Asianet Suvarna News Asianet Suvarna News

ಮದುವೆ ಮನೆಯಲ್ಲಿ ಸೂತಕ, ಪುತ್ರಿಯರ ವಿವಾಹಕ್ಕೆ ಓಡಾಡಿ ತಯಾರಿ ಮಾಡಿದ್ದ ಅಪ್ಪನೇ ಅಪಘಾತದಲ್ಲಿ ಸಾವು!

ಅಮ್ಮನನ್ನು ಕಳೆದುಕೊಂಡ ಆ ಹೆಣ್ಣುಮಕ್ಕಳು ಅಪ್ಪನ ಆಸರೆಯಲ್ಲೇ ಮುದ್ದಾಗಿ ಬೆಳೆದಿದ್ದರು. ತನ್ನೆರಡು ಕಣ್ಣುಗಳಂತೆ ಮಕ್ಕಳಿಬ್ಬರನ್ನು ನೋಡಿಕೊಂಡಿದ್ದ ಅಪ್ಪ ಅವರ ಮದುವೆಯ ವಯಸ್ಸಿಗೆ ಅವರಿಗೆ ತಕ್ಕುದಾದ ಜೋಡಿಯನ್ನು ಹುಡುಕಿದ್ದ. ಮುದ್ದುಮಕ್ಕಳ ಮದುವೆಯನ್ನು ಕಣ್ತುಂಬಾ ನೋಡಬೇಕು ಅಂದುಕೊಂಡಿದ್ದ. ಆದರೆ ಈ ಬಾಂಧವ್ಯಕ್ಕೆ ಯಾರ ದೃಷ್ಟಿ ಬಿತ್ತೋ. ವಿಧಿಯಾಟ ಬೇರೆಯೇ ಇತ್ತು. ಮದ್ವೆಗೆ ಇನ್ನೇನು ಒಂದೇ ಇದೆ ಅನ್ನುವಾಗಲೇ ಅಪ್ಪನೇ ಇನ್ನಿಲ್ಲವಾಗಿದ್ದಾನೆ.

Father who was preparing for the marriage of his daughters died in an accident Vin
Author
First Published Jun 28, 2023, 9:23 AM IST

ಬಹುಶಃ ಜೀವನ ಅಂದ್ರೆ ಹಾಗೇನೆ. ನಾವಂದುಕೊಂಡಂತೆ ಅಲ್ಲೇನೂ ನಡೆಯುವುದಿಲ್ಲ. ಲೈಫ್‌ನಲ್ಲಿ ಎಲ್ಲವೂ ಸರಿಯಾಗಿದೆ ಎಂದು ಅಂದುಕೊಳ್ಳುತ್ತಿರುವಾಗಲೇ ಇನ್ನೇನೋ ಆಗಿಬಿಡುತ್ತದೆ. ಇಲ್ಲಿ ಎಲ್ಲವೂ ಅನಿರೀಕ್ಷಿತವೇ. ಬದುಕು ಇಷ್ಟೇ ಎಂದು ಅಂದುಕೊಂಡು ಮುಂದೆ ಸಾಗಬೇಕಷ್ಟೇ. ಆದರೆ ಯಾವಾಗಲೂ ಹಾಗಾಗುವುದಿಲ್ಲ. ಬದುಕಿನಲ್ಲಿ ಎದುರಾಗುವ ಕೆಲವೊಂದು ಅನಿರೀಕ್ಷಿತ ಆಘಾತಗಳು ಎಂಥವರನ್ನೂ ಕಂಗೆಡಿಸಿಬಿಡುತ್ತದೆ. ಮುಂದಿನ ದಾರಿಯನ್ನೇ ಕತ್ತಲಾಗಿಸಿ ಬಿಡುತ್ತದೆ. ಆ ಹೆಣ್ಣುಮಕ್ಕಳ ಬಾಳಿನಲ್ಲೂ ಅದೇ ಆಗಿದೆ. ಹೆತ್ತು ಹೊತ್ತು, ಮುದ್ದಿನಿಂದ ಸಾಕಿ ಸಲಹಿದ ಅಪ್ಪ ಇನ್ನಿಲ್ಲವಾಗಿದ್ದ. ಹೆಣ್ಣುಮಕ್ಕಳ ಮದುವೆ ಕಣ್ತುಂಬಿಕೊಳ್ಳಬೇಕಾದ ಹಿಂದಿನ ದಿನವೇ ಮೊದಲು ಬಾರದೂರಿಗೆ ಸೇರಿದ್ದ. 

ಮದುವೆ (Marriage) ಮನೆ ಸಂಭ್ರಮದಿಂದ ಗಲಗಲ ಅನ್ತಿತ್ತು. ಬಂಧು-ಬಳಗ, ಸ್ನೇಹಿತರು ಮನ ತುಂಬಾ ಸೇರಿದ್ದರು. ಅಲಂಕಾರ, ಅಡುಗೆ, ಹಾಡು, ಡ್ಯಾನ್ಸ್‌ನಿಂದ ಮನೆ ತುಂಬಿತ್ತು. ಮಂಜುನಾಥ ಗೌಡ ತನ್ನಿಬ್ಬರು ಹೆಣ್ಣುಮಕ್ಕಳ ಮದುವೆ ಎಂಬ ಸಂಭ್ರಮದಲ್ಲಿ ಮನೆ ತುಂಬಾ ಓಡಾಡಿ ನಾಳಿನ ಮದುವೆಗೆ ಬೇಕಾಗುವ ಎಲ್ಲಾ ತಯಾರಿ (Preparation) ಮಾಡಿಕೊಳ್ಳುತ್ತಿದ್ದರು. ಅಮ್ಮ ಇಲ್ಲದೆ, ಅಪ್ಪನ ಆಸರೆಯಲ್ಲೇ ಆ ಹೆಣ್ಣುಮಕ್ಕಳು ಮುದ್ದಾಗಿ ಬೆಳೆದಿದ್ದರು. ತನ್ನೆರಡು ಕಣ್ಣುಗಳಂತೆ ಮಕ್ಕಳಿಬ್ಬರನ್ನು ನೋಡಿಕೊಂಡಿದ್ದ ಅಪ್ಪ ಅವರ ಮದುವೆಯ ವಯಸ್ಸಿಗೆ ಅವರಿಗೆ ತಕ್ಕುದಾದ ಜೋಡಿಯನ್ನು ಹುಡುಕಿದ್ದ. ಮುದ್ದುಮಕ್ಕಳ ಮದುವೆಯನ್ನು ಕಣ್ತುಂಬಾ ನೋಡಬೇಕು ಅಂದುಕೊಂಡಿದ್ದ. ಆದರೆ ವಿಧಿಯಾಟ ಬೇರೆಯೇ ಇತ್ತು. ಮದ್ವೆಗೆ ಇನ್ನೇನು ಒಂದೇ ದಿನ ಇದೆ ಅನ್ನುವಾಗಲೇ ಅಪ್ಪನೇ (Father) ಇನ್ನಿಲ್ಲವಾಗಿದ್ದಾನೆ. ಹೆಣ್ಣುಮಕ್ಕಳ ಅಳು ಮುಗಿಲು ಮುಟ್ಟಿದೆ.

ನೆಟ್ಟಿಗರ ಕಣ್ಣಲ್ಲೂ ನೀರು ತರಿಸಿದ ಅಪ್ಪ ಮಗಳ ವೀಡಿಯೋ

ಪುತ್ರಿಯರ ವಿವಾಹ ಕಣ್ಣುಂಬಿಕೊಳ್ಳಬೇಕಿದ್ದ ತಂದೆ ಮದುವೆಯ ಮುನ್ನಾ ದಿನ ಸಾವು
ಹೌದು, ನಂಬೋಕೆ ಕಷ್ಟವಾದರೂ ಇದು ನಿಜ. ಶಿವಮೊಗ್ಗದ ಸಾಗರ ತಾಲೂಕಿನ ಆಚಾಪುರ ಗ್ರಾಪಂ ವ್ಯಾಪ್ತಿಯ ಚನ್ನಕೊಪ್ಪ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಅಪಘಾತದಲ್ಲಿ 58 ವರ್ಷದ ಮಂಜುನಾಥ ಗೌಡ ಮೃತಪಟ್ಟಿದ್ದಾರೆ (Death). ಇಬ್ಬರು ಪುತ್ರಿಯರ ವಿವಾಹ ಕಣ್ಣುಂಬಿ ಕೊಂಡು ಸಂತಸ ಪಡಬೇಕಿದ್ದ ತಂದೆ ಮದುವೆಯ ಮುನ್ನಾ ದಿನ ಅಪಘಾತದಲ್ಲಿ (Accident) ಸಾವನ್ನಪ್ಪಿದ್ದಾರೆ. ಮದುವೆ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ.

ಮಂಜುನಾಥ ಗೌಡ ಮೂಲತಃ ಬನವಾಸಿಯವರು. ತಮ್ಮ ಇಬ್ಬರು ಹೆಣ್ಣುಮಕ್ಕಳ ಮದುವೆ ನೆರವೇರಿಸಲು ಕುಟುಂಬ ಸಹಿತ ಚನ್ನಕೊಪ್ಪ ಗ್ರಾಮದ ತಮ್ಮ ಮಾವನ ಮನೆ ರುದ್ರಪ್ಪ ಗೌಡರ ಮನೆಗೆ ಬಂದಿದ್ದರು. ಇಂದು ಕೆಂಜಗಾಪುರದ ಶ್ರೀ ವೀರಭದ್ರೇಶ್ವರ ದೇವಾಲಯ ಆವರಣದ ಸಭಾಭವನದಲ್ಲಿ ಇಬ್ಬರು ಪುತ್ರಿಯರ ಮದುವೆ ಸಿದ್ಧತೆ ನಡೆಸಿದ್ದರು. ಮದುವೆ ಕಾರ್ಯಕ್ಕೆ ಅಗತ್ಯ ಸಾಮಗ್ರಿ ಖರೀದಿಸಲು ಆನಂದಪುರಕ್ಕೆ  ಮನೆಯಿಂದ ಹೊರಟಿದ್ದರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದು ಬಸ್‌ ನಿಲ್ದಾಣದ  ಕಡೆಗೆ ಸಾಗುತ್ತಿದ್ದಾಗ ನಡೆದಿದ್ದು, ಮಂಜುನಾಥ ಗೌಡ ಮೃತಪಟ್ಟಿದ್ದಾರೆ. 

ತಂದೆ ಕರ್ತವ್ಯ ನಿರ್ವಹಿಸುತ್ತಿದ್ದ ಠಾಣೆಗೆ ಪಿಎಸ್‌ಐ ಆಗಿ ಬಂದ ಮಗಳು: ಪುತ್ರಿಗೆ ಅಧಿಕಾರ ಹಸ್ತಾಂತರಿಸಿದ ತಂದೆ

ಪೂರ್ವನಿಗದಿಯಂತೆ ಇಂದು ಕೆಂಜಗಾಪುರದಲ್ಲಿ ಇಬ್ಬರು ಪುತ್ರಿಯರ ವಿವಾಹ 
ಪುತ್ರಿಯರೊಂದಿಗೆ ನಡೆದುಕೊಂಡು ಹೋಗುತ್ತಿದ್ದ ಮಂಜುನಾಥ ಗೌಡರಿಗೆ ಕಾರು ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮಂಜುನಾಥ ಗೌಡರ ಶವದ ಮರಣೋತ್ತರ ಪರೀಕ್ಷೆ ನಂತರ ಬನವಾಸಿಯಲ್ಲಿ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಸಲಾಗಿದೆ. ಡಿಕ್ಕಿ ಹೊಡೆದ ಕಾರು ಚಾಲಕ ಪರಾರಿಯಾಗಿದ್ದು, ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. 

ಮೂರು ವರ್ಷಗಳ ಹಿಂದೆ ಮಂಜುನಾಥ ಗೌಡರ ಪತ್ನಿ ಬನವಾಸಿಯಲ್ಲಿ ಟ್ರ್ಯಾಕ್ಟರ್ ಅಪಘಾತದಲ್ಲಿ ಸಾವಿಗೀಡಾಗಿದ್ದರು. ಅಂದಿನಿಂದ ಮಂಜುನಾಥ ಗೌಡ ಅವರೇ ತಮ್ಮ ಹೆಣ್ಣುಮಕ್ಕಳು ಜೋಪಾನದಿಂದ ಸಾಕಿದ್ದರು. ಆದರೆ ವಿಧಿಯ ಪ್ಲಾನ್ ಇನ್ನು ಏನೋ ಇತ್ತು. ಈ ಹಿಂದೆ ಅಮ್ಮನನ್ನು ಕಳೆದುಕೊಂಡ ಹೆಣ್ಣುಮಕ್ಕಳು ಈಗ ಅಪ್ಪನನ್ನೂ ಕಳೆದುಕೊಂಡು ತಬ್ಬಲಿಗಳಾಗಿದ್ದಾರೆ. ಪೂರ್ವನಿಗದಿಯಂತೆ ಜೂ.28ರ ಇಂದು ಕೆಂಜಗಾಪುರದಲ್ಲಿ ಮಂಜುನಾಥ ಗೌಡರ ಇಬ್ಬರು ಪುತ್ರಿಯರ ವಿವಾಹ ನೆರವೇರಲಿದೆ. ಹಿರಿಯ ಪುತ್ರಿ ಪಲ್ಲವಿ ಮತ್ತು ದ್ವಿತೀಯ ಪುತ್ರಿ ಪೂಜಾರನ್ನು ಹಾವೇರಿ ತಾಲೂಕಿನ ಯತ್ನಳ್ಳಿ ಗ್ರಾಮದ ಸಿದ್ದಪ್ಪ ಗೌಡರ ಇಬ್ಬರು ಪುತ್ರರು ಮದುವೆಯಾಗಲಿದ್ದಾರೆ.

ಸಾವೆಂದರೆ ಹಾಗೇ ಅದು ಹೇಳಿ ಕೇಳಿ ಬರುವುದಿಲ್ಲ. ಸುಮ್ಮನೆ ಬರುತ್ತದೆ, ಎಲ್ಲರನ್ನೂ ಶೋಕದಲ್ಲಿ ಮುಳುಗಿಸುತ್ತದೆ ಅಷ್ಟೆ. ಸತ್ತವರೂ ಹೋದರು, ಬದುಕುಳಿದವರು ಅವರ ನೆನಪಲ್ಲಿ ಒದ್ದಾಡುತ್ತಾ ಇರುವರು. ಸಂಬಂಧಗಳೇ ಹಾಗೇ. ದೇಹ ಮಣ್ಣಲ್ಲಿ ಮಣ್ಣಾದರೂ ಬಂಧ ಕಳಚುವುದಿಲ್ಲ. ಕಣ್ಣೀರು ನಿಲ್ಲುವುದಿಲ್ಲ. 

Follow Us:
Download App:
  • android
  • ios