ಲಿಂಗಸುಗೂರು(ಆ.19): ಗ್ರಾಮ ಪಂಚಾಯ್ತಿ ಮಾಜಿ ಸದಸ್ಯನನ್ನು ದುಷ್ಕರ್ಮಿಗಳು ಹಾಡು ಹಗಲೇ ಅಟ್ಟಾಡಿಸಿ ಭೀಕರವಾಗಿ ಹತ್ಯೆಗೈದ ಘಟನೆ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಗುರುಗುಂಟಾ ಸಮೀಪದ ಗೌಡೂರು ರಸ್ತೆಯ ವಿತರಣಾ ನಾಲೆಯ ಬಳಿ ಮಂಗಳವಾರ ಮಧ್ಯಾಹ್ನ ಜರುಗಿದೆ. 

ಹತ್ಯೆಯಾದ ವ್ಯಕ್ತಿಯನ್ನ ಯರಜಂತಿ ಗ್ರಾಮದ ಹನುಮಂತ (38) ಎಂದು ಗುರುತಿಸಲಾಗಿದೆ. 

ಕ್ರಿಕೆಟ್‌ ಬ್ಯಾಟ್‌ನಿಂದ ಹೊಡೆದು ಮಹಿಳೆಯ ಬರ್ಬರ ಕೊಲೆ

ಯರಜಂತಿಯಿಂದ ಗೌಡೂರು ಮಾರ್ಗವಾಗಿ ಬರುವಾಗ ದುಷ್ಕರ್ಮಿಗಳು ರಸ್ತೆಯ ಮಧ್ಯೆದಲ್ಲಿ ಲಾಂಗ್‌, ಮಚ್ಚು ಹಾಗೂ ಭರ್ಜಿಯಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿದ್ದಾರೆ. ಘಟನಾ ಸ್ಥಳಕ್ಕೆ ಲಿಂಗಸುಗೂರು, ಹಟ್ಟಿ ಪೊಲೀಸರು ದೌಡಾಯಿಸಿದ್ದು ಆರೋಪಿಗಳ ಬಂಧನಕ್ಕೆ ಭಲೆ ಬಿಸಿದ್ದಾರೆ.