ಮಡಿಕೇರಿ ಮೂಲದ ಉಬೈದ್‌ ಬಲಿಯತ್‌ ಅಜೀಜ್‌ ಬಂಧಿತ ಆರೋಪಿ| 44.2 ಲಕ್ಷ ರು. ಮೌಲ್ಯದ 24 ಕ್ಯಾರೆಟ್‌ ಚಿನ್ನ ಜಪ್ತಿ|  ದುಬೈನಿಂದ ಏರ್‌ ಇಂಡಿಯಾ ವಿಮಾನದಲ್ಲಿ ಮಂಗಳೂರಿಗೆ ಬಂದಿಳಿದಿದ್ದ ಬಂಧಿತ ಆರೋಪಿ| 

ಮಂಗಳೂರು(ಜ.22):  ಗುದನಾಳದಲ್ಲಿ ಪೇಸ್ಟ್‌ ರೂಪದಲ್ಲಿ 0.8 ಕೆ.ಜಿ. ಚಿನ್ನ ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಕಸ್ಟಮ್ಸ್‌ ಅಧಿಕಾರಿಗಳು ಮಂಗಳೂರು ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದಿದ್ದಾರೆ. 

ಬಂಧಿತ ಆರೋಪಿಯಿಂದ ಬರೋಬ್ಬರಿ 44.2 ಲಕ್ಷ ರು. ಮೌಲ್ಯದ 24 ಕ್ಯಾರೆಟ್‌ ಚಿನ್ನವನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. 

ಕಲಬುರಗಿ ಜಿಲ್ಲೆಯಲ್ಲಿ ಖೋಟಾ ನೋಟಿನ ಜಾಲ ಪತ್ತೆ..!

ಮಡಿಕೇರಿ ಮೂಲದ ಉಬೈದ್‌ ಬಲಿಯತ್‌ ಅಜೀಜ್‌ ಬಂಧಿತ ಆರೋಪಿ. ಈತ ಗುರುವಾರ ದುಬೈನಿಂದ ಏರ್‌ ಇಂಡಿಯಾ ವಿಮಾನದಲ್ಲಿ ಮಂಗಳೂರಿಗೆ ಬಂದಿಳಿದಿದ್ದ. ತಪಾಸಣೆ ವೇಳೆ ಕಸ್ಟಮ್ಸ್‌ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾನೆ.