Asianet Suvarna News Asianet Suvarna News

ಅಣ್ಣನ ಮೇಲಿನ ಸೇಡಿಗೆ ತಂದೆ-ತಾಯಿ ಮುಂದೆಯೇ ಬಾಲಕಿ ಮೇಲೆರಗಿದ 8 ಕಾಮುಕರು

* ಇದೊಂದು ದಾರುಣ ಪ್ರಕರಣ
* ತಂದೆ-ತಾಯಿ ಮುಂದೆಯೇ ಮಗಳ ಮೇಲೆ ಸಾಮೂಹಿಕ ರೇಪ್
* ಅಣ್ಣನ ಮೇಲಿನ ಸಿಟ್ಟಿಗೆ ತಂಗಿ ಮೇಲೆ ದೌರ್ಜನ್ಯ
* ಉತ್ತರ ಪ್ರದೇಶದಿಂದ ಘಟನೆ ವರದಿ

16-year-old girl gang-raped by 8 men in front of parents Uttar Pradesh mah
Author
Bengaluru, First Published Jul 7, 2021, 4:43 PM IST

ಬರೇಲಿ(ಜು.  07)  ಪೋಷಕರ ಮುಂದೆಯೇ ಎಂಟು ಜನ ಕಾಮಾಂಧರು 16 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಈ ಘೋರ ಪ್ರಕರಣ ಉತ್ತರ ಪ್ರದೇಶದಿಂದ ವರದಿಯಾಗಿದೆ.

ಅತ್ಯಾಚಾರಕ್ಕೆ ಒಳಗಾದ  ಬಾಲಕಿಯ ಅಣ್ಣ  ಅತ್ಯಾಚಾರಿಗಳ ಕುಟುಂಬದ ಗೆಳತಿಯೊಂದಿಗೆ ಪರಾರಿಯಾಗಿದ್ದ.  ತಮ್ಮ ಕುಟುಂಬದ ಯುವತಿಯೊಂದಿಗೆ ಪರಾರಿಯಾಗಿದ್ದಾನೆ ಎಂದು ಸೇಡು ತೀರಿಸಿಕೊಳ್ಳಲು ಎಂಟು ಜನರು ಈ ಕೃತ್ಯ ಎಸಗಿದ್ದಾರೆ.

ಆರು ವರ್ಷದ ಬಾಲಕಿಯ ಮೇಲೆ ನಿರಂತರ ಅತ್ಯಾಚಾರ ನಡೆಸಿದ ಮುಖಂಡ

ಉತ್ತರ ಪ್ರದೇಶದ ಅಮ್ರೋಹಾ ರೈಲು ನಿಲ್ದಾಣದ ಬಳಿಯ ಮನೆಯೊಂದರಲ್ಲಿ ಈ ಘಟನೆ ನಡೆದಿದೆ.  ಇದೇ ಕಾರಣಕ್ಕೆ ನಾಪತ್ತೆಯಾದ ಯುವತಿ ಕುಟುಂಬದವರು ಜೂನ್ 28 ನಾಪತ್ತೆಯಾದ ಯುವಕನ ಕುಟುಂಬದ ಬಳಿ ಬಂದಿದ್ದಾರೆ. ನಾಪತ್ತೆಯಾದವರನ್ನು ಹುಡುಕಬೇಕು  ಎಂಬ ಕಾರಣಕ್ಕೆ ತಮ್ಮ ಜತೆಗೆ ಕರೆದುಕೊಂಡು ಹೋಗಿದ್ದಾರೆ.

ಆದರೆ ತಮ್ಮ ಮನೆಗೆ  ಕರೆದುಕೊಂಡು ಹೋದ ನಂತರ ದಾರುಣ ಕೆಲಸ ಮಾಡಿದ್ದಾರೆ.  ತಂದೆ ತಾಯಿ ಮತ್ತು ಕುಟುಂಬದವರ ಮುಂದೇಯೇ ಸಿಟ್ಟಿನಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಪೊಲೀಸರಿಗೆ ದೂರು ಕೊಟ್ಟರೆ  ಕೊಲೆ ಮಾಡುವ ಬೆದರಿಕೆಯನ್ನು ಹಾಕಿದ್ದಾರೆ.

ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.  ಆರೋಪಿಗಳು ಸಮಾಜದಲ್ಲಿ ಅತ್ಯಂತ ಪ್ರಭಾವಶಾಲಿಗಳಾಗಿದ್ದು ನಮಗೆ ನ್ಯಾಯ ಸಿಗಬೇಕು ಎಂದು ಸಂತ್ರಸ್ತೆ ಕುಟುಂಬದವರು ಮನವಿ ಮಾಡಿಕೊಂಡಿದ್ದಾರೆ.

Follow Us:
Download App:
  • android
  • ios