ಕೊರೋನಾ ಪರೀಕ್ಷೆಗೆ ಅಡ್ಡಿಪಡಿಸಿದ್ದಲ್ಲದೇ ಪತ್ರಕರ್ತರ ಮೇಲೆ ಹಲ್ಲೆ ನಡೆಸಿ ಗುಂಡಾವರ್ತನೆ ತೋರೆದ ಜೆಡಿಎಸ್‌ ವಿಧಾನಪರಿಷತ್ ಸದಸ್ಯ ಹಾಗೂ ಅವರ ಚೇಲಾಗಳ ವಿರುದ್ಧ ದೂರು ದಾಖಲಾಗಿದೆ.

ಮಂಡ್ಯ, (ಏ.25): ಪತ್ರಕರ್ತರಿಗೆ ಕೋವಿಡ್-19 ಪರೀಕ್ಷೆ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಿ ದಾಂಧಲೆ ಮಾಡಿರುವ ಜೆಡಿಎಸ್ MLC ಶ್ರೀಕಂಠೇ ಗೌಡ,ಅವರ ಪುತ್ರ ಮತ್ತು ಇತರ ಮೂವರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.ಮಂಡ್ಯದ ಪಶ್ಚಿಮ ಠಾಣೆಯಲ್ಲಿ ಐಪಿಸಿ ಸೆಕ್ಷನ್ 143, 147, 341, 323, 501, 114, 269, 270 ಅಡಿಗಳಲ್ಲಿ ಎಫ್ಐಆರ್ ದಾಖಲಾಗಿದೆ.

Add Asianetnews Kannada as a Preferred SourcegooglePreferred

"

 ಪ್ರಕರಣ ಸಂಬಂಧ ದಾಖಲಾಗಿರುವ ಎಫ್ ಐ ಆರ್ ಪ್ರಕಾರ ಎಂ ಎಲ್ ಸಿ ಶ್ರೀಕಂಠೇಗೌಡ ಎ1 ಆರೋಪಿಯಾಗಿದ್ದರೇ, ಎ2 ಆರೋಪಿಯಾಗಿ ಶ್ರೀಕಂಠೇಗೌಡ ಅವರ ಪುತ್ರ ಕ್ರಿಷಿಕ್ ಗೌಡ ಆಗಿದ್ದಾರೆ. ಇವರೊಂದಿಗೆ ಎಂ.ಬಿ.ಚಂದ್ರಕಲಾವತಿ ಎ3, ಜಗದೀಶ್ ಎ4 ಮತ್ತು ರಾಜು ಆಲಿಯಾಸ್ ಪಿಳ್ಳೆ ಎ5 ಆರೋಪಿಯಾಗಿದ್ದಾರೆ.

ಕೊರೋನಾ ಪರೀಕ್ಷೆಗೆ ಅಡ್ಡಿ: ಜೆಡಿಎಸ್‌ MLC ಶ್ರೀಕಂಠೇಗೌಡ, ಪುತ್ರನಿಂದ ಗುಂಡಾಗಿರಿ

ಇಂದು (ಶನಿವಾರ) ಬೆಳಗ್ಗೆ ಮಂಡ್ಯದ ಅಂಬೇಡ್ಕರ್ ಭವನದಲ್ಲಿ ಕೊರೋನಾ ವೈರಸ್ ಪತ್ತೆ ಪರೀಕ್ಷೆ ಆಯೋಜಿಸಲಾಗಿತ್ತು. ನಗರ ಮತ್ತು ಮಂಡ್ಯದ ಇತರ ಭಾಗದ ಪತ್ರಕರ್ತರು ಪರೀಕ್ಷೆ ಮಾಡಿಸಿಕೊಳ್ಳಲೆಂದು ಬಂದಿದ್ದರು. 

ಈ ಸಂದರ್ಭದಲ್ಲಿ ಜೆಡಿಎಸ್ ನ ವಿಧಾನಪರಿಷತ್ ಸದಸ್ಯ ಕೆ ಟಿ ಶ್ರೀಕಂಠೇಗೌಡ ಮತ್ತು ಅವರ ಬೆಂಬಲಿಗ ಸ್ಥಳೀಯರು ಸ್ಥಳಕ್ಕೆ ಬಂದು ಅಲ್ಲಿ ಶಿಬಿರ ಆಯೋಜಿಸದಂತೆ ವಿರೋಧ ಮಾಡಿದ್ದಾರೆ. ಅಷ್ಟೇ ಅಲ್ಲದೇ ಈ ವೇಳೆ ಶ್ರೀಕಂಠೇಗೌಡ ಪುತ್ರ ಕೃಷಿಗೌಡ ಓರ್ಬ ಪತ್ರಕರ್ತನ ಮೇಲೆ ಹಲ್ಲೆ ಮಾಡಿದ್ದಾರೆ.

Scroll to load tweet…