ಶಿವಮೊಗ್ಗ: ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ತಂದೆ-ಮಗ ದಾರುಣ ಸಾವು

Crime News: ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಪ್ಲಾಟ್ ಫಾರಂನಿಂದ ಕೆಳಗೆ ಬಿದ್ದು ತಂದೆ-ಮಗ ದಾರುಣ ಸಾವನ್ನಪ್ಪಿದ್ದಾರೆ

Father son duo dies while boarding moving train in Shivamogga mnj

ಶಿವಮೊಗ್ಗ(ಸೆ. 13): ಚಲಿಸುತ್ತಿದ್ದ ರೈಲು (RailWay) ಹತ್ತಲು ಹೋಗಿ ಪ್ಲಾಟ್ ಫಾರಂನಿಂದ ಕೆಳಗೆ ಬಿದ್ದು ತಂದೆ-ಮಗ ದಾರುಣ ಸಾವನ್ನಪ್ಪಿದ್ದಾರೆ. ಭದ್ರಾವತಿಯ ರೈಲ್ವೆ ನಿಲ್ದಾಣದಲ್ಲಿ ಘಟನೆ ನಡೆದಿದೆ. ಮೋಹನ್ ಪ್ರಸಾದ್ (70) ಹಾಗೂ ಅಮರ್ ನಾಥ್ (31) ಮೃತಪಟ್ಟ ದುರ್ದೈವಿಗಳು. ತಂದೆ ಮಗ ತಾಳಗುಪ್ಪ -ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ರೈಲಿನ ಮುಖಾಂತರ ಬೆಂಗಳೂರಿಗೆ ಹೊರಟಿದ್ದರು. ಇಬ್ಬರೂ ನಿಲ್ದಾಣಕ್ಕೆ ಬಂದಾಗ ರೈಲು ಅದಾಗಲೇ  ಹೊರಟಿದ್ದು ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಮಗ ಕಾಲು ಜಾರಿ ಕೆಳಗೆ ಬಿದ್ದಿದ್ದಾನೆ.

ಆತನ ರಕ್ಷಣೆಗೆ ಮುಂದಾದ ತಂದೆ ಕೂಡ ರೈಲಿಗೆ ಸಿಲುಕಿ ಸಾವನಪ್ಪಿದ್ದಾರೆ. ತಲೆಗೆ ತೀವ್ರವಾದ ಗಾಯವಾದ ಕಾರಣ ತಂದೆ ಮೋಹನ್ ಪ್ರಸಾದ್ ಸ್ಥಳದಲ್ಲೆ ಮೃತಪಟ್ಟಿದ್ದಾರೆ.  ಹೆಚ್ಚಿನ ಚಿಕಿತ್ಸೆಗೆಂದು ಬೆಂಗಳೂರಿಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಮಗ  ಅಮರ್ ನಾಥ್ ಕೂಡ ಮೃತಪಟ್ಟಿದ್ದಾರೆ. 

ವಿದ್ಯುತ್ ಸ್ಪರ್ಶಿಸಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪಂಪಾಪತಿ ದಂಪತಿ ದಾರುಣ ಸಾವು

ಮಡಿಕೇರಿ: ವಿದ್ಯುತ್‌ ಪ್ರವಹಿಸಿ ಯುವಕ ಸಾವು: ನಗರದ ಸಾಯಿ ಕ್ರೀಡಾಂಗಣದ ಬಳಿ ನೂತನವಾಗಿ ನಿರ್ಮಾಣವಾಗುತ್ತಿರುವ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಕೆಲಸ ಮಾಡುವ ಯುವಕನೊಬ್ಬ ವಿದ್ಯುತ್‌ ಪ್ರವಹಿಸಿ ಮೃತಪಟ್ಟಘಟನೆ ನಡೆದಿದೆ.

ಪಶ್ಚಿಮ ಬಂಗಾಳ ಮೂಲದ ಹಾಸಿಂ (21) ಮೃತಪಟ್ಟಯುವಕ. ಪಶ್ಚಿಮ ಬಂಗಾಳ ಮೂಲದ ಯುವಕ, ನೂತನ ಎಸ್ಪಿ ಕಚೇರಿಯ ನಿರ್ಮಾಣದಲ್ಲಿ ಸಹಾಯಕ ಕೂಲಿ ಕಾರ್ಮಿಕನಾಗಿದ್ದು ಸ್ನಾನ ಮಾಡಲು ನೀರು ಬಿಸಿ ಮಾಡುವ ವಿದ್ಯುತ್‌ ಹೀಟರ್‌ನಿಂದ ವಿದ್ಯುತ್‌ ಪ್ರವಹಿಸಿ ಈ ಅನಾಹುತ ನಡೆದಿದೆ ಎಂದು ಆತನ ಜೊತೆಗಿದ್ದ ಕಾರ್ಮಿಕರು ತಿಳಿಸಿದ್ದಾರೆ.

ಯುವಕನನ್ನು ಚಿಕಿತ್ಸೆಗೆ ಸ್ಥಳೀಯ ಜಿಲ್ಲಾಸ್ಪತ್ರೆಗೆ ದಾಖಲಿಸುವ ವೇಳೆ ಯುವಕ ಮೃತಪಟ್ಟಿದ್ದಾನೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದರಾದರೂ ಯಾವುದೇ ಪ್ರಯೋಜನವಾಗಲಿಲ್ಲ. ಯುವಕನನ್ನು ಆಸ್ಪತ್ರೆಗೆ ತರುವ ವೇಳೆ ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದಾರೆ.

Latest Videos
Follow Us:
Download App:
  • android
  • ios