Bellary: ವಿದ್ಯುತ್ ಸ್ಪರ್ಶಿಸಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪಂಪಾಪತಿ ದಂಪತಿ ದಾರುಣ ಸಾವು

 ಏನೋ ಮಾಡಲು ಹೋಗಿ ಇನ್ನೆನೋ ಆಯ್ತು ಅನ್ನೋ ಹಾಗೇ ಮಳೆ ನಿಂತ ಬಳಿಕ ಮನೆಯ ಛಾವಣಿ ಮೇಲೆ ಬೆಳೆದಿರೋ ಹುಲ್ಲನ್ನು ಕೀಳಲು ಹೋದಾಗ ಮನೆಯ ಮೇಲೆ ಹಾದು ಸರ್ವಿಸ್ ವೈರ್ ತಾಗಿ ಗಂಡ ಹೆಂಡತಿ ಮೃತಪಟ್ಟಿದ್ದಾರೆ.

Couple Die Of Electrocution In Ballari mnj

ವರದಿ : ನರಸಿಂಹ ಮೂರ್ತಿ ಕುಲಕರ್ಣಿ

ಬಳ್ಳಾರಿ, (ಆಗಸ್ಟ್.28)
: ಮನುಷ್ಯನ ಸಾವು ಯಾವ ರೀತಿ ಯಾವಾಗ ಬರುತ್ತದೆ ಅನ್ನೋದು ಗೊತ್ತಿರೋದಿಲ್ಲ. ಈಗ ಇದ್ದವರು ಇನ್ನೊಂದು ಕ್ಷಣ ಇರೋದಿಲ್ಲ ಅನ್ನೋದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಇನ್ನೂ ಈ ಅವಘಡದಲ್ಲಿ ಹೆಂಡತಿಯನ್ನು ರಕ್ಷಿಸಲು ಹೋಗಿ ಗಂಡ ಕೂಡ ಮೃತಪಟ್ಟಿದ್ದಾರೆ. 

 ಏನೋ ಮಾಡಲು ಹೋಗಿ ಇನ್ನೆನೋ ಆಯ್ತು ಅನ್ನೋ ಹಾಗೇ ಮಳೆ ನಿಂತ ಬಳಿಕ ಮನೆಯ ಛಾವಣಿ ಮೇಲೆ ಬೆಳೆದಿರೋ ಹುಲ್ಲನ್ನು ಕೀಳಲು ಹೋದಾಗ ಮನೆಯ ಮೇಲೆ ಹಾದು ಸರ್ವಿಸ್ ವೈರ್ ತಾಗಿ ಗಂಡ ಹೆಂಡತಿ ಮೃತಪಟ್ಟಿದ್ದಾರೆ. ಆದ್ರೇ ಮೃಪಟ್ಟ ಕಲಾವಿದ ಮಾತ್ರ ಬಯಲಾಟದಲ್ಲಿ ಅಭೂತಪೂರ್ವ ಸಾಧನೆ ಮಾಡಿದ್ದು, ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದಿದ್ದಾರೆ. ಹೀಗಾಗಿ ದಂಪತಿಗಳಿಬ್ಬರ ಸಾವಿಗೆ ಇಡೀ ಕಲಾ ಲೋಕವೇ ಕಣ್ಣಿರು ಹಾಕುತ್ತಿದೆ.

ಫೋನ್‌ನಲ್ಲಿ ಮಾತನಾಡಿಲ್ಲವೆಂದು ಪಿಯುಸಿ ವಿದ್ಯಾರ್ಥಿನಿ ಮೇಲೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ!

 ಸಾವಿನಲ್ಲೂ ಒಂದಾದ ದಂಪತಿ
ಮನಷ್ಯ ಹುಟ್ಟು ಹೇಗಾದ್ರೂ ಆಗಿರಲಿ ಸಾವು ಮಾತ್ರ ಚರಿತ್ರೆ ಸೃಷ್ಠಿ ಮಾಡಬೇಕು ಎನ್ನುವ ಮಾತಿದೆ. ಆ ಮಾತಿನಂತೆ ಇಲ್ಲೋಬ್ಬ ಕಲಾವಿದ ಬಡ ಕುಟುಂಬದಲ್ಲಿ ಹುಟ್ಟಿ ಬಯಲಾಟದಲ್ಲಿ ಅಭೂತ ಪೂರ್ವ ಸಾಧನೆಯನ್ನು ಮಾಡೋ ಮೂಲಕ ಬಯಲಾಟದ ಕಲೆಯನ್ನು ರಾಜ್ಯ ಮಟ್ಟದಲ್ಲಿ ಎತ್ತರಕ್ಕೇರಿಸುವಂತೆ ಮಾಡಿದ್ದಾರೆ. ಆದ್ರೇ, ಅವರ ಸಾವು ಮಾತ್ರ ದುರಂತ ಅಂತ್ಯ ಕಂಡಿದೆ. ಹೌದು, ಬಳ್ಳಾರಿಯ ಬಯಲಾಟ ಕಲಾವಿದ ಪಂಪಾಪತಿ ಮತ್ತವರ ಪತ್ನಿಯ ಸಾವು ಇಡೀ ಕಲಾವಿದರ ಜಗತ್ತನ್ನೆ ಬಡವಾಗಿಸಿದೆ. ಕಲೆಯಲ್ಲಿ ಅಭೂತಪೂರ್ವ ಸಾಧನೆ ಮಾಡಿದ ಪಂಪಾಪತಿ ಮತ್ತವರ ಪತ್ನಿ ದ್ಯಾಮವ್ವ ತಮ್ಮ ನಿವೃತ್ತಿಯ ಜೀವನವನ್ನು ಬಳ್ಳಾರಿಯ ಬಂಡಿಹಟ್ಟಿಯಲ್ಲಿ ನಡೆಸುತ್ತಿದ್ರು. 

ಮೊನ್ನೆ ಮಳೆ ಬಂದು ಹೋದ ಬಳಿಕ ಮನೆಯ ಮೇಲೆ ಹುಲ್ಲು ಬೆಳೆದಿತ್ತು. ಅದನ್ನು ಕಿತ್ತಿ ಮನೆಯ ಮೇಲೆ ಬಿದ್ದ ನೀರು ಸರಾಗ ಹೋಗಲು ದಾರಿ ಮಾಡಬೇಕೆಂದು ಪತ್ನಿ ಹುಲ್ಲನ್ನು ಕೀಳುತ್ತಿದ್ರು. ಆದ್ರೆ, ಅಲ್ಲಿಯೇ ಹಾದು ಹೋದ ಸರ್ವಿಸ್ ವಯರ್ ಕಟ್ಟಾಗಿ ಬಿದ್ದಿತ್ತು. ಆ ವೈರ್ ತಾಗಿದ ಹಿನ್ನೆಲೆ ದ್ಯಾಮವ್ವ ಅವರಿಗೆ ಮೊದಲು ಶಾಕ್ ಹೊಡೆದಿದೆ. ಅವರನ್ನು ಬಿಡಿಸಲು ಹೋದ ಗಂಡ ಪಂಪಾಪತಿ ಅವರಿಗೆ ಶಾರ್ಟ್ ಹೋಡೆದ ಕಾರಣ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಸಾಕಷ್ಟು ಕಲಾವಿದರಿಗೆ ತಂದೆಯಾಗಿದ್ದ ಪಂಪಾತಿ ಸಾವು ಹೀಗಾಗಬಾರದಿತ್ತೆಂದು ಕಲಾವಿದೆ  ಓಂಕಾರಮ್ಮ ಕಣ್ಣೀರು ಹಾಕಿ ಘಟನೆ ವಿವರ ಹೇಳಿದ್ರು.. 

ಕಲೆಯನ್ನು ‌ಜೀವನವಾಗಿರಿಸಿಕೊಂಡಿದ್ರು
ಇನ್ನೂ ಕಲೆಗಾಗೊಯೇ ತಮ್ಮ ಜೀವನವನ್ನು ಮುಡಿಪಾಗಿರಿಸಿ ಕೊಂಡು ತಾವಷ್ಟೆ ಪಾತ್ರ ಮಾಡದೇ ಮತ್ತಷ್ಟು ಜನರಿಗೆ ಬಯಲಾಟ ಕಲೆಯನ್ನು ಹೇಳಿಕೊಡುತ್ತಿದ್ದರು.  ಪಂಪಾಪತಿ ಅವರ ಸಾಧನೆಗೆ 2017ರಲ್ಲಿ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡೋ ಮೂಲಕ ರಾಜ್ಯ ಸರ್ಕಾರ ಗೌರವ ನೀಡಿತ್ತು. ತಮ್ಮ ಜೀವನದ್ದೂಕ್ಕೂ ಎರಡು ಸಾವಿರಕ್ಕೂ ಹೆಚ್ಚು ಪ್ರದರ್ಶನವನ್ನು ನೀಡಿದ ಪಂಪಾಪತಿ ಅವರು ನೂರಾರು ಹಳ್ಳಿಯ ಯುವಕರಿಗೆ ಬಯಲಾಟದ ಬಗ್ಗೆ ಆಸಕ್ತಿ ಮೂಡಿಸುವಂತೆ ಮಾಡಿದ್ರು. ಇನ್ನೂ ಇತ್ತೀಚೆಗೆ ವಯಸ್ಸಾದ್ರೂ ಕೂಡ ಅಲ್ಲಲ್ಲಿ ಬಯಲಾಟ ಆಡೋ ವೇಳೆ ಹೋಗಿ ತರಬೇತಿಯನ್ನು ನೀಡುತ್ತಿದ್ರು. ಅಲ್ಲದೇ ಸಾರಥಿಯ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದ ಪಂಪಾಪತಿಯನ್ನು ಸಾರಥಿ ಪಂಪಾಪತಿಯೆಂದೇ ಕರೆಯುತ್ತಿದ್ದರಂತೆ. ಬಯಲಾಟದಲ್ಲಿ ಇಷ್ಟೇಲ್ಲ ಸಾಧನೆ ಮಾಡಿದ ಪಂಪಾಪತಿಯವರ ಸಾವು ಮಾತ್ರ ದುರಂತ ಅಂತ್ಯ ಕಂಡಿದ್ದು ಕಲಾವಿರಲ್ಲಷ್ಟೇ ಅಲ್ಲದೇ ಇಡೀ ಬಂಡಿ ಹಟ್ಟಿ ಜನರ ಕಣ್ಣಲ್ಲಿ ನೀರು ಬರುವಂತೆ ಮಾಡಿತ್ತು.

ಸಾವಿರಾರು ಕಲಾವಿದರಿಂದ ಅಂತಿಮ ನಮನ
 ಹುಟ್ಟಿದ ಪ್ರತಿಯೊಬ್ಬ ಮನುಷ್ಯ ಒಂದಲ್ಲೊಂದು ಸಾಧನೆ ಮಾಡಬೇಕು. ಆ ಸಾಧನೆಯನ್ನು ಅವರ ಸಾವಿನ ಬಳಿಕವೂ ಜನರು ಮಾತನಾಡುವಂತಿರಬೇಕು. ಅದೇ ರೀತಿ ಇದೀಗ ಬಯಲಾಟದಲ್ಲಿ ತಮ್ಮದೇ ಆದ ರೀತಿಯಲ್ಲಿ ಸಾಧನೆ ಮಾಡಿ ಜನಮನ್ನಣೆ ಗಳಿಸಿದ ಪಂಪಾಪತಿ ದಂಪತಿ ಸಾವು ಮಾತ್ರ ದುರಂತ ಅಂತ್ಯಕಂಡಿದೆ. ಕಲಾವಿದ ಸತ್ತಿರಬಹುದು ಆದ್ರೇ, ಅವರು ಕಲಿಸಿದ ಕಲೆ ಮಾತ್ರ ಇಂದಿಗೂ  ಜೀವಂತವಾಗಿದೆ.  

Latest Videos
Follow Us:
Download App:
  • android
  • ios