ಲೋನ್‌ ಕಟ್ಟದ ತಂದೆ, ರಿಕವರಿಗಾಗಿ ಆತನ ಮಗಳನ್ನೇ ಕಿಡ್ನಾಪ್‌ ಮಾಡಿದ ಏಜೆಂಟ್‌!

ಸಾಲ ಪಡೆದುಕೊಂಡು ಅದನ್ನು ಕಟ್ಟದೆ ಇದ್ದ ವ್ಯಕ್ತಿಯ 11 ವರ್ಷದ ಬಾಲಕಿಯತನ್ನು ಲೋನ್‌ ರಿಕವರಿ ಏಜೆಂಟ್‌ ಕಿಡ್ನಾಪ್‌ ಮಾಡಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಈ ಕುರಿತಂತೆ ಫೈನಾನ್ಸ್‌ ಕಂಪನಿಯ ಏಜೆಂಟ್‌ನಲ್ಲಿ ಬಂಧಿಸಲಾಗಿದೆ.

Finance company representative kidnaps teen to recover loan in Tamil Nadu san

ಚೆನ್ನೈ (ಜು.1): ತಂದೆ ಲೋನ್‌ ಕಟ್ಟದ ಕಾರಣಕ್ಕಾಗಿ ಲೋನ್‌ ರಿಕವರಿ ಏಜೆಂಟ್‌ ಆತನ 11 ವರ್ಷದ ಮಗಳನ್ನು ಕಿಡ್ನಾಪ್‌ ಮಾಡಿದ ಘಟನೆ ನಡೆದಿದೆ. ಫೈನಾನ್ಸ್ ಕಂಪನಿಯೊಂದರ 27 ವರ್ಷದ ಏಜೆಂಟ್‌, ಶುಕ್ರವಾರ 11 ವರ್ಷದ ಬಾಲಕಿಯನ್ನು ಆತ ಅಪಹರಣ ಮಾಡಿದ್ದ. ಬಾಲಕಿಯ ತಂದೆ ಕಳೆದ ಕೆಲವು ತಿಂಗಳುಗಳಿಂದ ಸಾಲದ ಕಂತುಗಳನ್ನು ಪಾವತಿ ಮಾಡಲು ವಿಫಲವಾಗಿದ್ದ ಕಾರಣಕ್ಕೆ ಆತನ ಮಗಳನ್ನು ಮನೆಯಿಂದ ಅಪಹರಿಸಿದ್ದ ಎಂದು ಆರೋಪಿಸಲಾಗಿದೆ. ಆರೋಪಿಯನ್ನು ಪೊಲೀಸರು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ.  ದಿನಗೂಲಿಯಾಗಿ ಕೆಲಸ ಮಾಡುವ 32 ವರ್ಷದ ವನತು ರಾಜಾ ತಮಿಳುನಾಡಿನ ಕೀರನೂರಿನಲ್ಲಿರುವ ಖಾಸಗಿ ಫೈನಾನ್ಸ್ ಕಂಪನಿಯಲ್ಲಿ 50 ಸಾವಿರ ರೂಪಾಯಿ ಸಾಲ ಪಡೆದಿದ್ದರು. ಉದ್ಯೋಗಾವಕಾಶಗಳ ಕೊರತೆಯಿಂದಾಗಿ ರಾಜಾ ಕೆಲವು ತಿಂಗಳುಗಳಿಂದ ಸಾಲ ಮರು ಪಾವತಿ ಮಾಡೋದು ಸಾಧ್ಯವಾಗಿರಲಿಲ್ಲ. ಫೈನಾನ್ಸ್ ಕಂಪನಿಯ ಏಜೆಂಟ್‌ ಆಗಿದ್ದ ವಿಘ್ನೇಶ್ ಅವರು ಬಾಕಿ ಹಣವನ್ನು ವಸೂಲಿ ಮಾಡಲು ತಿರುನೆಲ್ವೆಲ್ಲಿ ಜಿಲ್ಲೆಯ ಮರುತೂರ್ ಗ್ರಾಮದಲ್ಲಿರುವ ರಾಜಾ ಅವರ ನಿವಾಸಕ್ಕೆ ಭೇಟಿ ನೀಡಿದ್ದರು. ಈ ವೇಳೆ ರಾಜಾ ಅವರ 11 ವರ್ಷದ ಮಗಳು ಮನೆಯಲ್ಲಿದ್ದಳು, ತಂದೆಯ ಬಗ್ಗೆ ಕೇಳಿದಾಗ ಅವರು ಇಲ್ಲ ಎಂದು ವಿಘ್ನೇಶ್‌ಗೆ ತಿಳಿಸಿದ್ದಳು. 

ಈ ವೇಳೆ ವಿಘ್ನೇಶ್ ರಾಜಾ ಮಗಳನ್ನು ಅಪಹರಿಸಿ ಫೈನಾನ್ಸ್ ಕಂಪನಿಯ ಕಚೇರಿಗೆ ಕರೆದೊಯ್ದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.  ಮಗಳು ಕಾಣೆಯಾಗಿರುವ ವಿಷಯ ತಿಳಿದ ರಾಜಾ ಕೂಡಲೇ ಕೀರನೂರು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಮಗುವಿನ ಸ್ಥಳವನ್ನು ಪತ್ತೆಹಚ್ಚಿದ ಪೊಲೀಸರು, ಹಣಕಾಸು ಕಂಪನಿಯ ಕಚೇರಿಗೆ ಬಂದಿದ್ದರು.

ಗರ್ಭಿಣಿಗೆ ಟ್ರ್ಯಾಕ್ಟರ್‌ ಗುದ್ದಿ ಸಾಯಿಸಿದ ಲೋನ್‌ ರಿಕವರಿ ಅಧಿಕಾರಿಗಳು, ಮಹೀಂದ್ರಾ ಫೈನಾನ್ಸ್‌ನಿಂದ ಕ್ಷಮೆ!

ಅಪಹರಣಕ್ಕೊಳಗಾಗಿದ್ದ ಮಗುವನ್ನು ಪೊಲೀಸರು ಯಶಸ್ವಿಯಾಗಿ ರಕ್ಷಿಸಿದ್ದಾರೆ. ವಿಘ್ನೇಶ್ ಅವರನ್ನು ಶುಕ್ರವಾರ ಬಂಧಿಸಲಾಗಿದ್ದು, ಅಪಹರಣ ಪ್ರಕರಣದಲ್ಲಿ ಕೇಸ್‌ ದಾಖಲಿಸಲಾಗಿದೆ. ಅಲ್ಲದೆ, ತನಿಖೆಯ ಭಾಗವಾಗಿ ಅವರ ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಈ ವಿಷಯವು ಪ್ರಸ್ತುತ ಹೆಚ್ಚಿನ ತನಿಖೆಯಲ್ಲಿದೆ.

ಪ್ರಭಾವಿ ರಾಜಕಾರಣಿಯ ಆಪ್ತನನ್ನೇ ಮುಗಿಸಲು ಹೋದವನು ತಾನೇ ಹೆಣವಾದ!

Latest Videos
Follow Us:
Download App:
  • android
  • ios