Asianet Suvarna News Asianet Suvarna News

Raichur: ಜವಾಹರ ನವೋದಯ ವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಬಡಿದಾಟ

ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಕನ್ನಾಪೂರಹಟ್ಟಿ ಹೊರವಲಯದ ಜವಾಹರ ನವೋದಯ ವಿದ್ಯಾಲಯದಲ್ಲಿ 8 ಮತ್ತು 9ನೇ ತರಗತಿಯ ವಿದ್ಯಾರ್ಥಿಗಳು ಕ್ಷುಲ್ಲಕ ಕಾರಣಕ್ಕೆ ಹೊಡೆದಾಟ ಮಾಡಿಕೊಂಡಿದ್ದಾರೆ.

fight between jawahar navodaya vidyalaya school students in raichur gvd
Author
Bangalore, First Published Apr 9, 2022, 4:59 PM IST | Last Updated Apr 9, 2022, 4:59 PM IST

ವರದಿ: ಜಗನ್ನಾಥ ಪೂಜಾರ್, ಏಷ್ಯಾ ನೆಟ್ ಸುವರ್ಣ ನ್ಯೂಸ್

ರಾಯಚೂರು (ಏ.09): ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಕನ್ನಾಪೂರಹಟ್ಟಿ ಹೊರವಲಯದ ಜವಾಹರ ನವೋದಯ ವಿದ್ಯಾಲಯದಲ್ಲಿ (Jawahar Navodaya Vidyalaya) 8 ಮತ್ತು 9ನೇ ತರಗತಿಯ ವಿದ್ಯಾರ್ಥಿಗಳು (Students) ಕ್ಷುಲ್ಲಕ ಕಾರಣಕ್ಕೆ ಹೊಡೆದಾಟ ಮಾಡಿಕೊಂಡಿದ್ದಾರೆ. ಶಿಕ್ಷಕರ ಎದುರೇ ವಿದ್ಯಾರ್ಥಿಗಳು ಪರಸ್ಪರ ಹೊಡೆದಾಡಿಕೊಂಡಿದ್ದು, ಹೊಡೆದಾಟದಲ್ಲಿ ಸುಮಾರು 20ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಂಭೀರ ಗಾಯಗಳಾಗಿವೆ. ಈ ಘಟನೆ ಬಳಿಕ ವಿದ್ಯಾರ್ಥಿಗಳ ಪೋಷಕರನ್ನ ಕರೆದು ಮಕ್ಕಳನ್ನು ಮನೆಗೆ ಕಳುಹಿಸಲಾಗಿದೆ.

ನವೋದಯ ಶಾಲೆಯ ಹಿನ್ನೆಲೆ: 1994 ರಲ್ಲಿ ಆರಂಭವಾದ ಕೇಂದ್ರ ಸರಕಾರದ ನವೋದಯ ವಿದ್ಯಾಲಯದಲ್ಲಿ ಸುಮಾರು 500ಕ್ಕೂ ಹೆಚ್ಚು ವಿದ್ಯಾರ್ಥಿಗಳು 6 ರಿಂದ 12 ನೇ ತರಗತಿಯವರೆಗೆ ಆಂಗ್ಲ ಮಾಧ್ಯಮದಲ್ಲಿ ಅಭ್ಯಾಸ ಮಾಡುತ್ತಿದ್ದು,‌ 50ಕ್ಕೂ ಹೆಚ್ಚು ಶಿಕ್ಷಕರು ಪಾಠ ಬೋಧನೆ ಮಾಡುತ್ತಿದ್ದಾರೆ. 

ರಾಯಚೂರಲ್ಲಿ ಎಗ್ಗಿಲ್ಲದೆ ನಡೀತಿದೆ ಅಕ್ರಮ ಮದ್ಯ ಮಾರಾಟ ದಂಧೆ..!

ವಿದ್ಯಾರ್ಥಿಗಳ ‌ನಡುವೆ ಗಲಾಟೆ ಆಗಿ ಏನಾಗಿದೆ!: ಮೊನ್ನೆ ಗುರುವಾರ ರಾತ್ರಿ 10ಗಂಟೆ ಸುಮಾರಿಗೆ 8 ಮತ್ತು 9ನೇ ತರಗತಿಯ ಮಕ್ಕಳು ಕ್ಷುಲ್ಲಕ ಕಾರಣಕ್ಕೆ ಶಿಕ್ಷಕರ ಎದುರೇ ಬಡಿಗೆಗಳನ್ನು ಹಿಡಿದುಕೊಂಡು ಪರಸ್ಪರ ಬಡಿದಾಡಿಕೊಂಡು ಗಂಭೀರ ಗಾಯಗಳನ್ನು ಮಾಡಿಕೊಂಡಿದ್ದಾರೆ. ವಿದ್ಯಾರ್ಥಿಗಳ ಗಲಾಟೆಯಲ್ಲಿ ಶಾಲೆಯ ಕಟ್ಟಡದ ಕಿಟಕಿಯ ಗಾಜು,ವಿದ್ಯುತ್ ಸಾಮಗ್ರಿಗಳನ್ನು ಬಡಿಗೆಯಿಂದ ಹೊಡೆದು ಜಖಂಗೊಳಿಸಿದ್ದಾರೆ.

ಗಲಾಟೆಗೆ ಶಿಕ್ಷಕರು ಮತ್ತು ಪ್ರಾಂಶುಪಾಲರೇ ಹೊಣೆಯಂತೆ!: ನವೋದಯ ವಸತಿಯಲ್ಲಿ ಶಾಲೆಯ 8-9ನೇ ತರಗತಿ ವಿದ್ಯಾರ್ಥಿಗಳ ‌ಗಲಾಟೆಗೆ ಶಿಕ್ಷಕರು ಮತ್ತು ಪ್ರಾಂಶುಪಾಲರೇ ಕಾರಣವೆಂದು ಪೋಷಕರ ಆರೋಪವಾಗಿದೆ. ಇಷ್ಟು ದೊಡ್ಡಮಟ್ಟದ ಗಲಾಟೆ ‌ನಡೆದರೂ ಪ್ರಾಚಾರ್ಯರಾಗಲಿ ಶಿಕ್ಷಕರಾಗಲೀ ಠಾಣೆಗೆ ಯಾವುದೇ ದೂರನ್ನೂ ನೀಡದೇ ಇರುವುದು ನಾನಾ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ವಿದ್ಯಾಲಯದ ಪ್ರಾಚಾರ್ಯ ಹಾಗೂ ಕೆಲ ಶಿಕ್ಷಕರ ಮಧ್ಯೆ ಹೊಂದಾಣಿಕೆ ಇರದೇ ಇದ್ದರಿಂದ ಕೆಲ ಮಕ್ಕಳನ್ನು ಪ್ರಾಚಾರ್ಯರು ಎತ್ತಿಕಟ್ಟದರೆ, ಇನ್ನೂ ಕೆಲ ವಿದ್ಯಾರ್ಥಿಗಳನ್ನು ಶಿಕ್ಷಕರು ಎತ್ತಿಕಟ್ಟಿ ಜಗಳವಾಡಿಸಿದ್ದಾರೆ ಎಂಬ ಆರೋಪವಿದೆ.

Raichur: ಮನೆ-ಮನೆಗೆ ಪೈಪ್ ಮೂಲಕ ಗ್ಯಾಸ್ ಯೋಜನೆಗೆ ವಿರೋಧ

ಮಕ್ಕಳ ಜಗಳದಿಂದ ಬಯಲಾಯ್ತು ನವೋದಯ ವಿದ್ಯಾಲಯದ ನಿಜ ಬಣ್ಣ!: ನವೋದಯ ವಸತಿ ಶಾಲೆ ಅಂದ್ರೆ ಶಿಕ್ಷಣಕ್ಕೆ ನಂಬರ್ ಒನ್ ಎಂಬ ಮಾತು ಇದೆ. ಆದರೆ ಲಿಂಗಸೂಗೂರು ತಾಲೂಕಿನ ಕನ್ನಾಪೂರಹಟ್ಟಿಯ ವಿದ್ಯಾಲಯದಲ್ಲಿ ದಿನ ನಿತ್ಯ ಮಕ್ಕಳು ಅಭ್ಯಾಸಕ್ಕಿಂತ  ಒಂದಿಲೊಂದು ಗಲಾಟೆ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಮೂಲ ಕಾರಣವೇ ಶಿಕ್ಷಕರು ಆಗಿದ್ದಾರೆ. ಹೀಗಾಗಿ ಈ ವಿದ್ಯಾಲಯದಲ್ಲಿ ಇರುವ ಶಿಕ್ಷಕರನ್ನು ವರ್ಗಾವಣೆ ಮಾಡಿ ಮಕ್ಕಳ ಅಭ್ಯಾಸಕ್ಕೆ ಅನುಕೂಲವಾಗುವ ವಾತಾವರಣ ನಿರ್ಮಿಸಬೇಕೆಂದು ಪೋಷಕರು ಆಗ್ರಹಿಸಿದ್ದಾರೆ.

Latest Videos
Follow Us:
Download App:
  • android
  • ios