Tumakuru: ಮನೆಗೆ ನುಗ್ಗಿ ರೈತನ ಥಳಿಸಿದ ಅರಣ್ಯಾಧಿಕಾರಿ: ರೈತ ಸಂಘಟನೆಗಳಿಂದ ಪ್ರತಿಭಟನೆ

ಅರಣ್ಯ ಭೂಮಿ ಒತ್ತುವರಿ ಮಾಡಿರುವ ಕಾರಣ ನಿಮ್ಮನ್ನು ಬಂಧಿಸುತ್ತವೆ ಎಂದು ರಾತ್ರೋರಾತ್ರಿ ಅರಣ್ಯ ಇಲಾಖೆ ಅಧಿಕಾರಿಗಳು ರೈತನ ಮನೆಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ನಲ್ಲೂರು ಗ್ರಾಮದ ಪಕ್ಕದ ಚೇಳೂರು ಹಟ್ಟಿಯಲ್ಲಿ ಈ ಘಟನೆ ನಡೆದಿದೆ. 

forest officer and staffs assault on farmer at tumakuru gvd

ವರದಿ: ಮಹಂತೇಶ್‌ ಕುಮಾರ್‌, ಏಷ್ಯಾನೆಟ್‌ ಸುವರ್ಣ ನ್ಯೂಸ್‌, ತುಮಕೂರು

ತುಮಕೂರು (ಜು.25): ಅರಣ್ಯ ಭೂಮಿ ಒತ್ತುವರಿ ಮಾಡಿರುವ ಕಾರಣ ನಿಮ್ಮನ್ನು ಬಂಧಿಸುತ್ತವೆ ಎಂದು ರಾತ್ರೋರಾತ್ರಿ ಅರಣ್ಯ ಇಲಾಖೆ ಅಧಿಕಾರಿಗಳು ರೈತನ ಮನೆಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ನಲ್ಲೂರು ಗ್ರಾಮದ ಪಕ್ಕದ ಚೇಳೂರು ಹಟ್ಟಿಯಲ್ಲಿ ಈ ಘಟನೆ ನಡೆದಿದೆ. ಗುಬ್ಬಿ ಅರಣ್ಯ ವಲಯ ಅಧಿಕಾರಿ ದುಗ್ಗಪ್ಪ ಮತ್ತು ಅವರ ಮೂವರು ಫಾರೆಸ್ಟ್‌ ಗಾರ್ಡ್‌ ತಂಡ ಈ ಕೃತ್ಯ ಎಸಗಿದೆ. ರೈತ  ಬಸವರಾಜು ಸೇರಿದಂತೆ ಅವರ ಕುಟುಂಬದ ಎಲ್ಲಾ ಸದಸ್ಯರು ಮೇಲೆ ದೌರ್ಜನ್ಯ ನಡೆಸಲಾಗಿದೆ. 

ಯಾವುದೇ ಮಾಹಿತಿ ನೀಡದೆ ಏಕಾಏಕಿ ರೇಡ್‌ ಮಾಡಿರುವ ಸಿಬ್ಬಂದಿಗಳು ಮಹಿಳೆಯರನ್ನು ಹಿಡಿದು ಎಳೆದಾಡಿದ್ದಾರೆ. ರೈತ ಬಸವರಾಜು ಬಟ್ಟೆ ಹರಿದು ಮುಖ ಮುಸುಡಿಗೆ ಗಾಯ ಬರುವಂತೆ ಗುದ್ದಿ ಹಲ್ಲೆ ನಡೆಸಲಾಗಿದೆ. ಗ್ರಾಮದ ಸರ್ವೇ ನಂಬರ್ 159 ರಲ್ಲಿ 4 ಸಾವಿರ ಎಕರೆ ಪ್ರದೇಶ ಇದ್ದು, ಆಗಿರುವ ಒತ್ತುವರಿ ತೆರವು ಮಾಡಲೇಬೇಕಿದೆ. ಗಂಗಯ್ಯನಪಾಳ್ಯ ಹಾಗೂ ಚೇಳೂರು ಹಟ್ಟಿ ಗ್ರಾಮಗಳಲ್ಲಿ ಒತ್ತುವರಿ ನಡೆದಿದೆ. ಇದರಲ್ಲಿ ಬಸವರಾಜು ಕೂಡ ಒತ್ತುವರಿ ಮಾಡಿಕೊಂಡಿದ್ದಾರೆ. ಕೂಡಲೇ ನಿಮ್ಮನ್ನು ಬಂಧಿಸಬೇಕೆಂದು ಆರ್.ಎಫ್‌.ಒ ದುಗ್ಗಯ್ಯ ಧಮ್ಕಿ ಹಾಕಿದ್ದಾರೆ. 

ಯಡಿಯೂರಪ್ಪ ಬೆನ್ನಲ್ಲೇ ಮತ್ತೋರ್ವ ಹಿರಿಯ ನಾಯಕ ಚುನಾವಣೆ ನಿವೃತ್ತಿ ಘೋಷಣೆ

ಊಟ ಮಾಡಲು ಕುಳಿತಿದ್ದ ಬಸವರಾಜು ಅವರ ಮೇಲೆರಗಿದ ಅರಣ್ಯ ಇಲಾಖೆಯ ಆರ್.ಎಫ್.ಒ ದುಗ್ಗಪ್ಪ, ಫಾರೆಸ್ಟ್ ಗಾರ್ಡ್‌ಗಳಾದ ಗಜೇಂದ್ರ, ಅಶೋಕ ಮತ್ತು ತಾನೋಜಿರಾವ್ ಅವರ ತಂಡ ಇಡೀ ಗ್ರಾಮವೇ ಅರಣ್ಯವನ್ನು ಎಲ್ಲರೂ ಕೂಡಲೇ ಜಾಗ ಖಾಲಿ ಮಾಡಲು ಸೂಚಿಸುತ್ತಾರೆ. ರಾತ್ರಿ ವೇಳೆ ಅತಿಕ್ರಮಣ ಆರೋಪ ಮಾಡುತ್ತಾ ನಮ್ಮಗಳ ಮೇಲೆ ದೌರ್ಜನ್ಯ ತೋರಿದ ಇಡೀ ಅರಣ್ಯ ಇಲಾಖೆ ತಂಡ ಕುಡಿದ ಮತ್ತಿನಲ್ಲಿದ್ದರು ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಈ ಗಲಾಟೆಯಲ್ಲಿ ರೈತ ಬಸವರಾಜುಗೆ ಗಾಯಗಳಾಗಿದ್ದು, ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಜೊತೆಗೆ ಚೇಳೂರು ಪೊಲೀಸ್‌ ಠಾಣೆಯಲ್ಲಿ ಅರಣ್ಯಾಧಿಕಾರಿಗಳ ವಿರುದ್ಧ ಬಸವರಾಜು ದೂರು ನೀಡಿದ್ದಾರೆ. ಇತ್ತ ಜಿಲ್ಲಾಧಿಕಾರಿಗಳ ಕಚೇರಿ ಎದುರು ರೈತ ಸಂಘಟನೆಗಳು ಹಾಗೂ ಸಿಐಟಿಯು ಸಂಘಟನೆ ಪ್ರತಿಭಟನೆ ನಡೆಸಿದ್ದಾರೆ. ತಪಿತಸ್ಥ ಅಧಿಕಾರಿಗಳ ವಿರುದ್ಧ ಕೇಸ್‌ ದಾಖಲುಸುವಂತೆ ಒತ್ತಾಯಿಸಿದ್ದಾರೆ. ಅಹವಾಲು ಸ್ವೀಕರಿಸಿದ ತುಮಕೂರು ಉಪವಿಭಾಗಾಧಿಕಾರಿ ಅಜಯ್‌, ಘಟನೆಯ ಸಂಪೂರ್ಣ ಮಾಹಿತಿಯನ್ನು ಜಿಲ್ಲಾಧಿಕಾರಿಗೆ ನೀಡಿ ಅವರ ಮಾರ್ಗದರ್ಶನದಂತೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. 

ಮರಳಿ ಗೂಡಿಗೆ ಬಂದ ಗಿಳಿ: ಪತ್ತೆ ಹಚ್ಚಿದವರಿಗೆ ಸಿಕ್ತು 85 ಸಾವಿರ ಬಹುಮಾನ!

ಪ್ರಾಂತ ರೈತ ಸಂಘದ ತಾಲ್ಲೂಕು ಅಧ್ಯಕ್ಷ ದೊಡ್ಡನಂಜಯ್ಯ ಅವರ ನೇತೃತ್ವದಲ್ಲಿ ಗ್ರಾಮಸ್ಥರು ಅರಣ್ಯ ಇಲಾಖೆಯ ವರ್ತನೆ ಖಂಡಿಸಿದರು. ಮೂರು ದಿನದ ಹಿಂದೆ ಗುಬ್ಬಿ ತಾಲ್ಲೂಕು ಕಚೇರಿ ಮುಂದೆ ಧರಣಿ ನಡೆಸಿ ಅರಣ್ಯ ಇಲಾಖೆಯ ದುಂಡಾವರ್ತನೆ ಖಂಡಿಸಲಾಗಿತ್ತು. ರೈತ ಬಸವರಾಜು ಅವರು ವಲಯ ಅರಣ್ಯಾಧಿಕಾರಿ ದುಗ್ಗಪ್ಪ ಅವರ ಬಗ್ಗೆ ಹೇಳಿಕೆ ನೀಡಿದ್ದರು. ಈ ಹಿನ್ನಲೆ ಬಸವರಾಜು ಮನೆಗೆ ನುಗ್ಗಿ  ದೌರ್ಜನ್ಯವೆಸಗಿದ್ದಾರೆ ಎಂಬ ಆರೋಪ ಕೂಡ ಕೇಳಿ ಬಂದಿದೆ.

Latest Videos
Follow Us:
Download App:
  • android
  • ios