Asianet Suvarna News Asianet Suvarna News

ಕಟ್ ಮಾಡಿ ಕೆಟ್ಟ ವಿಜಯ್, ಇದೀಗ ದುನಿಯಾಗೆ ಹೊಸ ಸಂಕಟ

ದುನಿಯಾ ವಿಜಯ್ ವಿರುದ್ಧ ಗಿರಿನಗರ ಠಾಣೆಯಲ್ಲಿ ಎಫ್ ಐ ಆರ್/ ಬರ್ತಡೆ ಸೆಲಬರೇಶನ್ ವೇಳೆ ತಲ್ವಾರ್ ಬಳಸಿ ಕೇಕ್ ಕಟ್ ಮಾಡಿದ್ದ ಪ್ರಕರಣ/ ಈಗಾಗಲೇ ಪೊಲೀಸರ ಮುಂದೆ ತಪ್ಪೊಪ್ಪಿಗೆ ಹೇಳಿಕೆ ನೀಡಿರುವ ವಿಜಯ್/ ಸಾರ್ವಜನಿಕ ರಸ್ತೆ ಅಡ್ಡಹಾಕಿ ಜನರಿಗೆ ತೊಂದರೆ ನೀಡಿದ ಆರೋಪ

FIR filed against Duniya Vijay by girinagara police
Author
Bengaluru, First Published Jan 23, 2020, 4:12 PM IST
  • Facebook
  • Twitter
  • Whatsapp

ಬೆಂಗಳೂರು(ಜ. 23) ದುನಿಯಾ ವಿಜಿ ಬರ್ತ್ ಡೇ ಸೆಲಬ್ರೇಷನ್ ವೇಳೆ ಕೇಕ್ ಕಟ್ ಮಾಡಲು ತಲ್ವಾರ್ ಬಳಕೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಎಫ್ ಐಆರ್ ದಾಖಲಾಗಿದೆ.

ಗಿರಿನಗರ ಪೊಲೀಸರು ವಿಜಿ ವಿರುದ್ದ ರಲ್ಲಿ ಎಫ್ ಐಆರ್  ದಾಖಲಿಸಿಕೊಂಡಿದ್ದಾರೆ. ಐಪಿಸಿ ಸೆಕ್ಷನ್ 283ರಡಿಯಲ್ಲಿ ಪ್ರಕರಣ ದಾಖಲಿಸಿರುವ ಗಿರಿನಗರ ಪೊಲೀಸರು ಸಾರ್ವಜನಿಕ‌ ರಸ್ತೆಗೆ ಅಡಚಣೆ ಮತ್ತು ಮತ್ತು ತೊಂದರೆ ನೀಡಿದ ಆರೋಪ ಹೊರಿಸಿದ್ದಾರೆ.

ಬರ್ತ್ ಡೇ ಸೆಲೆಬ್ರೇಷನ್ ಗೆ ಅನುಮತಿ ವಿಜಯ್ ಅನುಮತಿ ಪಡೆದಿದ್ದರು. ಆದರೆ ಅನುಮತಿಯಿರದೆ ತಡರಾತ್ರಿ ಧ್ವನಿವರ್ಧಕ ಬಳಸಿ, ರಸ್ತೆಯಲ್ಲಿ ಸಂಚಾರಕ್ಕೂ ಅಡಚಣೆ ಮಾಡಿದ್ದ ಪ್ರಕರಣ ವರದಿಯಾಗಿತ್ತು.

ತಲ್ವಾರ್‌ನಿಂದ ಕೇಕ್ ಕಟ್ , ಏನೀದರ ಹಕೀಕತ್ತು?

ಈಗಾಗಲೇ ವಿಜಯ್ ಗಿರಿನಗರ ಪೊಲೀಸರ ಮುಂದೆ ಹಾಜರಾಗಿ ಹೇಳಿಕೆ ನೀಡಿದ್ದಾರೆ. ಪೊಲೀಸರ ಮುಂದೆ ತಪ್ಪೊಪ್ಪಿಗೆ ನೀಡಿದ್ದು ತಲ್ವಾರ್ ನನ್ನದಲ್ಲ, ಅಭಿಮಾನಿಗಳು ಉಡುಗೊರೆ ನೀಡಿದ್ದರು. ಆತುರದಲ್ಲಿ ಅದರಲ್ಲೇ ಕೇಕ್ ಕಟ್ ಮಾಡಿದ್ದೇನೆ ಎಂದು ಹೇಳಿಕೆ ನೀಡಿದ್ದರು.

ಒಟ್ಟಿನಲ್ಲಿ ಒಂದೆಲ್ಲಾ ಒಂದು ಕಾರಣಕ್ಕೆ ದುನಿಯಾ ವಿಜಯ್ ಮತ್ತು ಪೊಲೀಸರ ನಂಟು ಬಿಡಿಸಲಾಗದ ಗಂಟಾಗಿದೆ. ಜನ್ಮದಿನಾಚರಣೆ ವೇಳೆ ಕೇಕ್ ಕಟ್ ಮಾಡಿದ ಪ್ರಕರಣ ಕೂಡ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿರುವುದು ವಿಪರ್ಯಾಸವೇ ಸರಿ.

Follow Us:
Download App:
  • android
  • ios