Gadag: 10 ಸಾವಿರ ರೂಪಾಯಿಗಾಗಿ ಮಾರಾಮಾರಿ: ಏಳು ಜನರಿಗೆ ಗಾಯ
ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ನಿನ್ನೆ ತಡರಾತ್ರಿ ಹಣ ಕಾಸಿನ ವಿಚಾರದಲ್ಲಿ ಎರಡು ಗುಂಪಿನ ಮಧ್ಯೆ ಮಾರಾಮಾರಿ ನಡೆದಿದ್ದು ಏಳು ಜನರಿಗೆ ಗಾಯವಾಗಿದೆ. ಲಕ್ಷ್ಮೇಶ್ವರ ಪಟ್ಟಣದ ಬಸ್ ನಿಲ್ದಾಣ ಹಾಗೂ ತಾಲೂಕು ಆಸ್ಪತ್ರೆ ಅಂಗಳದಲ್ಲಿ ಬಡಿದಾಟ ನಡೆದಿದ್ದು, ಘಟನಾವಳಿಯ ದೃಶ್ಯ ಸಿಸಿ ಟಿವಿ ಹಾಗೂ ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿವೆ.
ಗದಗ (ಆ.05): ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ನಿನ್ನೆ ತಡರಾತ್ರಿ ಹಣ ಕಾಸಿನ ವಿಚಾರದಲ್ಲಿ ಎರಡು ಗುಂಪಿನ ಮಧ್ಯೆ ಮಾರಾಮಾರಿ ನಡೆದಿದ್ದು ಏಳು ಜನರಿಗೆ ಗಾಯವಾಗಿದೆ. ಲಕ್ಷ್ಮೇಶ್ವರ ಪಟ್ಟಣದ ಬಸ್ ನಿಲ್ದಾಣ ಹಾಗೂ ತಾಲೂಕು ಆಸ್ಪತ್ರೆ ಅಂಗಳದಲ್ಲಿ ಬಡಿದಾಟ ನಡೆದಿದ್ದು, ಘಟನಾವಳಿಯ ದೃಶ್ಯ ಸಿಸಿ ಟಿವಿ ಹಾಗೂ ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿವೆ.
ಪಟ್ಟಣದ ಇರ್ಫಾನ್ ತಹಶೀಲ್ದಾರ್, ಶಬೀಲ್ ಬಂಕಾಪುರ ಮಧ್ಯ ಆರು ತಿಂಗಳ ಹಿಂದೆ ಹಣಕಾಸಿನ ವ್ಯವಹಾರ ನಡೆದಿತ್ತು. ಇರ್ಫಾನ್ ಬಳಿ ಶಬೀಲ್ 10 ಸಾವಿರ ರೂಪಾಯಿ ಹಣ ಪಡೆದಿದ್ದ. ಆದ್ರೆ, ಹಣ ವಾಪಾಸ್ ಕೊಡದೇ ಸತಾಯಿಸ್ತಿದ್ನಂತೆ. ನಿನ್ನೆ ರಾತ್ರಿ ಬಸ್ ನಿಲ್ದಾಣದ ಬಳಿ ಭೇಟಿಯಾಗಿದ್ದ ಶಬೀಲ್ ಬಳಿ ಇರ್ಫಾನ್ ಹಣ ಕೇಳಿದ್ದಾನೆ. ಹಣ ಕೊಡದೇ ಸತಾಯಿಸ್ತಿದ್ದ ಶಬೀಲ್ ಗೆ ನಡು ರಸ್ತೆಯಲ್ಲೇ ಹಲ್ಲೆ ಮಾಡಿದ್ದಾನೆ. ಸ್ಥಳದಲ್ಲಿ ಇದ್ದ ವ್ಯಕ್ತಿಯೊಬ್ಬನ ಮೊಬೈಲ್ ನಲ್ಲಿ ಹೊಡೆದಾಟದ ವೀಡಿಯೋ ಚಿತ್ರೀಕರಣವಾಗಿದೆ.
ಮನೆ ಮನೆ ಬೆಳಗುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ: ಸಚಿವ ತಿಮ್ಮಾಪೂರ
ನಂತರ ಇಬ್ಬರೂ ತಾಲೂಕು ಆಸ್ಪತ್ರೆಗೆ ತೆರಳಿದ್ದಾರೆ. ಇಬ್ಬರ ಬೆಂಬಲಿಗರು ಆಸ್ಪತ್ರೆ ಬಳಿ ಸೇರಿದ್ರಂತೆ. ಇಬ್ಬರ ಬೆಂಬಲಿಗರ ಮಧ್ಯೆ ಆಸ್ಪತ್ರೆಯಲ್ಲೂ ಮಾರಾಮಾರಿ ನಡೆದಿದೆ. ಘಟನೆಯ ದೃಶ್ಯ ಆಸ್ಪತ್ರೆಯ ಸಿಸಿಟಿವಿಯಲ್ಲಿ ಸೇರಿಯಾಗಿದ್ದ ಮಾರಾಮಾರಿಯಲ್ಲಿ ಏಳು ಜನರಿಗೆ ಗಾಯಗಳಾಗಿವೆ. ಗಾಯಾಳುಗಳನ್ನ ಸ್ಥಳೀಯ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗಿದೆ. ಘಟನೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನ ಬಂಧಿಸಿ ವಿಚಾರಣೆ ನಡೆಸಲಾಗ್ತಿದೆ. ಸ್ಥಳಕ್ಕೆ ಭೇಟಿ ನೀಡಿದ್ದ ಎಸ್ ಪಿ ಬಿಎಸ್ ನೇಮಗೌಡ ಮಾಹಿತಿ ಪಡೆದಿದ್ದಾರೆ..
ಘಟನೆಯ ಹಿಂದೆ ಸ್ಥಳೀಯವಾಗಿ ಗೂಂಡಾಗಿರಿ ಮಾಡಿಕೊಂಡು ಓಡಾಡೋ ರೌಡಿ ಶೀಟರ್ ಗಳ ಕುಮ್ಮಕ್ಕು ಇದೆ ಅಂತಾ ಸ್ಥಳೀಯರು ಮಾತ್ನಾಡ್ತಿದಾರೆ. ಲಕ್ಷ್ಮೇಶ್ವರ ಪಟ್ಟಣದಲ್ಲಿ ರೌಡಿಗಳ ಅಟ್ಟಹಾಸ ಮಿತಿಮೀರುತ್ತಿದೆ. ಆಗಾಗ ಬಾಲ ಬಿಚ್ಚೋ ಪುಡಿರೌಡಿಗಳ ಬಾಲ ಕಟ್ ಮಾಡ್ಬೇಕಿದೆ ಅನ್ನೋದು ಪಟ್ಟಣದ ಜನರ ಮಾತು.
ಕೊಡಗಿನಲ್ಲಿ ಮಳೆಗೆ ಮುರಿದು ಬಿದ್ದ 1638 ವಿದ್ಯುತ್ ಕಂಬಗಳು: 2 ಕೋಟಿ ನಷ್ಟ!
ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ ಗದಗ ಎಸ್ ಪಿ ಬಿಎಸ್ ನೇಮಗೌಡ, ಹಣಕಾಸಿನ ವಿಚಾರಕ್ಕೆ ಗಲಾಟೆ ನಡೆದಿದೆ ಅನ್ನೋದು ಪ್ರಾಥಮಿಕ ಮಾಹಿತಿ. ಇನ್ನಷ್ಟು ತನಿಖೆಯ ಬಳಕ ಪ್ರಕರಣದ ಆಳ ತಿಳಿಯಲಿದೆ. ಸಮಾಜದಲ್ಲಿ ಶಾಂತಿ ಕದಡುವ ಯಾರೇ ಆಗಿದ್ರೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ತೇವೆ ಅಂತಾ ಭರವಸೆ ನೀಡಿದ್ದಾರೆ.