ರೇಪ್ ಶಿಕ್ಷೆಯಿಂದ ಬಚಾವ್ ಆಗಲು ಮದುವೆಯಾದ, ಅದರ ಬೆನ್ನಲ್ಲೇ 'ತಲಾಕ್' ಎಂದ!
ಕೇಂದ್ರ ಸರ್ಕಾರ ತ್ರಿವಳಿ ತಲಾಕ್‌ಅನ್ನು ನಿಷೇಧ ಮಾಡಿದ್ದು ಏಕೆ ಎನ್ನುವುದಕ್ಕೆ ಉದಾಹರಣೆ ಎನ್ನುವಂಥ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ವ್ಯಕ್ತಿಯೊಬ್ಬ ಯುವತಿಯನ್ನು ರೇಪ್ ಮಾಡಿದ್ದಲ್ಲದೆ, ಶಿಕ್ಷೆಯಿಂದ ಪಾರಾಗಲು ಆಕೆಯನ್ನು ಮದುವೆಯಾಗುವ ತೀರ್ಮಾನ ಮಾಡಿದ್ದ. ಮದುವೆಯಾದ ಕೆಲವೇ ದಿನದಲ್ಲಿಯೇ ಆಕೆಗೆ ತಲಾಕ್ ಹೇಳಿದ್ದಾನೆ. ಇದರ ಬೆನ್ನಲ್ಲಿಯೇ ಮಹಿಳೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.
ನವದೆಹಲಿ (ಫೆ.23): ಮೂರು ವರ್ಷದ ಹಿಂದೆ ವ್ಯಕ್ತಿಯೊಬ್ಬ ಯುವತಿಯನ್ನು ರೇಪ್ ಮಾಡಿದ್ದ. ಬಳಿಕ ಪೊಲೀಸ್ ಕೇಸ್ ಹಾಗೂ ಜೈಲು ಶಿಕ್ಷೆಯಿಂದ ಪಾರಾಗುವ ಸಲುವಾಗಿ ಅಕೆಯನ್ನೇ ಮದುವೆಯಾಗುವ ತೀರ್ಮಾನ ಮಾಡಿದ್ದ. ಆದರೆ ಮದುವೆಯಾದ ತಕ್ಷಣವೇ ಆಕೆಗೆ ಮೂರು ಬಾರಿ ತಲಾಕ್ ಹೇಳಿ ಮದುವೆಯನ್ನು ಅಂತ್ಯ ಮಾಡಿದ್ದಾರೆ. ಈ ಕುರಿತಾಗಿ 28 ವರ್ಷದ ಮಹಿಳೆ ತನ್ನ ಪತಿಯ ವಿರುದ್ಧ ದೆಹಲಿಯ ಸಮೀಪವಿರುವ ಗುರುಗ್ರಾಮದಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಈ ವ್ಯಕ್ತಿಯನ್ನು ಪುನ್ಹಾನಾ ನಿವಾಸಿ ಸಮೀರ್ ಅಹ್ಮದ್ ಎಂದು ಗುರಿತಿಸಲಾಗಿದೆ. ಪಂಚಾಯ್ತಿಯಲ್ಲಿ ಮೂರು ಬಾರಿ ತಲಾಖ್ ಹೇಳಿದ ನಂತರ ಅಂಚೆ ಮೂಲಕ ಕಳುಹಿಸಲಾದ ಪತ್ರಗಳ ಮೂಲಕ ವಿಚ್ಛೇದನ ನೀಡಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ. ಸಮೀರ್ ಅಹ್ಮದ್ 2020ರಲ್ಲಿ ನನ್ನೊಂದಿಗೆ ಬಲವಂತವಾಗಿ ದೈಹಿಕ ಸಂಬಂಧ ಬೆಳೆಸಿದ್ದ ಎಂದು ಮಹಿಳೆ ತನ್ನ ದೂರಿನಲ್ಲಿ ತಿಳಿಸಿದ್ದಾರೆ. ನಾನು ಈ ಬಗ್ಗೆ ಮನೆಯವರ ಗಮನಕ್ಕೆ ತಂದಿದ್ದೆ. ಅವರು ಆತನೊಂದಿಗೆ ಮಾತನಾಡಿದ್ದರು. ಕೊನೆಗೆ ಆತ ನನ್ನೊಂದಿಗೆ ಮದುವೆಯಾಗಲು ಒಪ್ಪಿದ್ದ. 2020ರ ಮೇ 29 ರಂದು ಇಸ್ಲಾಮಿಕ್ ಪದ್ಧತಗಳ ಪ್ರಕಾರ ನಾವು ಎರಡೂ ಕುಟುಂಬಗಳ ಎದುರು ಮದುವೆಯಾಗಿದ್ದೆವು. ಆದರೆ, ಅವರು ಎಂದಿಗೂ ತನ್ನ ಮನೆಗೆ ನನ್ನನ್ನು ಕರೆದುಕೊಂಡು ಹೋಗಿರಲಿಲ್ಲ ಎಂದು ತಿಳಿಸಿದ್ದಾರೆ.
2021ರ ಜನವರಿ 24 ರಂದು ನನ್ನ ಕುಟುಂಬದ ಸದಸ್ಯರು ಸಮೀರ್ ಅವರ ಮನೆಗೆ ಹೋಗಿದ್ದರು. ಅವರೊಂದಿಗೆ ಪಂಚಾಯತ್‌ನ ಸದಸ್ಯರು ಕೂಡ ತೆರಳಿ ವಿವಾದವನ್ನು ಬಗೆಹರಿಸುವ ತೀರ್ಮಾನ ಮಾಡಿದ್ದವು. ಈ ವೇಳೆ ಆತ ಅವರ ಎದುರುಗಡೆಯೇ ಮೂರು ಬಾರಿ ತಲಾಕ್ ಎಂದು ಹೇಳಿದ್ದಾರೆ.
ಹಿಂದು ಧರ್ಮಕ್ಕೆ ಸೇರಿ, ಸಪ್ತಪದಿ ತುಳಿದು ವಿವಾಹವಾದ ಮುಸ್ಲಿಂ ಯುವತಿಯರು!
ಅದಲ್ಲದೆ, ಅಂಚೆ ಮೂಲಕ ವಿಚ್ಛೇದನದ ಪತ್ರಗಳನ್ನೂ ಸಮೀರ್ ಕಳುಹಿಸಿಕೊಟ್ಟಿದ್ದಾರೆ. ಇಂದಲ್ಲ ನಾಳೆ ಈ ವಿಚಾರ ತಿಳಿಯಾಗಬಹುದು ಎಂದು ನಾನು ಯೋಚಿಸಿದ್ದೆ. ಆದರೆ, ಇದು ಬಗೆಹರಿಯುವ ಲಕ್ಷಣ ಇರದೇ ಇರುವ ಕಾರಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಗಿ ತಿಳಿಸಿದ್ದಾರೆ.
ಆರ್‌ಜೆ ನೇತ್ರ ನಟನೆಯ ತಲಾಕ್ ತಲಾಕ್ ತಲಾಕ್; ವೈದ್ಯನಾಥ್ ನಿರ್ದೇಶನ, ಸುಭಾಷಿಣಿ ನಿರ್ಮಾಣ!
ಮುಸ್ಲಿಂ ಮಹಿಳೆಯರ (ವಿವಾಹದ ಹಕ್ಕುಗಳ ರಕ್ಷಣೆ) 2019 ರ ಸೆಕ್ಷನ್ 4 ರ ಅಡಿಯಲ್ಲಿ ಮಂಗಳವಾರ ಅಹ್ಮದ್ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ರಾಕೇಶ್ ಕುಮಾರ್ ಈ ಕುರಿತಾಗಿ ಮಾಹಿತಿ ನೀಡಿದದ್ದು “ನಾವು ಎಫ್‌ಐಆರ್ ದಾಖಲಿಸಿದ್ದೇವೆ ಮತ್ತು ಸತ್ಯವನ್ನು ಪರಿಶೀಲಿಸುತ್ತಿದ್ದೇವೆ. ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು' ಎಂದಿದ್ದಾರೆ.