ದೇವರ ಕೋಣೆಯಲ್ಲಿ ಹಚ್ಚಿದ್ದ ದೀಪದಿಂದಲೇ ಬೆಂಕಿ ಹೊತ್ತಿಕೊಂಡು ಇಡೀ ಮನೆಗೆ ಬೆಂಕಿ ಆವರಿಸಿಕೊಂಡ ದುರ್ಘಟನೆ ನಗರದ ಎಲೆಕ್ಟ್ರಾನಿಕ್ ಸಿಟಿಯ ನೀಲಾದ್ರಿನಗರದ ಕಾನ್ ಕಾರ್ಡ್ ನ ಕುಪ್ಪರ್ ಟೌನ್ ಬಡಾವಣೆಯಲ್ಲಿರುವ ವಿಲ್ಲಾದಲ್ಲಿ ನಡೆದಿದೆ.

ಬೆಂಗಳೂರು (ಮಾ.27): ದೇವರ ಕೋಣೆಯಲ್ಲಿ ಹಚ್ಚಿದ್ದ ದೀಪದಿಂದಲೇ ಬೆಂಕಿ ಹೊತ್ತಿಕೊಂಡು ಇಡೀ ಮನೆಗೆ ಬೆಂಕಿ ಆವರಿಸಿಕೊಂಡ ದುರ್ಘಟನೆ ನಗರದ ಎಲೆಕ್ಟ್ರಾನಿಕ್ ಸಿಟಿಯ ನೀಲಾದ್ರಿನಗರದ ಕಾನ್ ಕಾರ್ಡ್ ನ ಕುಪ್ಪರ್ ಟೌನ್ ಬಡಾವಣೆಯಲ್ಲಿರುವ ವಿಲ್ಲಾದಲ್ಲಿ ನಡೆದಿದೆ.

ಮನೆಯ ದೇವರ ಕೋಟೆಯಲ್ಲಿ ಪೂಜೆ ಮಾಡಿ ದೀಪ ಹಚ್ಚಲಾಗಿತ್ತು. ದೇವರು ಮನೆಯ ದೀಪದ ಬೆಂಕಿ ಗಾಳಿಗೆ ಹೊತ್ತಿಕೊಂಡಿದೆ. ನಿಧಾನಕ್ಕೆ ಬಟ್ಟೆಗೆ ತಾಗಿ ದೇವರ ಮನೆಯಿಂದ ಬೆಡ್‌ರೂಂಗೆ ಬೆಂಕಿಯ ಕೆನ್ನಾಲಗೆ ವ್ಯಾಪಿಸಿದೆ. ಬೆಡ್‌ರೂಂ ಬೆಂಕಿ ತಗುಲುವವರೆಗೆ ಮನೆಯವರ ಗಮನಕ್ಕೆ ಬಂದಿಲ್ಲ. ಬೆಡ್‌ರೂಂಗೆ ಬೆಂಕಿ ತಾಗುತ್ತಿದ್ದಂತೆ ದಟ್ಟ ಹೊಗೆಯೊಂದಿಗೆ ಬೆಂಕಿ ಆವರಿಸಿದೆ. ಈ ವೇಳೆ ಮನೆಯಲ್ಲಿದ್ದ ತಾಯಿಮಗಳು ಹೊರಬರಲಾಗದೆ ಏಕಾಏಕಿ ಬೆಂಕಿ ಕಂಡು ಕಂಗಾಲಾಗಿದ್ದಾರೆ.

ಗ್ಯಾಸ್ ಸಿಲಿಂಡರ್ ಸೋರಿಕೆಯಾಗಿ ನಾಲ್ವರು ಗಂಭೀರ ಗಾಯ!

ಇದೇ ಸಂದರ್ಭದಲ್ಲಿ ಮನೆಯಲ್ಲಿ ಇದ್ದ ತಾಯಿ ಮಗಳು. ವಿಲ್ಲಾದ ಮೊದಲನೇ ಮಹಡಿಗೆ ಓಡಿದ ತಾಯಿ ಮಗಳು. ಮೇಲ್ಮಡಿಯಿಂದ ಸಹಾಯಕ್ಕೆ ತಾಯಿ ಮಗಳು ಜೋರಾಗಿ ಕೂಗಿದ್ದಾರೆ. ಅಷ್ಟೊತ್ತಾಗಿ ಬೆಂಕಿ ಇಡೀ ಮನೆ ಆವರಿಸಿಕೊಂಡು ಕೆಲವೊತ್ತು ಆತಂಕ ನಿರ್ಮಾಣವಾಗಿತ್ತು ಮನೆಯಲ್ಲಿ ಟಿವಿ, ಗ್ಯಾಸ್ ವಿದ್ಯುತ್ ವೈರ್‌ಗಳು ಇದರಿಂದ ಇನ್ನಷ್ಟು ವ್ಯಾಪಿಸಿ ಅನಾಹುತ ನಡೆಯುವ ಆತಂಕ ಎದುರಾಗಿತ್ತು. ಸ್ಥಳೀಯರು ಅಗ್ನಿ ಶಾಮಕ ದಳಕ್ಕೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಬಳಿಕ ಸ್ಥಳಕ್ಕೆ ಧಾವಿಸಿ ಬಂದ ಅಗ್ನಿ ಶಾಮಕದಳದ ಸಿಬ್ಬಂದಿ ತಾಯಿ ಮಗಳನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾದರು. ಬಳಿಕ ಮನೆಗೆ ಹೊತ್ತಿಕೊಂಡ ಅಗ್ನಿ ನಂದಿಸಿದ ಸಿಬ್ಬಂದಿ.

ಹೈವೋಲ್ಟೇಜ್‌ ತಂತಿ ತಗುಲಿ ಬಸ್‌ಗೆ ಬೆಂಕಿ: 5 ಮಂದಿ ಸಾವು