Asianet Suvarna News Asianet Suvarna News

ಹುಬ್ಬಳ್ಳಿ: ಬ್ಯಾಂಕ್ ಲಾಕರ್‌ನಲ್ಲಿಟ್ಟಿದ್ದ 56 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ: ಎಸ್‌ಬಿಐ ಬ್ಯಾಂಕ್ ವಿರುದ್ಧ FIR

ಕಷ್ಟಪಟ್ಟು ದುಡಿದು ಸಂಪಾದನೆ ಮಾಡಿದ ಚಿನ್ನಾಭರಣವನ್ನ ಮನೆಯಲ್ಲಿ ಇಟ್ಟರೆ ಕಳ್ಳರ ಕಾಟ. ಇದಕ್ಕೆ ಭದ್ರತೆ ಇರಲಿ ಅಂತ ಜನರು ಬ್ಯಾಂಕ್ ಲಾಕರ್ ಮೊರೆ ಹೋಗುವುದು. ಆದ್ರೆ ಬ್ಯಾಂಕ್ ಲಾಕರ್‌ನಲ್ಲಿಟ್ಟಿದ್ದ ಚಿನ್ನಾಭರಣವೇ ಮಾಯವಾದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.  

FIR Against SBI For 56 Lakhs Worth Gold Jewelery  Theft Case in Hubballi grg
Author
First Published Dec 8, 2023, 12:36 PM IST

ಹುಬ್ಬಳ್ಳಿ(ಡಿ.08):  ಚಿನ್ನಾಭರಣ, ದಾಖಲೆ ಪತ್ರ ಹೀಗೆ ಬೆಲೆ‌ ಬಾಳುವ ವಸ್ತುಗಳು ಸುರಕ್ಷಿತವಾಗಿರಲಿ ಎಂಬ ಕಾರಣಕ್ಕೆ ಬ್ಯಾಂಕ್ ಲಾಕರ್‌ನಲ್ಲಿಡೋದು ಸಾಮಾನ್ಯ. ಆದರೆ ಇನ್ಮುಂದೆ ಬ್ಯಾಂಕ್ ಲಾಕರ್ ಸಹ ಸುರಕ್ಷಿತವಲ್ಲ ಅನ್ನೋದು ಬಯಲಾಗಿದೆ. ಕಷ್ಟಪಟ್ಟು ದುಡಿದು ಸಂಪಾದನೆ ಮಾಡಿದ ಚಿನ್ನಾಭರಣವನ್ನ ಮನೆಯಲ್ಲಿ ಇಟ್ಟರೆ ಕಳ್ಳರ ಕಾಟ. ಇದಕ್ಕೆ ಭದ್ರತೆ ಇರಲಿ ಅಂತ ಜನರು ಬ್ಯಾಂಕ್ ಲಾಕರ್ ಮೊರೆ ಹೋಗುವುದು. ಆದ್ರೆ ಇಲ್ಲಿ ಬ್ಯಾಂಕ್ ಲಾಕರ್‌ನಲ್ಲಿಟ್ಟಿದ್ದ ಚಿನ್ನಾಭರಣವೇ ಮಾಯವಾಗಿದೆ. 

ಹೌದು, ಬರೋಬ್ಬರಿ 56 ಲಕ್ಷ ಮೌಲ್ಯದ ಚಿನ್ನಾಭರಣ ನಾಪತ್ತೆಯಾಗಿದೆ. ಹುಬ್ಬಳ್ಳಿಯ ಶಾಂತಿ ನಗರದ ನಿವಾಸಿ ಈಶ್ ಕೋಹ್ಲಿ ಎನ್ನುವವರು 56 ಲಕ್ಷ ಮೌಲ್ಯದ ಚಿನ್ನಾಭರಣವೇ ಮಾಯವಾಗಿದೆ. ಕೇಶ್ವಾಪೂರದ ಎಸ್‌ಬಿಐ ಬ್ಯಾಂಕ್‌ನ ಲಾಕರ್ ನಲ್ಲಿ ಇಟ್ಟಿದ್ದ ಚಿನ್ನಾಭರಣ ಕಳ್ಳತನವಾಗಿರುವ ಬಗ್ಗೆ ಹುಬ್ಬಳ್ಳಿಯ ಈಶ್ ಕೊಹ್ಲಿ ಕೇಶ್ವಾಪೂರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಲಾಕರ್ ಓಪನ್ ಮಾಡಿಸಲು ಬೇಕಾದ ಕೀಲಿ ಈಶ್ ಅವರ ಕಡೆಯಲ್ಲಿದ್ದರೂ ಲಾಕರ್ ಓಪನ್ ಆಗಿದ್ದು, ಲಕ್ಷಾಂತರ ಮೌಲ್ಯದ ಚಿನ್ನಾಭರಣ ಹಾಗೂ ದಾಖಲೆಗಳು ಮಾಯವಾಗಿದೆ.‌ ಈ ಕುರಿತು ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಈಶ್ ಕೋಹ್ಲಿ ದೂರು ನೀಡಿದ್ದು, ಎಫ್‌ಐಆರ್ ಕೂಡ ದಾಖಲಾಗಿದೆ.

ಹಾಡಹಗಲೇ ಮನೆ ಬೀಗಮುರಿದು ಕಳ್ಳತನ ಮಾಡುತ್ತಿದ್ದ ಇಬ್ಬರು ಖದೀಮರು ಅರೆಸ್ಟ್

ಇನ್ನು ಕೇಶ್ವಾಪುರದ ಎಸ್‌ಬಿ‌ಐ ಬ್ಯಾಂಕನಲ್ಲಿದ್ದ 2 ಲಾಕರ್‌ನಲ್ಲಿಟ್ಟಿದ್ದ ಚಿನ್ನಾಭರಣ ಕಳ್ಳತನವಾಗಿದೆ ಎಂದು ಪ್ರಕರಣ ದಾಖಲಾಗಿದೆ. 2013 ರಲ್ಲಿ ಎಸ್‌ಬಿ‌ಐ ಬ್ಯಾಂಕ್‌‌ನಲ್ಲಿ ತಂದೆ-ತಾಯಿ ಹೆಸರನಲ್ಲಿ ಎರಡೂ ಲಾಕರ್‌ಗಳನ್ನು ತೆಗೆದುಕೊಂಡಿದ್ದ ಈಶ್ ಕೋಹ್ಲಿ, 2014 ರಲ್ಲಿ 56 ಲಕ್ಷ ಮೌಲ್ಯದ ಚಿನ್ನಾಭರಣ ಇಟ್ಟಿದ್ದರು. ಅಲ್ಲಿಂದ ಇಲ್ಲಿಯವರೆಗೂ ಲಾಕರ್‌‌ಗೆ ಬಾಡಿಗೆ ಸಹ ತುಂಬಿದ್ದರು. ಆದ್ರೆ ಈಗ ಬ್ಯಾಂಕ್ ಲಾಕರ್ ಹೋಗಿ ಚಿನ್ನಾಭರಣವನ್ನ ತೆಗೆದುಕೊಂಡು ಬರಲಿಕ್ಕೆ ಹೋದಾಗ ಕಾದಿತ್ತು ಅಚ್ಚರಿ. ಎರಡೂ ಲಾಕರ್‌ಗಳಲ್ಲಿ ಒಂದು ಲಾಕರ್ ಓಪನ್. ಇನ್ನೊಂದು ಲಾಕರ್ ಓಪನ್ ಆಗದ ಸ್ಥಿತಿಯಲ್ಲಿದೆ. ಇದರಿಂದಾಗಿ ಬ್ಯಾಂಕ್ ಮೇಲೆ ಆರೋಪಿಸಿ ದೂರು‌ ನೀಡಿದ್ದಾರೆ. ಈ ಬಗ್ಗೆ ಎಸ್.ಬಿ.ಐ ಬ್ಯಾಂಕ್ ಮುಖ್ಯಸ್ಥರು ಹೇಳುವುದು ಹೀಗೆ.

ಒಟ್ಟಿನಲ್ಲಿ ಎಸ್‌ಬಿಐ ಬ್ಯಾಂಕ್ ಲಾಕರ್‌ನಲ್ಲಿ ಇಟ್ಟಿರುವ ಚಿನ್ನಾಭರಣ ಹಾಗೂ ದಾಖಲೆಗಳು ಕಳ್ಳತನವಾಗಿರುವ ಬಗ್ಗೆ ದೂರು ದಾಖಲಾಗಿದೆ. ಈ ಬಗ್ಗೆ ಪೊಲೀಸ್ ಇಲಾಖೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಿ ಕಾನೂನು ಕ್ರಮ ಕೈಗೊಳ್ಳಬೇಕಿದೆ.

Follow Us:
Download App:
  • android
  • ios