Gadag: ಬಸ್‌ನಲ್ಲೇ ಚಿನ್ನದ ಬ್ಯಾಗ್‌ನ್ನ ಮರೆತ ಟೀಚರ್: ಲೊಕೇಷನ್ ಪತ್ತೆ ಹಚ್ಚಿ ಬ್ಯಾಗ್ ಹುಡುಕಿದ ಪೊಲೀಸರು

ತವರು ಮನೆಗೆ ಹೋಗುವ ಆತುರದಲ್ಲಿ ಮಹಿಳೆಯೊಬ್ಬರು ಚಿನ್ನ ಇಟ್ಟಿದ್ದ ಬ್ಯಾಗನ್ನು ಬಸ್‌ನಲ್ಲೇ ಮರೆತು ಇಳಿದಿದ್ದರು. ವಿಷಯ ತಿಳಿದ ಕೂಡಲೇ ಕಾರ್ಯ ಪ್ರವೃತ್ತರಾದ ಶಿರಹಟ್ಟಿ ಪೊಲೀಸರು ಚಿನ್ನ, ಬೆಳ್ಳಿ ಆಭರಣ ತುಂಬಿದ್ದ ವ್ಯಾನಿಟಿ ಬ್ಯಾಗ್ ಪತ್ತೆ ಹಚ್ಚಿ ಮಹಿಳೆಗೆ ಹಿಂತಿರುಗಿಸಿದ್ದಾರೆ.

forgotten teacher of the gold bag on bus Police searching the location and finding the bag in gadag gvd

ಗಿರೀಶ್ ಕಮ್ಮಾರ, ಏಷ್ಯಾನೆಟ್ ಸುವರ್ಣ ನ್ಯೂಸ್, ಗದಗ

ಗದಗ (ಮೇ.07): ತವರು ಮನೆಗೆ ಹೋಗುವ ಆತುರದಲ್ಲಿ ಮಹಿಳೆಯೊಬ್ಬರು ಚಿನ್ನ ಇಟ್ಟಿದ್ದ ಬ್ಯಾಗನ್ನು ಬಸ್‌ನಲ್ಲೇ ಮರೆತು ಇಳಿದಿದ್ದರು. ವಿಷಯ ತಿಳಿದ ಕೂಡಲೇ ಕಾರ್ಯ ಪ್ರವೃತ್ತರಾದ ಶಿರಹಟ್ಟಿ ಪೊಲೀಸರು ಚಿನ್ನ, ಬೆಳ್ಳಿ ಆಭರಣ ತುಂಬಿದ್ದ ವ್ಯಾನಿಟಿ ಬ್ಯಾಗ್ ಪತ್ತೆ ಹಚ್ಚಿ ಮಹಿಳೆಗೆ ಹಿಂತಿರುಗಿಸಿದ್ದಾರೆ. 

ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ತಂಗೋಡಕ್ಕೆ ಹೊರಟಿದ್ದ ಧಾರವಾಡ ಮೂಲದ ಮಹಿಳೆ, ಸಹೋದರನ ಮನೆ ಕಾರ್ಯದಲ್ಲಿ ಭಾಗಿಯಾಗ್ಬೇಕು ಅನ್ನೋ ಖುಷಿಯಲ್ಲಿದ್ರು. ಜೊತೆಗೆ 10 ತೊಲೆ ಚಿನ್ನದ ಆಭರಣ. ಸಹೋದರನಿಗೆ ಉಡುಗೊರೆ ಕೊಡೋದಕ್ಕೆ ಅಂತಾ ತಂದಿದ್ದ 50 ಗ್ರಾಂ ತೂಕದ ಬೆಳ್ಳಿ ಆರತಿ ತಟ್ಟೆಯನ್ನ ವ್ಯಾನಿಟಿ ಬ್ಯಾಗ್‌ನಲ್ಲಿ ತೆಗೆದುಕೊಂಡು ಹೊರಟಿದ್ರು‌‌.‌ ಧಾರವಾಡ ಮೂಲಕ ಹುಬ್ಬಳ್ಳಿಗೆ ಬಂದು ಅಲ್ಲಿಂದ ಶಿರಹಟ್ಟಿ ಬಸ್ ಹತ್ತಿದ್ರು. ಸಂಜೆ ಏಳು ಗಂಟೆ ಸುಮಾರಿಗೆ ಶಿರಹಟ್ಟಿ ತಲುಪಿದ್ರು‌. ತಂಗೋಡ ಬಸ್ ಏರೋದಕ್ಕೆ ಅಂತಾ ಶಿರಹಟ್ಡಿ ಬಸ್ ನಿಲ್ದಾಣದಲ್ಲಿ ಇಳಿದಿದ್ರು.

Gadag ಗಾಯಗೊಂಡ ಹಸುಗಳ ರಕ್ಷಣೆಗಾಗಿ ತಂಡ ಕಟ್ಟಿದ ಯುವಕರು

ಮಗುವನ್ನ ಜೊತೆಗೆ ಕರೆದುಕೊಂಡು ಬಸ್ ಇಳಿಯೋ ಆತುರದಲ್ಲಿ ಬ್ಯಾಗ್ ಬಸ್‌ನಲ್ಲೇ ಉಳಿದಿತ್ತು. ಬಸ್ ಇಳಿಯುವ ದಾವಂತದಲ್ಲಿ ವ್ಯಾನಿಟಿ ಬ್ಯಾಗ್ ಮಿಸ್ ಆಗಿದ್ದು ಗೀತಾ ಅವರ ಗಮನಕ್ಕೆ ಬಂದಿರಲಿಲ್ಲ. ಬಸ್ ಇಳಿದ ಕೂಡಲೇ ಬ್ಯಾಗ್ ಚೆಕ್ ಮಾಡುವ ಸಂಧರ್ಭದಲ್ಲಿ ವ್ಯಾನಿಟಿ ಬ್ಯಾಗ್ ನಾಪತ್ತೆಯಾಗಿದ್ದು ಗಮನಕ್ಕೆ ಬರುತ್ತೆ‌‌. ನಂತರ ಕೂಡಲೇ ಶಿರಹಟ್ಡಿ ಪೊಲೀಸರಿಗೆ ಭೇಟಿಯಾಗಿ ವಿಷಯ ತಿಳಿಸಿದರು. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಬ್ಯಾಗ್ ಪತ್ತೆ ಹಚ್ಚಿದ್ದಾರೆ. 

ಬ್ಯಾಗ್‌ನಲ್ಲಿದ್ದ ಮೊಬೈಲ್‌ನಿಂದ ಚಿನ್ನದ ಲೊಕೇಷನ್ ಪತ್ತೆ: ಹುಬ್ಬಳ್ಳಿಯಿಂದ ಶಿಂಗಟಾಲೂರಿಗೆ ಬಸ್ ಹೊರಟಿತ್ತು. ಶಿರಹಟ್ಟಿಯಲ್ಲಿ ಗೀತಾ ಇಳಿದುಕೊಂಡಿದ್ರು. ಬ್ಯಾಗ್ ಮಿಸ್ ಆಗಿದ್ದ ಬಗ್ಗೆ ತಿಳಿದೊಡನೆ ತಡ ಮಾಡದೆ ಗೀತಾ ಅವರು ವಿಷಯವನ್ನ ಪೊಲೀಸರಿಗೆ ತಿಳಿಸಿದ್ದಾರೆ. ಪಿಎಸ್‌ಐ ಪ್ರವೀಣ್ ಗಂಗೋಳ ಆ್ಯಂಡ್ ಟೀಮ್ ಬ್ಯಾಗ್‌ನಲ್ಲಿ ಏನು ಇಟ್ಟಿದ್ರಿ ಅನ್ನೋ ಮಾಹಿತಿ ಪಡೆದರು. ಚಿನ್ನ ಬೆಳ್ಳಿ ಜೊತೆ ಮೊಬೈಲ್ ಫೋನ್ ಇಟ್ಟಿರೋ ಬಗ್ಗೆಯೂ ಗೀತಾ ಪೊಲೀಸರಿಗೆ ಮಾಹಿತಿ ನೀಡಿದರು.ಕೂಡಲೇ ಮೊಬೈಲ್ ಲೊಕೇಷನ್ ಟ್ರೇಸ್ ಮಾಡಿದ ಪೊಲೀಸರು, ಶಿರಹಟ್ಟಿ ಬಸ್ ನಿಲ್ದಾಣಕ್ಕೆ ತೆರಳಿ ಪರಿಶೀಲನೆ ನಡೆಸಿದ್ರು.‌ ಬೆಳ್ಳಟ್ಟಿ ಕಡೆಗೆ ಬಸ್ ಹೊರಟಿರೋ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಗುತ್ತೆ. 

ಮೊಬೈಲ್ ಲೊಕೇಷನ್‌ನಲ್ಲೂ ಬೆಳ್ಳಟ್ಟಿ ಬಸ್ ನಿಲ್ದಾಣ ತೋರಿಸಿತ್ತು. ಬೆಳ್ಳಟ್ಟಿ ಹೊರಠಾಣೆಗೆ ವೈಯಲ್ ಲೆಸ್ ಮೆಸೇಜ್‌ನ್ನ ಪೊಲೀಸರು ನೀಡಿದರು. ಬಸ್ ನಿಲ್ದಾಣಕ್ಕೆ ತರಳಿದ ಪೊಲೀಸ್ ಸಿಬ್ಬಂದಿ, ಬಸ್ ಪರಿಶೀಲಿಸಿದಾಗ ಬ್ಯಾಗ್ ಸೀಟ್ ಮೇಲೆ ಇರೋದು ಪತ್ತೆಯಾಗಿದೆ. ಕೂಡಲೇ ಬೆಳ್ಳಟ್ಟಿಗೆ ತೆರಳಿದ ಗೀತಾ ಕುಟುಂಬ ಬ್ಯಾಗ್ ಪಡೆದುಕೊಂಡಿತ್ತು. ಬ್ಯಾಗ್‌ನಲ್ಲಿ ಹತ್ತು ತೊಲೆಯ ಚಿನ್ನದ ವಿವಿಧ ಆಭರಣ, 50 ತೊಲೆ ಬೆಳ್ಳಿ ತಟ್ಟೆ, 5 ಸಾವಿರ ನಗದು ಇತ್ತು. ಜೊತೆಗೆ ಒಂದು ಮೊಬೈಲ್ ಇತ್ತು ಯಾವುದೇ ಆಭರಣ ಮಿಸ್ ಆಗಿಲ್ಲ ಅಂತಾ ಗೀತಾ ಖುಷಿಯಿಂದ ಏಷ್ಯ ನೆಟ್ ಸುವರ್ಣ ನ್ಯೂಸ್ ವೆಬ್‌ಗೆ ಮಾಹಿತಿ ನೀಡಿದ್ದಾರೆ. 

Gadag: ಪಿಡಬ್ಲ್ಯೂಡಿ ಸಚಿವರ ತವರು ಜಿಲ್ಲೆಯಲ್ಲೇ ರಸ್ತೆ ಗುಂಡಿಗಳ ತಾಂಡವ: ಆಟೋ ಚಾಲಕರ ಪ್ರತಿಭಟನೆ

ಪೊಲೀಸರಿಗೆ ಕೃತಜ್ಞತೆ ಸಲ್ಲಿಸಿದ ಮಹಿಳೆ: ಬ್ಯಾಗ್ ಮಗುವಿನ ಬಳಿ ಇತ್ತು ಅನ್ಕೊಂಡಿದ್ದೆ. ಬಟ್ಟೆ ಬ್ಯಾಗ್ ನನ್ನ ಬಳಿ ಇತ್ತು. ಚಿನ್ನ ಇಟ್ಟಿದ್ದ ಬ್ಯಾಗನ್ನ ಜೊತೆಗೆ ತೆಗೆದುಕೊಂಡು ಇಳಿದಿದ್ದೆ ಅಂತಾ ಅನ್ಕೊಂಡಿದ್ದೆ. ಆದ್ರೆ, ಬ್ಯಾಗ್ ಮಿಸ್ ಆಗಿತ್ತು. ಪೊಲೀಸರ ಸಹಾಯದಿಂದ ಚಿನ್ನ ಸಿಕ್ಕಿದೆ. ಬ್ಯಾಗ್ ಹುಡುಕಿ ಕೊಡುವಲ್ಲಿ ಶಿರಹಟ್ಟಿ ಪೊಲೀಸರು ನೆರವಾಗಿದ್ದಾರೆ. ಹೀಗಾಗಿ ಶಿರಹಟ್ಟಿ ಪೊಲೀಸರ ಕಾರ್ಯ ಖುಷಿ ನೀಡಿದೆ ಅಂತಾ ಗೀತಾ ಕೃತಜ್ಞತೆ ಸಲ್ಲಿಸಿದ್ದಾರೆ. ಸಮಯಕ್ಕೆ ಸರಿಯಾಗಿ ಕಾರ್ಯಪ್ರವೃತ್ತರಾಗಿ ಚಿನ್ನ ಹುಡುಕುವಲ್ಲಿ ಸಹಾಯ ಮಾಡಿದ ಶಿರಹಟ್ಟ ಸಿಪಿಐ ವಿಕಾಸ ಲಮಾಣಿ, ಪಿಎಸ್‌ಐ ಪ್ರವೀಣ ಗಂಗೋಳ ಪ್ರೋಪಿಎಸ್‌ಐ ಶಿವಾನಂದ ಶಿಂಗಣ್ಣವರ ಹಾಗೂ ಸಿಬ್ಬಂದಿ ಕಾರ್ಯಕ್ಕೆ ಎಸ್ ಪಿ ಶಿವಪ್ರಕಾಶ ದೇವರಾಜು, ಡಿವೈಎಸ್ ಪಿ ಎಸ್ ಆರ್ ಪವಾಡಶೆಟ್ಟಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Latest Videos
Follow Us:
Download App:
  • android
  • ios