* ಬಲವಂತವಾಗಿ ದೈಹಿಕ ಸಂಪರ್ಕ* ಗರ್ಭಪಾತ ಮಾಡಿಸಿ, ಹಲ್ಲೆ ಆರೋಪ* ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಗರ್ಭಪಾತ ಮಾಡಿಸಿದ್ದ ಇನ್ಸ್‌ಪೆಕ್ಟರ್
ಬೆಂಗಳೂರು(ಮಾ.10): ಮಹಿಳಾ ಕಾನ್ಸ್‌ಟೇಬಲ್‌ವೊಬ್ಬರಿಗೆ(Women Constable) ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ಗರ್ಭಪಾತದ ಮಾತ್ರೆ ನುಂಗಿಸಿ ಹಲ್ಲೆ ಮಾಡಿದ ಆರೋಪದಡಿ ಪೊಲೀಸ್ ಇನ್ಸ್‌ಪೆಕ್ಟರ್(Inspector) ವಿರುದ್ಧ ಗೋವಿಂದರಾಜಪುರ ಠಾಣೆಯಲ್ಲಿ ಎಫ್‌ಐಆರ್(FIR) ದಾಖಲಾಗಿದೆ.
ರಾಜ್ಯ ಗುಪ್ತ ದಳ ವಿಭಾಗದ ಇನ್‌ಸ್ಪೆಕ್ಟರ್ ಆರ್.ಮಧುಸೂದನ್ ವಿರುದ್ಧ ಈ ಆರೋಪ ಕೇಳಿ ಬಂದಿದೆ. 2017ರಲ್ಲಿ ಇನ್ಸ್‌ಪೆಕ್ಟರ್ ನನಗೆ ಪರಿಚವಾಗಿದ್ದು, ಮದುವೆಯಾಗುವುದಾಗಿ(Marriage) ನಂಬಿಸಿದ್ದರು. ಬಳಿಕ ಮಾತನಾಡುವ ನೆಪದಲ್ಲಿ ಮೈಸೂರು ರಸ್ತೆಯ ಬಿಡದಿ ಸಮೀಪದ ರೆಸಾರ್ಟ್‌ವೊಂದಕ್ಕೆ ಕರೆದೊಯ್ದು ಬಲವಂತವಾಗಿ ದೈಹಿಕ ಸಂಪರ್ಕ ಬೆಳೆಸಿದರು. ಬಳಿಕ ನನ್ನ ಆರೋಗ್ಯದಲ್ಲಿ(Health) ಏರುಪೇರಾದಾಗ, ಯಾರಿಗೂ ಹೇಳಬೇಡ, ನಾನೇ ಮದುವೆಯಾಗುವುದಾಗಿ ಭರವಸೆ ನೀಡಿದ್ದರು ಎಂದು ದೂರಿನಲ್ಲಿ ನೊಂದು ಮಹಿಳಾ ಕಾನ್ಸ್‌ಟೇಬಲ್ ಹೇಳಿದ್ದಾರೆ.
Mysuru: ದೈಹಿಕವಾಗಿ ಬಳಸಿಕೊಂಡು ವಿಚ್ಛೇದಿತ ಮಹಿಳೆಗೆ ವಂಚನೆ: ಪೊಲೀಸಪ್ಪನ ವಿರುದ್ಧ FIR
ಮತ್ತೆ ಹಲವು ಬಾರಿ ದೈಹಿಕ ಸಂಪರ್ಕ ಬೆಳೆಸಿದ ಪರಿಣಾಮ 2019ರಲ್ಲಿ ಮೂರು ತಿಂಗಳ ಗರ್ಭಿಣಿಯಾಗಿದ್ದೆ(Pregnent). ಈ ವೇಳೆ ಆರೋಪಿ ಇನ್ಸ್‌ಪೆಕ್ಟರ್ ಖಾಸಗಿ ಕಾರಿನಲ್ಲಿ ಚಿಕ್ಕಬಳ್ಳಾಪುರಕ್ಕೆ ಕರೆದೊಯ್ದು ಬಲವಂತವಾಗಿ ಗರ್ಭಪಾತದ(Abortion) ಮಾತ್ರೆ ನುಂಗಿಸಿದ್ದರು. ಬಳಿಕ ಆರೋಗ್ಯದಲ್ಲಿ ವ್ಯತ್ಯಾಸವಾದ ಹಿನ್ನೆಲೆಯಲ್ಲಿ ಕೋಲಾರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಗರ್ಭಪಾತ ಮಾಡಿಸಿದ್ದರು.
ಇದಾದ ಬಳಿಕ ಮೂಡಲಪಾಳ್ಯದ ಬಾಡಿಗೆ ಮನೆಯೊಂದರಲ್ಲಿ ನನ್ನನ್ನು ಇರಿಸಿದ್ದರು. ಮತ್ತೆ ದೈಹಿಕ ಸಂಪರ್ಕ ಬೆಳೆಸಿದ ಪರಿಣಾಮ ಗರ್ಭಿಣಿಯಾಗಿದ್ದೆ. ಈ ವೇಳೆ ಮದುವೆಯಾಗುವಂತೆ ಒತ್ತಾಯ ಮಾಡಿದ್ದೆ. ಹೀಗಾಗಿ ಫೆ.13ರ ಮಧ್ಯರಾತ್ರಿ ಮನೆಗೆ ಬಂದು ಹಲ್ಲೆ ನಡೆಸಿದರು. ಈ ವೇಳೆ ಹೊಟ್ಟೆ ಮೇಲೆ ಹಲ್ಲೆ ಮಾಡಿದ ಪರಿಣಾಮ ನನಗೆ ಮತ್ತೆ ಗರ್ಭಪಾತವಾಗಿದೆ. ಅಲ್ಲದೆ, ವಾಟ್ಸಾಪ್ ಕರೆ ಮಾಡಿ ಜೀವ ಬೆದರಿಕೆ ಸಹ ಹಾಕಿದ್ದಾರೆ. ಹೀಗಾಗಿ ಆರೋಪಿ ಇನ್ಸ್‌ಪೆಕ್ಟರ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ನೊಂದ ಮಹಿಳಾ ಕಾನ್ಸ್‌ಟೇಬಲ್ ದೂರಿನಲ್ಲಿ ಕೋರಿದ್ದಾರೆ.
ಸೈಬರ್ ವಂಚಕರಿಗೆ ಸಿಮ್ ಮಾರುತ್ತಿದ್ದವರ ಬಂಧನ
ಬೆಂಗಳೂರು: ಹಣಕ್ಕಾಗಿ ಸೈಬರ್ ವಂಚನೆ(Cyber Fraud) ಜಾಲಕ್ಕೆ ಸಿಮ್ ಕಾರ್ಡ್ ಪೂರೈಸುತ್ತಿದ್ದ ಏರ್‌ಟೆಲ್ ಕಂಪನಿಯ ಉದ್ಯೋಗಿ ಹಾಗೂ ಆತನ ಸ್ನೇಹಿತ ಈಶಾನ್ಯ ವಿಭಾಗ ಸಿಇಎನ್ ಠಾಣೆ ಪೊಲೀಸರ(Police) ಬಲೆಗೆ ಬಿದ್ದ ಘಟನೆ ಮಾ.04 ರಂದು ನಡೆದಿತ್ತು.
ಯಲಹಂಕದ ಹರ್ಷ ಹಾಗೂ ಚಿಕ್ಕಬ್ಯಾಲಕೆರೆಯ ಎಸ್.ಚೇತನ್ ಬಂಧಿತರಾಗಿದ್ದು(Arrest), ಆರೋಪಿಗಳಿಂದ(Accused) 120 ಗ್ರಾಂ ಚಿನ್ನಾಭರಣ ಹಾಗೂ 7 ಲಕ್ಷ ಜಪ್ತಿ ಮಾಡಲಾಗಿದೆ. ಇತ್ತೀಚಿಗೆ ರೆವಾ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ವಿಭಾಗಕ್ಕೆ ಪ್ರವೇಶ ಕೊಡಿಸುವುದಾಗಿ ವಿದ್ಯಾರ್ಥಿಯೊಬ್ಬನಿಂದ .1.27 ಲಕ್ಷ ಪಡೆದು ವಂಚಿಸಿದ ಪ್ರಕರಣದಲ್ಲಿ ರಾಜೇಶ್ವರ್ ಎಂಬಾತನನ್ನು ಬಂಧಿಸಲಾಗಿತ್ತು. ಬಳಿಕ ಆತ ವಿಚಾರಣೆ ವೇಳೆ ಸೈಬರ್ ವಂಚನೆಗೆ ಸಿಮ್(Sim) ಪೂರೈಸಿದವರ ಮಾಹಿತಿ ಸಿಕ್ಕಿತು ಎಂದು ಅಧಿಕಾರಿಗಳು ಹೇಳಿದ್ದರು.
Chits Fund Fraud: ದುಬಾರಿ ಬಡ್ಡಿಯ ಆಸೆ ತೋರಿಸಿ 500 ಜನರಿಗೆ 40 ಕೋಟಿ ವಂಚನೆ
1,500 ಸಾವಿರಕ್ಕೆ ಸಿಮ್ ಮಾರಾಟ
ಏರ್‌ಟೆಲ್ ಸೇಲ್ಸ್ ಎಕ್ಸಿಕ್ಯೂಟಿವ್ ಹರ್ಷ ಹಾಗೂ ಸಿಮ್ ಮಾರಾಟಗಾರ ಚೇತನ್ ಬಾಲ್ಯ ಸ್ನೇಹಿತರಾಗಿದ್ದು, ಹಣಕ್ಕಾಗಿ(Money) ಬಿಹಾರ(Bihar) ಮೂಲದ ಸೈಬರ್ ವಂಚಕ ರಾಜೇಶ್ವರ್‌ಗೆ ನೆರವಾಗಿದ್ದರು. ನಿರ್ಮಾಣ ಹಂತದ ಕಟ್ಟಡಗಳು ಹಾಗೂ ರಸ್ತೆ ಬದಿ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಚೇತನ್ ಸಿಮ್ ಮಾರುತ್ತಿದ್ದ. ಆಗ ಗ್ರಾಹಕರಿಂದ ಹೆಚ್ಚಿನ ಅರ್ಜಿಗಳಿಗೆ ಸಹಿ ಮಾಡಿಸಿಕೊಳ್ಳುತ್ತಿದ್ದಲ್ಲದೆ ಭಾವಚಿತ್ರಗಳನ್ನು ಕೂಡಾ ಚೇತನ್ ಪಡೆಯುತ್ತಿದ್ದ. ಈ ದಾಖಲೆಗಳನ್ನು ಬಳಸಿಕೊಂಡು ಆತ, ಸಿಮ್‌ಗಳನ್ನು ಆಕ್ಟೀವ್ ಮಾಡಿ ರಾಜೇಶ್ವರ್‌ಗೆ ಮಾರುತ್ತಿದ್ದ.
ಒಂದಕ್ಕಿಂತ ಹೆಚ್ಚಿನ ಬಾರಿ ಬೆರಳು ಮುದ್ರೆಗಳನ್ನು ಪಡೆದು ಆ ಗ್ರಾಹಕರ ಹೆಸರಿನಲ್ಲಿಯೇ ಹೆಚ್ಚಿನ ಸಿಮ್ ಕಾರ್ಡ್ ಆಕ್ಟೀವ್ ಮಾಡುತ್ತಿದ್ದರು. ಉಚಿತ ಅಥವಾ .50 ಮೌಲ್ಯದ ಸಿಮ್‌ಗಳನ್ನು ಸ್ನೇಹಿತ ರಾಜೇಶ್ವರ್‌ಗೆ ತಲಾ ಒಂದಕ್ಕೆ 1,500 ರುಗೆ ಮಾರುತ್ತಿದ್ದರು. ವಿಚಾರಣೆ ವೇಳೆ ರಾಜೇಶ್ವರ್‌ಗೆ 6 ಸಿಮ್‌ಗಳನ್ನು ಕೊಟ್ಟಿರುವುದಾಗಿ ಇಬ್ಬರು ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ತನಿಖೆ ಮುಂದುವರೆದಿದ್ದು, ಮತ್ತಷ್ಟುಮಾಹಿತಿ ಹೊರಬರಬಹುದು ಎಂದು ಅಧಿಕಾರಿಗಳು ತಿಳಿಸಿದ್ದರು.
