ಮೆಕ್ಸಿಕೋದ ಮಾಜಿ ಸುಂದರಿಯೊಬ್ಬಳನ್ನು  ಸ್ಪ್ಯಾನಿಷ್ ರೆಸ್ಟೊರೆಂಟ್‌ನಲ್ಲಿ ಲಕ್ಷಾಂತರ ಡಾಲರ್ ಮೌಲ್ಯದ ವೈನ್ ಕಳ್ಳತನದಲ್ಲಿ ಭಾಗಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ.

ಬ್ಯೂಟಿಯೊಬ್ಬಳು ವೈನ್‌ ಕದಿಯಲು ಹೋಗಿ ಸಿಕ್ಕಿಬಿದ್ದಿದ್ದು ಆಕೆಯನ್ನು ಪೊಲೀಸರು ಬಂಧಿಸಿದ್ದಾರೆ. ಮೆಕ್ಸಿಕೋದ ಮಾಜಿ ಸುಂದರಿಯೊಬ್ಬಳನ್ನು ಸ್ಪ್ಯಾನಿಷ್ ರೆಸ್ಟೊರೆಂಟ್‌ನಲ್ಲಿ ಲಕ್ಷಾಂತರ ಡಾಲರ್ ಮೌಲ್ಯದ ವೈನ್ ಕಳ್ಳತನದಲ್ಲಿ ಭಾಗಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ. ಕಳೆದ ವರ್ಷ ಮೈಕೆಲಿನ್-ಸ್ಟಾರ್ಡ್ ರೆಸ್ಟೋರೆಂಟ್‌ನ ನೆಲಮಾಳಿಗೆಯಿಂದ ಸುಮಾರು 19ನೇ ಶತಮಾನದ್ದು ಎನ್ನಲಾದ ನಲವತ್ತೈದು ಬಾಟಲಿ ವೈನ್‌ಗಳು ಕಳ್ಳತನವಾಗಿದ್ದವು. 

ದಿ ಟೆಲಿಗ್ರಾಫ್‌ ವರದಿಯ ಪ್ರಕಾರ ವೈನ್ ಕದ್ದ ಸುಂದರಿಯನ್ನು ಪ್ರಿಸ್ಸಿಲಾ ಲಾರಾ ಗುವೇರಾ ಎಂದು ಗುರುತಿಸಲಾಗಿದೆ. ಈಕೆ ಒಮ್ಮೆ 'ಮಿಸ್ ಅರ್ಥ್' ಸ್ಪರ್ಧೆಯಲ್ಲಿ ಭಾಗವಹಿಸಿದ್ದರು ಎಂದು ತಿಳಿದು ಬಂದಿದೆ. 28 ​​ವರ್ಷ ಪ್ರಾಯದ ಸುಂದರಿ ಪ್ರಿಸ್ಸಿಲಾ ಲಾರಾ ಗುವೇರಾ ರೊಮೇನಿಯನ್-ಡಚ್ ಮೂಲದ ವ್ಯಕ್ತಿ ಕಾನ್ಸ್ಟಾಂಟಿನ್ ಗೇಬ್ರಿಯಲ್ ಡುಮಿಟ್ರು ಜೊತೆ ಸೇರಿ 1.5 ಮಿಲಿಯನ್ ಡಾಲರ್‌ ಮೌಲ್ಯದ ವಿಂಟೇಜ್ ವೈನ್‌ನ ಬಾಟಲಿಗಳನ್ನು ಕದ್ದಿದ್ದಾರೆ ಎಂದು ಸ್ಪ್ಯಾನಿಷ್ ಮಾಧ್ಯಮವನ್ನು ಉಲ್ಲೇಖಿಸಿ ವರದಿ ಮಾಡಿದೆ. 

Scroll to load tweet…

ಈ ಶಸ್ತ್ರಸಜ್ಜಿತ ದರೋಡೆ ಪ್ರಕರಣವು ಕಳೆದ ವರ್ಷ ಆಕ್ಟೋಬರ್ ತಿಂಗಳಲ್ಲಿ ಸ್ಪೇನ್‌ನ ಎಲ್ ಅಟ್ರಿಯೊದಲ್ಲಿ ನಡೆದಿದೆ. ಇದು ಸ್ಪೇನ್‌ನ ಅತ್ಯಂತ ಪ್ರತಿಷ್ಠಿತ ಹೊಟೇಲ್ ಎಂದು ತಿಳಿದು ಬಂದಿದೆ. ಈ ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದ ಸುಂದರಿ ಪ್ರಿಸ್ಸಿಲಾ ಲಾರಾ ಗುವೇರಾ, ಹಾಗೂ ಕಾನ್ಸ್ಟಾಂಟಿನ್ ಗೇಬ್ರಿಯಲ್ ಡುಮಿಟ್ರು ಅವರು ಈ ವಾರ ಮಾಂಟೆನೆಗ್ರೊದಿಂದ ಕ್ರೊಯೇಷಿಯಾಕ್ಕೆ ದಾಟುತ್ತಿದ್ದಾಗ ಸಿಕ್ಕಿ ಬಿದ್ದಿದ್ದು, ಈ ಮೂಲಕ ಇವರಿಗಾಗಿ ನಡೆಸಿದ್ದ ಒಂಭತ್ತು ತಿಂಗಳ ಶೋಧ ಕೊನೆಗೊಂಡಿದೆ ಎಂದು ದಿ ಟೆಲಿಗ್ರಾಫ್ ವರದಿ ಮಾಡಿದೆ. 

Cybrer Crime ವೈನ್ ಡೆಲಿವರಿಗೆ 10 ರೂ ನೀಡಲು ಹೇಳಿ ಯುವತಿಯ ಅಕೌಂಟ್‌ನಿಂದ 50 ಸಾವಿರ ಧೋಖಾ!

ಕಳೆದ ವರ್ಷ ಈ ಜೋಡಿ, 19 ನೇ ಶತಮಾನದ ಅಪರೂಪದ ವೈನ್‌ ಬಾಟಲ್ ಸೇರಿದಂತೆ ಮೈಕೆಲಿನ್-ಸ್ಟಾರ್ಡ್ ರೆಸ್ಟೋರೆಂಟ್‌ನ ನೆಲಮಾಳಿಗೆಯಲ್ಲಿದ್ದ ನಲವತ್ತೈದು ಬಾಟಲಿಗಳನ್ನು ಕಳವು ಮಾಡಲಾಗಿದೆ ಎಂದು ಸ್ಕೈ ನ್ಯೂಸ್ ವರದಿ ಮಾಡಿತ್ತು. ಈ ರೆಸ್ಟೊರೆಂಟ್‌ನ ಅಡುಗೆ ಮನೆಯನ್ನು ಮುಚ್ಚಿದ ನಂತರ ಮಿಸ್‌ ಗುವೇರಾ ವೈಟರ್‌ಗಳಿಗೆ ರೂಮ್ ಸೇವೆ ನೀಡುವಂತೆ ಹೇಳುವ ಮೂಲಕ ಅವರ ದಾರಿ ತಪ್ಪಿಸಿ ಈ ದರೋಡೆ ಮಾಡಿದ್ದರು. ಸ್ಪ್ಯಾನಿಷ್ ಪೊಲೀಸರ ಪ್ರಕಾರ, ಆಕೆಯ ಸಹಚರ ಮಾಸ್ಟರ್ ಕೀಯಿಂದ ವೈನ್ ಸೆಲ್ಲಾರ್ ಅನ್ನು ತೆರೆದು ಹಲವು ದುಬಾರಿ ಬಾಟಲಿಗಳೊಂದಿಗೆ ಕಣ್ಮರೆಯಾಗಿದ್ದ. 

ಮೆಕ್ಸಿಕೋದಲ್ಲಿ ಮೊಸಳೆಯನ್ನೇ ಮದುವೆಯಾದ ಮೇಯರ್ !

ಈ ಜೋಡಿಯು ರೆಸ್ಟೋರೆಂಟ್‌ನಿಂದ ಹೊರ ಹೋಗುತ್ತಿರುವುದು ಸಿಸಿಟಿವಿಯಲ್ಲಿ ಸೆರೆ ಆಗಿತ್ತು. ನಂತರ ಸುಮಾರು ಒಂಭತ್ತು ತಿಂಗಳ ಕಾಲ ಇವರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದರು. ಸ್ಪ್ಯಾನಿಷ್, ಡಚ್, ಕ್ರೊಯೇಷಿಯನ್ ಮತ್ತು ರೊಮೇನಿಯನ್ ಪೊಲೀಸರು ಇಂಟರ್‌ಪೋಲ್ ಬಳಸಿ ಇವರಿಗಾಗಿ ಹುಡುಕಾಟ ನಡೆಸಿದ್ದರು. ಹೀಗಾಗಿ ಮಾಂಟೆನೆಗ್ರೊದಿಂದ ಈ ಕಿಲಾಡಿ ಜೋಡಿ ಕ್ರೊಯೇಷಿಯಾದ ಗಡಿ ದಾಟುತ್ತಿದ್ದಂತೆ ಗಡಿ ಕಾವಲುಗಾರರು ಗುರುತಿಸಿ ಇವರನ್ನು ಅಂತಿಮವಾಗಿ ಬಂಧಿಸಿದ್ದಾರೆ. ಪಸ್ತುತ ಈ ಜೋಡಿ ಕ್ರೊಯೇಷಿಯಾದಲ್ಲಿ ವಾಸಿಸುತ್ತಿದ್ದು, ಅವರನ್ನು ಸ್ಪೇನ್‌ಗೆ ಹಸ್ತಾಂತರಿಸಬೇಕಿದೆ.