ಜ್ಞಾನಭಾರತಿ ಪೊಲೀಸ್ ಠಾಣೆ ಮಹಿಳಾ ಪಿಎಸ್‌ಐ ಸುರೇಖಾ ನೀಡಿದ ದೂರಿನ ಮೇರೆಗೆ ಲೇಖಕಿ ಲಕ್ಷ್ಮೀ ಜಿ. ಪ್ರಸಾದ್ ಮತ್ತು ಆಕೆಯ ಪುತ್ರ ಆರವಿಂದ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಹಳೇ ಪ್ರಕರಣದ ವಾರೆಂಟ್ ಸಂಬಂಧ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ. 

ಬೆಂಗಳೂರು(ಅ.25): ಹಳೇ ಪ್ರಕರಣವೊಂದರ ವಾರೆಂಟ್ ಸಂಬಂಧ ವಶಕ್ಕೆ ಪಡೆದು ಠಾಣೆಗೆ ಕರೆತಂದ ಪೊಲೀಸರನ್ನೇ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಲೇಖಕಿ ಹಾಗೂ ಆಕೆಯ ಪುತ್ರನ ವಿರುದ್ಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 

ಜ್ಞಾನಭಾರತಿ ಪೊಲೀಸ್ ಠಾಣೆ ಮಹಿಳಾ ಪಿಎಸ್‌ಐ ಸುರೇಖಾ ನೀಡಿದ ದೂರಿನ ಮೇರೆಗೆ ಲೇಖಕಿ ಲಕ್ಷ್ಮೀ ಜಿ. ಪ್ರಸಾದ್ ಮತ್ತು ಆಕೆಯ ಪುತ್ರ ಆರವಿಂದ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಹಳೇ ಪ್ರಕರಣದ ವಾರೆಂಟ್ ಸಂಬಂಧ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ. ಇದೀಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಆರೋಪದ ಪ್ರಕರಣ ಸಂಬಂಧ ಶೀಘ್ರದಲ್ಲೇ ಇಬ್ಬರು ಆರೋಪಿಗಳಿಗೂ ನೋಟಿಸ್ ಜಾರಿಗೊ ಳಿಸಿ ವಿಚಾರಣೆ ಮಾಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. 

ಹಳೆ ಬಾಯ್​​ಫ್ರೆಂಡ್​​ ಕಥೆ ಮುಗಿಸಿದ ಪ್ರೇಯಸಿ! ಅವರಿಬ್ಬರ ಮದುವೆಗೆ ಅಡ್ಡ ಬಂದಿದ್ದು ಜಾತಿ!

ಏನಿದು ಘಟನೆ?: 

ಹಳೇ ಪ್ರಕರಣವೊಂದರ ಆರೋಪಿಯಾಗಿರುವ ಲೇಖಕಿ ಲಕ್ಷ್ಮೀ ಜಿ.ಪ್ರಸಾದ್ ವಿರುದ್ಧ 6ನೇ ಎಸಿಎಂಎಂ ನ್ಯಾಯಾಲಯವು ಬಂಧನ ವಾರೆಂಟ್ ಜಾರಿಗೊಳಿಸಿತ್ತು. ಅದರಂತೆ ಪಿಎಸ್‌ಐ ಸುರೇಖಾ ಅವರು ಅ.23ರಂದು ಆರೋಪಿ ಲಕ್ಷ್ಮೀಜಿ.ಪ್ರಸಾದ್ ಬೆಂಗಳೂರುವಿಶ್ವವಿದ್ಯಾಲಯದ ಕ್ವಾಟ್ರರ್ಸ್ ಬಳಿ ವಶಕ್ಕೆ ಪಡೆದು ಠಾಣೆಗೆ ಕರೆತಂದಿದ್ದಾರೆ. 

ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ: 

ಬಳಿಕ ಆರೋಪಿ ಲಕ್ಷ್ಮೀ ಜಿ.ಪ್ರಸಾದ್ ಅವರನ್ನು ವೈದ್ಯಕೀಯ ಪರೀಕ್ಷೆ ಮಾಡಿಸಿ ಬಳಿಕ ನ್ಯಾಯಾಧೀಶರ ಎದುರು ಹಾಜರುಪಡಿಸಲು ಸಿದ್ಧತೆ ಮಾಡಿಕೊಳ್ಳುವಾಗ, ಆಕೆ ಏಕಾಏಕಿ 'ನನ್ನನ್ನು ಏಕೆ ಬಂಧಿಸುತ್ತೀರಿ' ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಪೊಲೀಸರನ್ನು ತಳ್ಳಾಡಿ ಕೈಗಳಿಂದ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. 

ಮಗನಿಂದಲೂ ಕರ್ತವ್ಯಕ್ಕೆ ಅಡ್ಡಿ: 

ಬಳಿಕ ಆಕೆ ತನ್ನ ಮಗನಾದ ಅರವಿಂದ್‌ಗೆ ಕರೆ ಮಾಡಿ ಪೊಲೀಸ್ ಠಾಣೆಗೆ ಕರೆಸಿಕೊಂಡಿದ್ದಾರೆ. ಏಕಾಏಕಿ ಠಾಣೆ ಪ್ರವೇಶಿಸಿದ ಅರವಿಂದ್, ಲಕ್ಷ್ಮೀ ಜಿ.ಪ್ರಸಾದ್‌ರನ್ನು ಠಾಣೆಯಿಂದ ಹೊರಗೆ ಕರೆದೊಯ್ಯಲು ಮುಂದಾಗಿದ್ದಾರೆ. ನ್ಯಾಯಾಲಯದ ಆದೇಶ ತೋರಿಸಿದರೂ ಕೇಳದ ಆತ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ನಾನು ಹೈಕೋರ್ಟ್ ವಕೀಲ ಎಂದು ಅರವಿಂದ ಕೂಗಾಡಿದ್ದಾರೆ. ಪೊಲೀಸರ ವಶದಲ್ಲಿದ್ದ ಲಕ್ಷ್ಮೀ ಜಿ.ಪ್ರಸಾದ್ ಅವರನ್ನು ಕರೆದೊಯ್ಯಲು ಪ್ರಯತ್ನಿಸಿದ್ದಾರೆ. ಆಗ ಮಧ್ಯ ಪ್ರವೇಶಿಸಿದ ಇನ್‌ಸ್ಪೆಕ್ಟ‌ರ್ ರವಿ ಅವರಿಗೂ ಆರೋಪಿಗಳು ಕೈಗಳಿಂದ ಹಲ್ಲೆ ಮಾಡಿ ಪರಚಿ ಗಾಯಗೊಳಿಸಿದ್ದಾರೆ. ಠಾಣಾ ಸಿಬ್ಬಂದಿಗೂ ಅವಾಚ್ಯ ಶಬ್ದಗಳಿಂದ ನಿಂದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.