ಮಂಗಳೂರು(ಜ.22):  ಮಂಗಳೂರಿನಲ್ಲಿ ಕಳೆದ ವರ್ಷ ಸಿಎಎ ವಿರುದ್ಧದ ಅಹಿತಕರ ಘಟನೆ ವೇಳೆ ನಡೆಸಿದ ಪೊಲೀಸ್‌ ಗೋಲಿಬಾರ್‌ ಪ್ರತೀಕಾರಕ್ಕೆ ಪೊಲೀಸರ ಹತ್ಯೆಗೆ ಯತ್ನಿಸಿದ ತಂಡಕ್ಕೆ ಮಾಯಾ ಗ್ಯಾಂಗ್‌ ಎಂದು ಹೆಸರಿಟ್ಟುಕೊಂಡಿರುವುದು ಬೆಳಕಿಗೆ ಬಂದಿತ್ತು. ಆದರೆ, ಇದೀಗ ಆ ಹೆಸರು ಆರೋಪಿಯೊಬ್ಬನ ಮಾಜಿ ಪ್ರೇಯಸಿಯ ಹೆಸರು ಎಂದು ತಿಳಿದುಬಂದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಅನೀಶ್‌ ಅಶ್ರಫ್‌, ಮಹಮ್ಮದ್‌ ಖಾಯೀಸ್‌, ಅಬ್ದುಲ್‌ ಖಾದರ್‌ ಫಹಾದ್‌, ಶೇಖ್‌ ಮಹಮ್ಮದ್‌ ಹ್ಯಾರಿಸ್‌ ಮತ್ತು ರಾಹಿಲ್‌ ಬಂಧಿಸಲಾಗಿತ್ತು. ವಿಚಾರಣೆಯ ವೇಳೆ ಬಂಧಿತ ಆರೋಪಿಗಳ ಪೈಕಿ ಕುದ್ರೋಳಿ ನಿವಾಸಿ ಅನೀಶ್‌ ಅಶ್ರಫ್‌ನ ಮಾಜಿ ಪ್ರೇಯಸಿ ಹೆಸರು ಮಾಯಾ ಅಂತ ಆಗಿದ್ದು, ಅದೇ ಹೆಸರಿನಲ್ಲಿ ಗ್ಯಾಂಗ್‌ ಕಟ್ಟಿರುವುದನ್ನು ಒಪ್ಪಿಕೊಂಡಿದ್ದಾರೆ. 

ಗುದನಾಳದಲ್ಲಿ 44 ಲಕ್ಷ ರು. ಮೌಲ್ಯದ ಚಿನ್ನ ಸಾಗಾಟ..!

22 ವರ್ಷದ ಅನೀಶ್‌ ಅಶ್ರಫ್‌ ಮೇಲೆ ಹಲವು ಗಾಂಜಾ ಕೇಸ್‌ಗಳಿವೆ. ಮಾಯಾ ತಂಡದ ಜೊತೆ ಇನ್ನೊಂದು ತಂಡ ಕೂಡ ಭಾಗಿಯಾಗಿದೆ ಎಂದು ಹೇಳಲಾಗಿದ್ದು, ಅದಕ್ಕಾಗಿ ಪೊಲೀಸರು ಪತ್ತೆ ಕಾರ್ಯ ನಡೆಸುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಬಂಧಿತ ಐದು ಮಂದಿ ಆರೋಪಿಗಳಿಗೆ ಮೂರು ದಿನಗಳ ಪೊಲೀಸ್‌ ಕಸ್ಟಡಿ ವಿಧಿಸಲಾಗಿದೆ.