ಬೆಂಗಳೂರು ಟು ಚಿಕ್ಕಬಳ್ಳಾಪುರ; 15 ವರ್ಷ ಹಿಂದಿನ ಕೊಲೆ ಪತ್ತೆಗೆ ಕಾರಣವಾದ  ಬೆರಳಚ್ಚು!

* 15 ವರ್ಷ ಹಿಂದಿನ  ಕೊಲೆ ಆರೋಪಿಗಳ ಪತ್ತೆ ಹಚ್ಚಿದ ಜಿಲ್ಲೆಯ ಪೊಲೀಸರು
* ಬೆಂಗಳೂರು ವ್ಯಕ್ತಿಯ ಕೊಲೆ ಆರೋಪಿಗಳ ಪತ್ತೆಗೆ ನೆರವಾದ ಪೊಲೀಸರು ಸಂಗ್ರಹಿಸಿದ್ದ ಬೆರಳು ಮುದ್ರೆ
* ನಂದಿಗಿರಿಧಾಮದಲ್ಲಿ ಚಿನ್ನ ಕಳ್ಳತನ ಪ್ರಕರಣ
* ಆರೋಪಿಗಳ ಬೆರಳು ಅಚ್ಚು ಹೊಂದಾಣಿಕೆ

fingerprint Evidence 15 year old murder case solved Bengaluru to Chikkaballapur mah

ಚಿಕ್ಕಬಳ್ಳಾಪುರ(ಜು. 07)  ಬರೋಬ್ಬರಿ 15 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ನಡೆದಿದ್ದ ವ್ಯಕ್ತಿಯೊಬ್ಬರ ಕೊಲೆ ಪ್ರಕರಣದ ಆರೋಪಿಗಳನ್ನು ಜಿಲ್ಲೆಯ ಪೊಲೀಸರು ಅಕಸ್ಮಿಕವಾಗಿ ಸಂಗ್ರಹಿಸಿದ್ದ ಬೆರಳು ಮದ್ರೆಗಳ  ಸಹಾಯದಿಂದ  ಪತ್ತೆ ಹಚ್ಚಿದ್ದಾರೆ.

2006 ರಲ್ಲಿ ಬೆಂಗಳೂರಿನ ಮಹಾನಗರ ಪಾಲಿಕೆಯ ಯಶವಂತಪುರ ಬಿಕೆ ನಗರದ 2ನೇ ಕ್ರಾಸ್‌ನಲ್ಲಿದ್ದ ವಿಡಿಯೋ ಗೇಮ್ ಸೆಂಟರ್ ಮಾಲೀಕ ಶಶೀಂದ್ರನ್ ಎಂಬುವರನ್ನು 3 ಮಂದಿ ದುಷ್ಕರ್ಮಿಗಳು ಹಗ್ಗದಿಂದ ಕೈಕಾಲು ಕಟ್ಟಿ ಮೂಗಿಗೆ ಪ್ಲಾಸ್ಟರ್ ಹಾಕಿ ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದರು. ಈ ಸಂಬಂಧ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪೋಷಕರ ಎದುರೇ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಕಾಮಾಂಧರು

ಆದರೆ ಶಶೀಂದ್ರನ್ ಕೊಲೆ ಪ್ರಕರಣದ ಆರೋಪಿಗಳು ಪತ್ತೆಯಾಗದ ಕಾರಣ ಪೊಲೀಸರು 2008 ರಲ್ಲಿ ನ್ಯಾಯಾಲಯಕ್ಕೆ ಸಿ ವರದಿಯನ್ನು ಸಲ್ಲಿಸಿ ಹಾಕಿ ಕೈ ತೊಳೆದುಕೊಂಡಿದ್ದರು.  ಆದರೆ ಘಟನೆ ನಡೆದ ಸಂದರ್ಭದಲ್ಲಿ ಬೆರಳಮ್ರುದೆ ತಜ್ಞರು ಸ್ಥಳದಲ್ಲಿ ಅಕಸ್ಮೀಕವಾಗಿ ಬೆರಳು ಮುದ್ರೆಯನ್ನು ಸಂಗ್ರಹಿಸಿ ಇಟ್ಟುಕೊಂಡಿದ್ದರು.

ಆದರೆ 2010 ರಲ್ಲಿ ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್ ನಿವಾಸಿ ವಾಸೀತ್ ನಿಸಾರ್ ಎಂಬುವರು ತನ್ನ ಸ್ನೇಹಿತರೊಂದಿಗೆ ಜಿಲ್ಲೆಯ ನಂದಿಗಿರಿಧಾಮಕ್ಕೆ ಪ್ರವಾಸಕ್ಕಾಗಿ ಬಂದಿದ್ದ ಸಂದರ್ಭದಲ್ಲಿ ವಾಸೀತ್ ನಿಸಾರ್ ಬಳಿ ಇದ್ದ 3 ಚಿನ್ನದ ಸರಗಳನ್ನು ಕದ್ದು ಹೋಗಿದ್ದ ಹಿನ್ನಲೆಯಲ್ಲಿ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಜಿಲ್ಲೆಯ ಬೆರಳ ಮುದ್ರೆ ಘಟಕದ ಪಿಎಸ್‌ಐ ಹಾಗೂ ಸಿಬ್ಬಂದಿ ನಂದಿಗಿರಿಧಾಮದ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಂಒಬಿ ಕಾರ್ಡ್‌ಗಳಲ್ಲಿನ ಎಂಒಬಿ ಅಸಾಮಿಗಳ ಬೆರಳು ಮುದ್ರೆ ಚೀಟಿಗಳನ್ನು ಅಟೋಮಿಟಿಕ್ ಪಿಂಗರ್ ಪ್ರಿಂಟ್ ಐಡೆಂಟಿ ಫೈಡ್ ಸಿಸ್ಟಮ್‌ನ ತಂತ್ರಾಂಶದಲ್ಲಿ ಪರಿಶೀಲನೆ ನಡೆಸುತ್ತಿದ್ದಾಗ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ 2010 ರಲ್ಲಿ ದಾಖಲಾಗಿದ್ದ ಚಿನ್ನದ ಸರ ಕದ್ದು ಹೋದ ಪ್ರಕರಣದಲ್ಲಿ 2ನೇ ಆರೋಪಿಯಾಗಿದ್ದವನ ಬೆರಳ ಮುದ್ರೆಯು ಯಶವಂತಪುರದಲ್ಲಿ 2006 ರಲ್ಲಿ ಕೊಲೆಗೀಡಾಗಿದ್ದ ವಿಡಿಯೋ ಗೇಮ್ ಸೆಂಟರ್ ಮಾಲೀಕ ಶಶೀಂದ್ರನ್ ಕೊಲೆ ಪ್ರಕರಣದ ಸಂಗ್ರಹಿಸಿದ್ದ ಬೆರಳ ಮುದ್ರೆಗೆ ಹೋಲಿಕೆ ಆಗಿದೆ.

ಈ ಮಾಹಿತಿ ಆಧಾರಿಸಿ ಬೆಂಗಳೂರಿನ ಯಶವಂಪುರ ಠಾಣೆ ಪೊಲೀಸರು ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದ್ದ ಚಿನ್ನದ ಸರ ಕಳವು  ಪ್ರಕರಣದಲ್ಲಿ 2ನೇ ಆರೋಪಿಯಾಗಿದ್ದವನ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ 2006 ರಲ್ಲಿ ತಾನು ಹಾಗೂ ತನ್ನ ಸ್ನೇಹಿತರ ಇಬ್ಬರು ಸೇರಿ ವಿಡಿಯೋ ಗೇಮ್ ಮಾಲೀಕ ಶಶೀಂದ್ರನ್‌ರನ್ನು ಕೊಲೆ ಮಾಡಿರುವುದಾಗಿ ಪೊಲೀಸರ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ. ಈ ಎಲ್ಲ ವಿವರಗಳನ್ನು ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್  ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios