: ಇನ್ನಾದ್ರೂ ನಿಲ್ಲುತ್ತಾ ಕಾವೇರಿ ನೀರಿನ ದಾಹ
ಜಮೀನು ವಿಚಾರಕ್ಕೆ ಸುಪಾರಿ ಕೊಟ್ಟು ಕೊಲೆ ಮಾಡಿಸಿದ ಶಂಕೆ: ಉದ್ಯಮಿ ಮಹದೇವಯ್ಯ ಅವರು ಬಿಡದಿ, ಬೆಂಗಳೂರು, ಚನ್ನಪಟ್ಟಣದಲ್ಲಿ ರಿಯಲ್ ಎಸ್ಟೇಟ್ ಉದ್ಯಮ ಮಾಡುತ್ತಿದ್ದರು. ಕೆಲ ಜಮೀನು ವಿಚಾರವಾಗಿ ಕೋರ್ಟ್ ಗೆ ಹೋಗಿದ್ದರು. ಕೋಟ್ಯಾಂತರ ಮೌಲ್ಯದ ಜಮೀನು ಕೈತಪ್ಪುವ ಆತಂಕದಲ್ಲಿ ಕೆಲವು ಕಿಡಿಗೇಡಿಗಳು ಮಹದೇವಯ್ಯ ಹತ್ಯೆ ಮಾಡಿಸಿದ್ರಾ ಎಂಬ ಅನುಮಾನವೂ ಕಂಡುಬಂದಿದೆ. ಸುಫಾರಿ ಕೊಟ್ಟು ಮಹದೇವಯ್ಯ ಹತ್ಯೆ ಮಾಡಿಸಿರುವ ಶಂಕೆಯಿದೆ. ತೋಟದ ಮನೆಯಲ್ಲಿ ಮಹದೇವಯ್ಯ ಒಬ್ಬರೇ ಇರೋದರ ಬಗ್ಗೆ ಮಾಹಿತಿ ಪಡೆದು ಕಿಡ್ನಾಪ್ ಮಾಡಲಾಗಿದೆ. ಇನ್ನು ಶವ ಪತ್ತೆಯಾದ ನಂತರ ಮಹದೇವಯ್ಯ ಕೊಲೆಯ ಹಂತಕರಿಗಾಗಿ ತನಿಖೆ ಚುರುಕು ಮಾಡಲಾಗಿದೆ.
ಮೊಬೈಲ್ ಲೊಕೇಶನ್ ಟ್ರೇಸ್ ಮಾಡಿಕೊಂಡು ಹೋಗಿದ್ದ ಪೊಲೀಸರು: ಮಾಜಿ ಸಚಿವ ಸಿಪಿವೈ ಬಾವ ಮಹದೇವಯ್ಯ ನಾಪತ್ತೆ ಪ್ರಕರಣದಲ್ಲಿ ಚಾಮರಾಜನಗರದ ಬಳಿ ಯೋಗೇಶ್ವರ ಅವರ ಭಾವ ಮಹದೇವಯ್ಯ ಕಾರು ಪತ್ತೆಯಾಗಿತ್ತು. ಹನೂರು ತಾಲೂಕಿನ ರಾಮಾಪುರದ ಬಳಿ ರಾತ್ರಿ ಬ್ರಿಜ್ಜಾ ಕಾರು ಪತ್ತೆಯಾಗಿತ್ತು. ಇನ್ನು ಅವರ ಮೊಬೈಲ್ ಲೊಕೇಶನ್ ಟ್ರೇಸ್ ಮಾಡಿ ಚಾಮರಾಜನಗರಕ್ಕೆ ಹೋದ ಪೊಲೀಸರಿಗೆ ಅಲ್ಲಿ ಮೊಬೈಲ್ ಸ್ವಿಚ್ ಆಫ್ ಆಗಿರುವುದು ತಿಳಿದುಬಂದಿದೆ. ಡಿ.1 ಶುಕ್ರವಾರ ತಡರಾತ್ರಿ ಮಹದೇವಯ್ಯ ನಾಪತ್ತೆಯಾಗಿದ್ದು, ಇದೀಗ ಕೇವಲ ಕಾರು ಪತ್ತೆಯಾಗಿತ್ತು. ಆದರೆ, ಅವರ ಕಾರಿನಲ್ಲಿ ರಕ್ತದ ಕಲೆ ಕಂಡುಬಂದಿದೆ. ಬೆರಳಚ್ಚು ತಜ್ಞರು, ಎಫ್ಎಸ್ಎಲ್ ಟೀಂ ನಿಂದ ಕಾರು ಪರಿಶೀಲನೆ ಮಾಡಲಾಗಿದ್ದು, ಈಗ ಕೊಲೆಯಾಗಿರುವುದು ಬೆಳಕಿಗೆ ಬಂದಂತಾಗಿದೆ.
ಥೂ.. ಪಾಪಿ.. ನಾಲ್ವರು ಸ್ನೇಹಿತರ ಜೊತೆ ಸೇರಿ ತಂಗಿ ಮೇಲೆ ರೇಪ್ ಮಾಡಿ ಕೊಲೆ ಮಾಡ್ದ!
ರಕ್ತದ ಗುಂಪು ಪತ್ತೆಯಾದ ಬಳಿಕ ಕೊಲೆ ಸುಳಿವು: ಮಾಜಿ ಸಚಿವ ಯೋಗೇಶ್ವರ್ ಬಾವ ಮಹದೇವಯ್ಯ ನಾಪತ್ತೆ ಪ್ರಕರಣದಲ್ಲಿ ಪತ್ತೆಯಾದ ಮಹದೇವಯ್ಯ ಅವರ ಕಾರಿನ ಮೇಲಿದ್ದ ರಕ್ತವನ್ನು ಪರೀಕ್ಷೆ ಮಾಡಿದಾಗ ಅದು ಓ ಪಾಸಿಟಿವ್ ಎಂಬುದು ಪತ್ತೆಯಾಗಿದೆ. ಇನ್ನು ಮಹದೇವಯ್ಯ ಅವರ ರಕ್ತದ ಗುಂಪು ಕೂಡ ಓ ಪಾಸಿಟಿವ್ ಆಗಿದ್ದ ಹಿನ್ನೆಲೆಯಲ್ಲಿ ಅವರನ್ನು ಕೊಲೆ ಮಾಡಿ ಬೀಸಾಡಲಾಗಿದೆ ಎಂಬ ಅನುಮಾನ ಕಂಡುಬಂದಿದೆ. ಹೀಗಾಗಿ, ಹನೂರು ಬಳಿಯ ರಾಮಾಪುರ ಅರಣ್ಯ ವಲಯದಲ್ಲಿ ಶೋಧ ಕಾರ್ಯಾಚರಣೆ ಚುರುಕು ಮಾಡಲಾಗಿತ್ತು. ರಾಮಾಪುರದಿಂದ ನಾಲಾರೋಡ್ ವರೆಗೆ ಶೋಧಕಾರ್ಯ ಮಾಡಲಾಗಿತ್ತು. ಈ ವೇಳೆ ಪೊಲೀಸರು ಹಾಗೂ ಅರಣ್ಯ ಇಲಾಖೆಯ ಜೊತೆಗೆ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಅವರ ಬೆಂಬಲಿಗರಿಂದಲು ಶೋಧ ಕಾರ್ಯಕ್ಕೆ ನೆರವಾಗಿದ್ದರು. ಈಗ ಶವ ಪತ್ತೆಯಾಗುವ ಮೂಲಕ ಕೊಲೆಯ ಮಾಹಿತಿ ಲಭ್ಯವಾಗಿದ್ದು, ಪೊಲೀಸರು ಹಂತಕರ ಬೇಟೆ ಶುರುಮಾಡಿದ್ದಾರೆ.