ಕೊಲೆ ಯತ್ನ, ಲೈಂಗಿಕ ದೌರ್ಜನ್ಯ ಆರೋಪ: ಪೊಲೀಸರ ಮೇಲೆಯೇ ಎಫ್‌ಐಆರ್‌ ದಾಖಲು

*  ಅಮೃತಹಳ್ಳಿ ಕೆರೆ ಬಳಿ ಇರುವ ಮಾರುತಿ ಬಾರ್ ಎದುರು ನಡೆದ ಘಟನೆ
*  ವಕೀಲ ಹಾಗೂ ಅವರ ಪತ್ನಿ ಮೇಲೆ ಪೊಲೀಸರು ಹಲ್ಲೆ 
*  ಈ ಸಂಬಂಧ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು
 

FIR Against Police For Allegation of Attempt to Murder and Sexual Assault in Bengaluru grg

ಬೆಂಗಳೂರು(ಜೂ.22): ಪೊಲೀಸ್ ಠಾಣೆಯಲ್ಲಿ ಆರಕ್ಷರ ಮೇಲೆಯೇ ಕೊಲೆ ಯತ್ನ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾದ ಘಟನೆ ಅಮೃತಹಳ್ಳಿ ಕೆರೆ ಬಳಿ ಇರುವ ಮಾರುತಿ ಬಾರ್ ಎದುರು ನಿನ್ನೆ(ಮಂಗಳವಾರ) ರಾತ್ರಿ ನಡೆದಿದೆ. ವಕೀಲ ಹಾಗೂ ಅವರ ಪತ್ನಿ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.  

ಹೊಯ್ಸಳ ವಾಹನ ಹಾಗೂ ಚೀತಾದಲ್ಲಿ ಬಂದು ವಕೀಲ ಹಾಗೂ ಅವರ ಪತ್ನಿ ಮೇಲೆ  ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಹಾಲೋಬಾಕ್ಸ್‌ನಿಂದ ತಲೆಗೆ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಲಾಗಿದೆ ಅಂತ ವಕೀಲ ಸುದರ್ಶನ್ ಎಂಬುವವರು ದೂರು ನೀಡಿದ್ದಾರೆ. 

ಮೈಸೂರು: ಅಕ್ರಮ ಸಂಬಂಧಕ್ಕೆ ಬಿದ್ವು ಎರಡು ಹೆಣ: ಕೊನೆಯದಾಗಿ ಕಳಿಸಿದ ವಾಟ್ಸಾಪ್ ಮೆಸೇಜ್‌ನಲ್ಲಿ ಏನಿದೆ?

ರಾತ್ರಿ ವೇಳೆ ಗಸ್ತಿನಲ್ಲಿದ್ದ ಹೊಯ್ಸಳ ಟೀಂ ಏಕಾಏಕಿ ಬಂದು ಸುದರ್ಶನ್ ಅವರ ಕಪಾಳಕ್ಕೆ ಹೊಡೆದು ನಂತರ ಕೊಲೆಗೆ ಯತ್ನಿಸಿದ್ದಾರೆ. ತಡೆಯಲು ಬಂದ ಪತ್ನಿಯ ಕೂದಳು ಎಳೆದಾಡಿ ಹಲ್ಲೆ ಮಾಡಿ ನಿಂದಿಸಿದ್ದಾರೆ ಅಂತ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಕ್ರೈಂ ಪೊಲೀಸರು ಎಂದು ಬಂದು ಹಲ್ಲೆ ನಡೆಸಿದ್ದಾರೆ. ಅಮೃತಹಳ್ಳಿ ಠಾಣೆಯ ನಾಲ್ವರು ಪೊಲೀಸರು ಸಿಬ್ಬಂದಿಯಿಂದ ಹಲ್ಲೆ ನಡೆಸಲಾಗಿದೆ. 

ಪೊಲೀಸರ ಮೇಲೆ 307 ಕೊಲೆ ಯತ್ನ, 354 ಲೈಂಗಿಕ ದೌರ್ಜನ್ಯ, ಅಸಭ್ಯ ವರ್ತನೆ ಕಾಯ್ದೆಯಡಿ ಎಫ್‌ಐಆರ್‌ ದಾಖಲಾಗಿದೆ. ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಅವರ ಸಿಬ್ಬಂದಿ ಮೇಲೆಯೇ ದೂರು ದಾಖಲಾಗಿದೆ. 
 

Latest Videos
Follow Us:
Download App:
  • android
  • ios