ಮುಂಬೈ(ಅ. 25) ಲೈಂಗಿಕ ದೌರ್ಜನ್ಯಕ್ಕೆ ತುತ್ತಾದ ಶ್ವಾನವೊಂದು ಮುಂಬೈನ ಪೊವಾರಿ ಏರಿಯಾದಲ್ಲಿ ಸಿಕ್ಕಿದೆ.  ಎಂಟು ವರ್ಷದ ಶ್ವಾನದ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದ್ದು ರಕ್ತದ ಮಡುವಿನಲ್ಲಿ ಬಿದ್ದುಕೊಂಡಿತ್ತು. 

ನೂರಿ ಎನ್ನುವ ಶ್ವಾನದ ಪರಿಸ್ಥಿತಿ ಚಿಂತಾಜನಕವಾಗಿದೆ ಎಂಬ ವಿಡಿಯೋ ದೇವಿ ಶೇಠ್ ಎಂಬುವವರಿಗೆ ಬಂದು ಸೇರುತ್ತದೆ.  ಶ್ವಾನದ ಖಾಸಗಿ ಅಂಗದೊಳಕ್ಕೆ ಹನ್ನೊಂದು ಇಂಚಿನ ಮರದ ತುಂಡನ್ನು ಸಿಕ್ಕಿಸಲಾಗಿತ್ತು.  ತಕ್ಷಣ ಎನ್‌ಜಿ ಒದ ನೆರವು ಪಡೆದುಕೊಂಡು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಆಕೆ(ಶ್ವಾನ) ರಕ್ತದ ಮಡುವಿನಲ್ಲಿ ಬಿದ್ದುಕೊಂಡಿತ್ತು. ಅನೇಕರು ಪಕ್ಕದಲ್ಲಿಯೇ ನಡೆದುಕೊಂಡು ಹೋದರೂ ಯಾರೂ ಗಮನ ನೀಡಲಿಲ್ಲ. ನಮ್ಮ ಸಮಾಜ ಎಲ್ಲಿಗೆ ಬಂದು ತಲುಪಿದೆ? ಮೂಕ ಪ್ರಾಣಿಗೆ ಯಾರೂ ನೆರವು ನೀಡಲಿಲ್ಲ.. ಎಂದು ಎನ್‌ಜಿಒದ ಸಿಬ್ಬಂದಿ ಒಬ್ಬರು ನೊಂದು ನುಡಿಯುತ್ತಾರೆ.

ಈ ಪ್ರಕರಣಕ್ಕೆ ಸಂಬಂಧಿಸಿ ಬಾಂಬೆ ಅನಿಮಲ್ ರೈಟ್ಸ್ (ಬಿಎಆರ್) ಪ್ರಕರಣ ದಾಖಲಿಸಿಕೊಂಡಿದೆ.   ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಶ್ವಾನ ಚೇತರಿಸಿಕೊಳ್ಳುತ್ತಿದೆ.