ತುಮಕೂರು: ಮಹಿಳೆಗೆ ವಂಚಿಸಿ 9.60 ಲಕ್ಷ ಲಪಟಾಯಿಸಿದ್ದ ಖದೀಮರ ಬಂಧನ

ನೂರು ರು. ಮುಖಬೆಲೆಯ ಹಳೇ ನೋಟುಗಳನ್ನು ಎರಡು ಪಟ್ಟು ನೀಡುವ ಆಸೆ ಹುಟ್ಟಿಸಿ ವಂಚನೆ ಪ್ರಕರಣ

Five Arrested For Cheat to Woman at Gubbi in Tumakuru grg

ಗುಬ್ಬಿ(ಆ.28):  ನೂರು ರು. ಮುಖಬೆಲೆಯ ಹಳೇ ನೋಟುಗಳನ್ನು ಎರಡು ಪಟ್ಟು ನೀಡುವ ಆಸೆ ಹುಟ್ಟಿಸಿ ಮಹಿಳೆಗೆ ವಂಚಿಸಿ 9.60 ಲಕ್ಷ ರು. ಲಪಟಾಯಿಸಿದ್ದ ಐದು ಜನ ಖದೀಮರ ತಂಡವನ್ನು ಬಂಧಿಸಿದ ರೋಚಕ ಘಟನೆ ಗುಬ್ಬಿಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.

ತುರುವೇಕೆರೆ ತಾಲೂಕು ಸಂಪಿಗೆ ಹೊಸಹಳ್ಳಿ ವಾಸಿ ಮುತ್ತುರಾಜ್‌, ಬಾಣಸಂದ್ರ ಮೂಲದ ಪುನೀತ್‌, ತಿಪಟೂರು ನಿವಾಸಿ ವಸಂತಕುಮಾರ್‌, ಬಾಣಾವರದ ಮಹೇಶ್‌ ಹಾಗೂ ತುಮಕೂರು ಯಲ್ಲಾಪುರ ಗಂಗಾಧರ್‌ ಬಂಧಿತ ಆರೋಪಿಗಳು. ಬೆಂಗಳೂರು ನಿವಾಸಿ ವಿಜಯಲಕ್ಷ್ಮೀ ವಂಚನೆಗೆ ಒಳಗಾದ ಮಹಿಳೆ. ಹಣದಾಸೆಗೆ ಬಲಿಯಾಗಿ 9.60 ಲಕ್ಷ ರು.ಗಳನ್ನು ಖದೀಮರ ನೀಡಿದ್ದ ವಿಜಯಲಕ್ಷ್ಮೇ ಅವರಿಗೆ ಹಳೇ ನೂರು ರು.ನೋಟುಗಳು ನಮ್ಮ ಬಳಿ ಇವೆ. ಡಬ್ಬಲಿಂಗ್‌ ಮಾಡಿ ಲಕ್ಷಕ್ಕೆ ಎರಡು ಲಕ್ಷ ನೀಡುವ ಆಸೆ ಹುಟ್ಟಿಸಿದ್ದರು. ಆಶ್ರಮದಲ್ಲಿ ಹುಂಡಿ ಹಣವಿದೆ. ಎಲ್ಲವೂ ಹಳೇ ನೂರು ರು.ಳ ನೋಟುಗಳು. ಅವುಗಳನ್ನು 50 ರಷ್ಟುರಿಯಾಯಿತಿಯಲ್ಲಿ ನೀಡುವುದಾಗಿ ನಂಬಿಸಿದ್ದ ಖದೀಮರು 1800 ರು. ಆರಂಭದಲ್ಲಿ ನೀಡಿ ಆಸೆಗೆ ನೀರೆರೆದು ನಂಬಿಕೆ ಬಲ ಪಡಿಸಿಕೊಂಡರು. ಜಾಣ್ಮೆತೋರಿದ್ದ ವಂಚಕರ ತಂಡಕಡಬ ನಿಟ್ಟೂರುರಸ್ತೆಯಲ್ಲಿ ಬಂದು ಹಣ ಪಡೆಯಲು ಹೇಳಿದ್ದರು.

PSI Scam: ಒಂದುವರೆ ತಿಂಗ್ಳಿಂದ ಸಿಐಡಿಯನ್ನೇ ಆಟ ಆಡಿಸಿ ಬಲೆಗೆ ಬಿದ್ದ ಫಸ್ಟ್ ರ‍್ಯಾಂಕ್ ರಚನಾ!

ಕಡಬ ನಿಟ್ಟೂರು ಮಧ್ಯೆ ನಲ್ಲಿಗೆರೆ ಶಿರಾ ರಾಜ್ಯ ಹೆದ್ದಾರಿಯಲ್ಲೇ ವ್ಯವಹಾರ ಕುದಿರಿಸುವಎಂದು ಮಹಿಳೆಯನ್ನು ಕರೆದಿದ್ದರು. ತನ್ನಚಿನ್ನಾಭರಣವನ್ನುಅಡವಿಟ್ಟು 9.60 ಲಕ್ಷ ರೂಗಳನ್ನು ಹೊಂದಿಸಿಕೊಂಡು ಸ್ಥಳಕ್ಕೆ ಬಂದ ಮಹಿಳೆಯ ಬೀಗ ಹಾಕಿದ್ದಕಪ್ಪು ಬಣ್ಣದ ಬ್ಯಾಗ್‌ ನೀಡಿ ರಸ್ತೆಯಲ್ಲಿ ಹಣ ಎಣಿಕೆ ಬೇಡ, ಮನೆಗೆ ತೆರಳಿ ನೋಡಲು ಹೇಳಿ ಸ್ಥಳದಿಂದ ಕಾಲ್ಕಿತ್ತರು. ಕುತೂಹಲ ತಾಳದೆ ಕೀ ಇಲ್ಲದ ಬೀಗ ಹಾಕಿದ್ದ ಬ್ಯಾಗ್‌ ಹರಿದು ನೋಡಿದ ಮಹಿಳೆಗೆ ಬಿಳಿ ಬಣ್ಣದ ಕಾಗದದಕಂತೆ ಕಂಡಿತ್ತು. ಶಾಕ್‌ಗೆ ಒಳಗಾದ ಮಹಿಳೆ ಗುಬ್ಬಿ ಪೊಲೀಸ್‌ ಠಾಣೆಗೆ ದೂರು ನೀಡಿದರು.

ವಂಚನೆಯ ಪ್ರಕರಣ ಬೆನ್ನತ್ತಿದ್ದಗುಬ್ಬಿ ಪಿಎಸ್‌ಐ ಮುತ್ತುರಾಜ್‌ ನೇತೃತ್ವದ ತಂಡ ಸಿಪಿಐ ನದಾಫ್‌ ಮಾರ್ಗದರ್ಶನದಲ್ಲಿ ಎಲ್ಲಾ ಆರೋಪಿಗಳನ್ನು ಬಂಧಿಸಿ ಅವರ ಬಳಿ ಇದ್ದ 5.58 ಲಕ್ಷ ರೂಗಳನ್ನು ಮಹಿಳೆಗೆ ಹಿಂದಿರುಗಿಸಿದರು. ಪ್ರಕರಣ ಭೇದಿಸಿದ ತಂಡದಲ್ಲಿ ಸಿಬ್ಬಂದಿಗಳಾದ ಪಾತರಾಜ್‌, ಮಧು, ನವೀನ್‌ಗೌಡ, ಮಧುಸೂದನ್‌, ರಂಗನಾಥ್‌, ದೇವರಾಜ್‌ಇದ್ದರು.
 

Latest Videos
Follow Us:
Download App:
  • android
  • ios