ಕೇಂದ್ರ ಸರ್ಕಾರಕ್ಕೆ ಲಕ್ಷಾಂತರ ರುಪಾಯಿ ನಷ್ಟ ಉಂಟು ಮಾಡಿದ್ದ ಐವರನ್ನು ಸೆರೆ ಹಿಡಿದಿದ ಸಿಸಿಬಿ ಪೊಲೀಸರು

ಬೆಂಗಳೂರು(ಸೆ.15): ಅಂತಾರಾಷ್ಟ್ರೀಯ ದೂರವಾಣಿ ಕರೆ (ಐಎಸ್‌ಡಿ) ಗಳನ್ನು ಸ್ಥಳೀಯ ಕರೆಗಳಾಗಿ ಪರಿವರ್ತಿಸಿ ಕೇಂದ್ರ ಸರ್ಕಾರಕ್ಕೆ ಲಕ್ಷಾಂತರ ರುಪಾಯಿ ನಷ್ಟ ಉಂಟು ಮಾಡಿದ್ದ ಐವರನ್ನು ಸಿಸಿಬಿ ಪೊಲೀಸರು ಸೆರೆ ಹಿಡಿದಿದ್ದಾರೆ.

ಕೇರಳ ಮೂಲದ ದಿನ್ನೀಶ್‌ ಪವೂರ್‌, ಕೆ.ಪಿ.ವಿಪಿನ್‌, ಸುಭಾಷ್‌, ಬೆಜಿನ್‌ ಜೋಸೆಫ್‌ ಹಾಗೂ ಶಮ್ಮದ್‌ ಶಜಾಹನ್‌ ಬಂಧಿತರಾಗಿದ್ದು, ಇವರಿಂದ ಸರ್ವ​ರ್‍ಸ್ ಗೇಟ್‌ ವೆಸ್‌, ಕಂಪ್ಯೂಟರ್‌ ಹಾಗೂ ಪ್ರೈಮರಿ ರೇಟ್‌ ಇಂಟರ್‌ಫೇಸ್‌ ಡಿವೈಸ್‌ (ಪಿಆರ್‌ಐ) ಜಪ್ತಿ ಮಾಡಲಾಗಿದೆ. ಕೇಂದ್ರ ಸರ್ಕಾರದ ದೂರ ಸಂಪರ್ಕ ಇಲಾಖೆ ಮಾಹಿತಿಯ ಮೇರೆಗೆ ಅನಧಿಕೃತವಾಗಿ ಟೆಲಿಫೋನ್‌ ಎಕ್ಸ್‌ಚೆಂಜ್‌ ದಂಧೆ ಮೇಲೆ ಸಿಸಿಬಿ ದಾಳಿ ನಡೆಸಿದೆ. ನಗರದಲ್ಲಿ ಮೂರು ಕಡೆ ನಕಲಿ ಕಂಪನಿಗಳನ್ನು ತೆರೆದು ಆರೋಪಿಗಳು ಈ ದಂಧೆ ನಡೆಸುತ್ತಿದ್ದರು ಎಂದು ಜಂಟಿ ಪೊಲೀಸ್‌ ಆಯುಕ್ತ (ಅಪರಾಧ) ರಮಣ ಗುಪ್ತ ತಿಳಿಸಿದ್ದಾರೆ.

Belagavi Crime: ಗಂಡನ ಮನೆಗೆ ಬರಲು ಒಲ್ಲೆ ಎಂದ ಪತ್ನಿ ಮೇಲೆ ಫೈರಿಂಗ್‌..!

92 ಲಕ್ಷ ನಿಮಿಷ ಕರೆಗಳ ಪರಿವರ್ತನೆ: ಕೇರಳ ಮೂಲದ ಈ ಐವರು ಆರೋಪಿಗಳು, ನಗರದ ಕೋರಮಂಗಲ, ಮೈಕೋಲೇಔಟ್‌ ಹಾಗೂ ರಾಜಾಜಿನಗರ ಠಾಣಾ ಸರಹದ್ದುಗಳಲ್ಲಿ ಜಿಯೋ ಕಂಪನಿಯ ಎಸ್‌ಐಪಿ ಟ್ರಂಕ್‌ ಕಾಲ್‌ ಡಿವೈಸ್‌ಗಳನ್ನು ಪಡೆದು ಬಿಜ್ಹುಬ್‌ ಸಲ್ಯೂಷನ್ಸ್‌ ಹಾಗೂ ಟೈಪ್‌ ಇನ್‌ಫೋ ಟೆಕ್ನಾಲಜಿಸ್‌ ಸೇರಿ ಮೂವರು ನಕಲಿ ಕಂಪನಿಗಳನ್ನು ಆರಂಭಿಸಿದ್ದರು. ನಂತರ ಎಸ್‌ಐಪಿ ಪೋರ್ಟಲ್‌ಗಳಿಂದ ಸ್ಥಿರ ದೂರವಾಣಿಯನ್ನು ಪಡೆದು ಆರೋಪಿಗಳು, ಅನಧಿಕೃತವಾಗಿ ಟೆಲಿಫೋನ್‌ ಎಕ್ಸ್‌ಚೆಂಜ್‌ ರೀತಿಯಲ್ಲಿ ವಾಯ್‌್ಸ ಓವರ್‌ ಇಂಟರ್‌ ಪ್ರೊಟೊ ಕಾಲ್‌ (ವಿಓಐಪಿ) ಕರೆಗಳನ್ನು ಸ್ಥಳೀಯ ಜಿಎಸ್‌ಎಂ ಕರೆಗಳನ್ನಾಗಿ ಪರಿವರ್ತಿಸಿ ದೂರ ಸಂಪರ್ಕ ಇಲಾಖೆಗೆ ವಂಚಿಸುತ್ತಿದ್ದರು ಎಂದು ಜಂಟಿ ಆಯುಕ್ತರು ಹೇಳಿದ್ದಾರೆ.

ಇದೇ ರೀತಿ ತಮ್ಮ ಕೋರಮಂಗಲದ ಕಂಪನಿಯಲ್ಲಿ 150 ಸಿಪ್‌ ಪೋರ್ಟಲ್‌ ಸಂಪರ್ಕ ಪಡೆದು 40 ದಿನಗಳಲ್ಲಿ 68 ಲಕ್ಷ ನಿಮಿಷ ಹಾಗೂ ಮೈಕೋ ಲೇಔಟ್‌ನ ಕಂಪನಿಯಲ್ಲಿ 900 ಸಿಪ್‌ ಪೋರ್ಟಲ್‌ ಸಂಪರ್ಕ ಪಡೆದು 60 ದಿನಗಳಲ್ಲಿ 24 ಲಕ್ಷ ನಿಮಿಷಗಳ ಐಎಸ್‌ಡಿ ಕರೆಗಳನ್ನು ಅಕ್ರಮ ಕರೆಗಳನ್ನು ಪರಿವರ್ತಿಸಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ.