Asianet Suvarna News Asianet Suvarna News

Chintamani Crime ಮನೆಯಿಂದ ಮಗನನ್ನು ಹೊರಹಾಕಲು ಕೇಸ್‌ ಹಾಕಿ ಗೆದ್ದ ತಂದೆ, ಸೇಡಿಗೆ ಸೇಡು!

  • ಕೊರೋನಾ ಸಮಯದಲ್ಲಿ ತಂದೆಯನ್ನು ಹೊರಹಾಕಿದ್ದ ಮಗ
  • ಮಗ ಹಾಗು ಕುಟುಂಬ ಹೊರಹಾಕಲು ನ್ಯಾಯಾಲಯ ಮೊರೆ ಹೋದ ತಂದೆ
  • ಮಗನಿಗೆ ಕಾನೂನಿನ ಪಾಠ ಕಲಿಸಿದ ತಂದೆ
     
Father who won Case against his son to expel from home Chintamani Karnataka ckm
Author
Bengaluru, First Published Jan 25, 2022, 5:33 AM IST

ಚಿಂತಾಮಣಿ(ಜ.25):  ತಂದೆಯನ್ನು(Father) ಮನೆಯಿಂದ ಹೊರ ಹಾಕಿದ್ದ ಮಗನಿಗೆ(Son) ಕಾನೂನಿನ(Law) ಪಾಠ ಕಲಿಸಲು ತಂದೆ ನ್ಯಾಯಾಲಯದ ಮೊರೆ ಹೋಗಿ ಮಗನನ್ನೇ ಮನೆಯಿಂದ ಹೊರ ಕಳುಹಿಸಿರುವ ಘಟನೆ ಚಿಂತಾಮಣಿ ನಗರದಲ್ಲಿ ಸೋಮವಾರ ನಡೆದಿದೆ. ನಗರದ ಅಂಜನಿ ಬಡಾವಣೆಯ ನಿವಾಸಿ ಮುನಿಸ್ವಾಮಿ ಎಂಬುವವರೇ ತನ್ನ ಮಗನಾದ ಸುಭಾಷ್‌ ಎಂಬುವನನ್ನು ಕುಟುಂಬ ಸಮೇತ ಮನೆಯಿಂದ ಹೊರ ಹಾಕಿದ್ದಾರೆ.

ಕಳೆದ ವರ್ಷ ಮುನಿಸ್ವಾಮಿ ಪತ್ನಿ ಕೊರೋನಾದಿಂದ(Coronavirus) ಮೃತಪಟ್ಟಿದ್ದರು, ಆ ಸಮಯದಲ್ಲಿ ಮುನಿಸ್ವಾಮಿಯನ್ನು ಮಗ ಸುಭಾಷ್‌ ಮತ್ತು ಆತನ ಪತ್ನಿ ಮನೆಯಿಂದ(Home) ಹೊರಹಾಕಿದ್ದರು ಎನ್ನಲಾಗಿದೆ. ಇದರಿಂದ ಕುಪಿತಗೊಂಡ ಮುನಿಸ್ವಾಮಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ತನ್ನ ಸ್ವತ್ತಿನಲ್ಲಿ ತನ್ನ ಮಗ ಅಕ್ರಮ ಪ್ರವೇಶ ಮಾಡಿದ್ದಾನೆಂದು ನ್ಯಾಯಾಲಯದಲ್ಲಿ ದಾವೆ(Lagal Fight) ಹೂಡಿ ಗೆದ್ದ ಮುನಿಸ್ವಾಮಿ, ಸೋಮವಾರ ಚಿಂತಾಮಣಿ ನಗರಠಾಣೆಯ ಪೊಲೀಸರ(Police) ರಕ್ಷಣೆಯಲ್ಲಿ ಮಗ ಮತ್ತು ಆತನ ಪತ್ನಿಯನ್ನು ಮನೆಯಿಂದ ಹೊರಹಾಕಿ ಮೆಯನ್ನು ಸ್ವಾಧೀನಕ್ಕೆ ಪಡೆದಿದ್ದಾರೆ.

Illicit Relationship: ಮದುವೆಯಾದ್ರೂ ಮತ್ತೊಬ್ಬಳ ಜತೆ ಲವ್ವಿಡವ್ವಿ: ಪ್ರಶ್ನಿಸಿದ ಹೆಂಡ್ತಿ ಮೇಲೆ ಮನಬಂದಂತೆ ಹಲ್ಲೆ

ಈ ಸಂದರ್ಭದಲ್ಲಿ ಮುನಿಸ್ವಾಮಿ ಮಾತನಾಡಿ ಕಳೆದ ವರ್ಷ ನನ್ನ ಮಗ ನನ್ನನ್ನು ಮನೆಯಿಂದ ಹೊರ ಹಾಕಿದ್ದ ಆದರೆ ನಾನು ನ್ಯಾಯಾಲಯದ ಮೊರೆ ಹೋಗಿದ್ದ ವೇಳೆ, ನನ್ನ ಪರ ತೀರ್ಪು ಬಂದಿದ್ದರಿಂದ ಮಗನನ್ನು ಮನೆಯಿಂದ ಹೊರಹಾಕಿದ್ದೇನೆ ಎಂದರು.

ಈ ವೇಳೆ ಚಿಂತಾಮಣಿ ನಗರ ಪೊಲೀಸ್‌ ಠಾಣೆಯ ಇನ್ಸ್‌ಪೆಕ್ಟರ್‌ ರಂಗಸ್ವಾಮಯ್ಯ, ಎಎಸ್‌ಐ ಮುಕ್ತಿಯಾರ್‌ ಪಾಷಾ ಸೇರಿದಂತೆ ಸಿಬ್ಬಂದಿ ಸ್ಥಳದಲ್ಲಿ ಹಾಜರಿದ್ದು ಯಾವುದೇ ರೀತಿಯ ಆಹಿತಕರ ಘಟನೆಗಳು ಆಗದಂತೆ ಭದ್ರತೆ ಕಲ್ಪಿಸಿದ್ದರು.

ಬೈಕ್‌ಗಳ ಕದ್ದು ಪತ್ನಿ, ಸಂಬಂಧಿಕರಿಗೆ ಉಡುಗೊರೆಯಾಗಿ ಕೊಡುತ್ತಿದ್ದ
ರಾಜಾಜಿನಗರದ ಭರತ್‌ (32) ಬಂ​ಧಿತ. ಆರೋಪಿಯಿಂದ ಏಳು ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ. ರಾಜಾಜಿನಗರ ನಿವಾಸಿ ನರೇಶ್‌ ಎಂಬುವವರು ಜ.16ರಂದು ರಾತ್ರಿ 10 ಗಂಟೆಗೆ ತಮ್ಮ ಮನೆ ಮುಂದೆ ದ್ವಿಚಕ್ರ ವಾಹನ ನಿಲುಗಡೆ ಮಾಡಿದ್ದರು. ಮಾರನೇ ದಿನ ಎದ್ದು ನೋಡಿದಾಗ ದ್ವಿಚಕ್ರ ವಾಹನ ಇರಲಿಲ್ಲ. ಈ ಸಂಬಂಧ ನೀಡಿದ್ದ ದೂರಿನ ಮೇರೆಗೆ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿ ಆಧರಿಸಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Bengaluru: ಮಗುವಿಗೆ ಮದ್ಯ ಕುಡಿಸಿ ವಿಕೃತಿ: ತಾಯಿಯ ಗುಪ್ತಾಂಗ ಮುಟ್ಟಿ ಅಸಭ್ಯ ವರ್ತನೆ

ಎಸ್‌ಎಸ್‌ಎಲ್‌ಸಿ ವ್ಯಾಸಂಗ ಮಾಡಿರುವ ಆರೋಪಿಯು ವಿವಾಹಿತನಾಗಿದ್ದು, ಗುತ್ತಿಗೆದಾರರೊಬ್ಬರ ಬಳಿ ಕೆಲಸ ಮಾಡುತ್ತಿದ್ದ. ಆರೋಪಿಯು ದ್ವಿಚಕ್ರ ವಾಹನ ಕದಿಯುವ ಕೆಟ್ಟಚಾಳಿ ಮೈಗೂಡಿಸಿಕೊಂಡಿದ್ದ. ಕದ್ದ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದರೆ, ಪೊಲೀಸರಿಗೆ ಸಿಕ್ಕಿ ಬೀಳುವ ಭಯದಿಂದ ಹೆಂಡತಿ ಹಾಗೂ ಸಂಬಂಧಿಕರಿಗೆ ಉಡುಗೊರೆ ನೀಡುತ್ತಿದ್ದ. ಆರೋಪಿ ಸಹ ಮೂರು ದ್ವಿಚಕ್ರ ವಾಹನ ಇರಿಸಿಕೊಂಡು ಓಡಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯ ಬಂಧನದಿಂದ ರಾಜಾಜಿನಗರ, ಬಸವೇಶ್ವರನಗರ ಹಾಗೂ ಕಲಾಸಿಪಾಳ್ಯ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಕಳುವಾಗಿದ್ದ ಏಳು ವಾಹನ ಕಳವು ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಆರೋಪಿಗಳಿಗೆ ನ್ಯಾಯಾಂಗ ಬಂಧನ
ಚಳ್ಳಕೆರೆ: ತಾಲೂಕಿನ ರಂಗವ್ವನಹಳ್ಳಿ ಮತ್ತು ರಾಮಜೋಗಿಹಳ್ಳಿ ಗ್ರಾಮದಲ್ಲಿ ನಡೆದ ಕೊಲೆಗಳ ಮೂವರು ಆರೋಪಿಗಳಿಗೆ ನ್ಯಾಯಾಲಯ 10 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದೆ.ರಾಮಜೋಗಿಹಳ್ಳಿ ರುದ್ರಮ್ಮ ಕೊಲೆ ಆರೋಪಿ ಮುದ್ದಕ್ಕ ಮತ್ತು ರಂಗವ್ವನಹಳ್ಳಿ ಜಯರಾಮಪ್ಪನ ಕೊಲೆ ಆರೋಪಿಗಳಾದ ಬಿ.ಚನ್ನಪ್ಪ, ಆರ್‌.ಓಬಳೇಶ್‌ಗೆ ಒಟ್ಟು ಮೂವರು ಆರೋಪಿಗಳಿಗೆ ಫೆ.5ರ ತನಕ ನ್ಯಾಯಾಂಗ ಬಂಧನ ವಿಧಿಸಿ ಇಲ್ಲಿನ ಜೆಎಂಎಫ್‌ಸಿ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ. ಮೂವರು ಆರೋಪಿಗಳನ್ನು ಚಿತ್ರದುರ್ಗದ ಬಂಧಿಖಾನೆಯಲ್ಲಿ ಇರಿಸಲಾಗಿದೆ

Follow Us:
Download App:
  • android
  • ios