ಮಗನ ಹತ್ಯೆಗೆ ತಂದೆಯೇ ಸುಪಾರಿ ನೀಡಿದ ಪ್ರಕರಣದ ಹಿಂದಿನ ನಿಜವಾದ ಕಾರಣ ವಿಚಾರಣೆ ವೇಳೆ ಬಹಿರಂಗವಾಗಿದೆ. ಪುತ್ರ ದುಶ್ಚಟಗಳಿಗೆ ದಾಸನಾಗಿದ್ದು, ನಿತ್ಯವೂ ತಂದೆ-ತಾಯಿಗೆ ಕಿರಿಕಿರಿ ಮಾಡಿ ಮನೆಯಲ್ಲಿ ನೆಮ್ಮದಿ ಇಲ್ಲದಂತೆ ಮಾಡಿದ್ದರಿಂದ ರೋಸಿ ಹೋಗಿ ಪುತ್ರನ ಹತ್ಯೆಗೆ ತಂದೆ ನಿರ್ಧರಿಸಿದ್ದರು ಎಂಬುದು ಬಹಿರಂಗವಾಗಿದೆ.

ಹುಬ್ಬಳ್ಳಿ (ಡಿ.7) : ಮಗನ ಹತ್ಯೆಗೆ ತಂದೆಯೇ ಸುಪಾರಿ ನೀಡಿದ ಪ್ರಕರಣದ ಹಿಂದಿನ ನಿಜವಾದ ಕಾರಣ ವಿಚಾರಣೆ ವೇಳೆ ಬಹಿರಂಗವಾಗಿದೆ. ಪುತ್ರ ದುಶ್ಚಟಗಳಿಗೆ ದಾಸನಾಗಿದ್ದು, ನಿತ್ಯವೂ ತಂದೆ-ತಾಯಿಗೆ ಕಿರಿಕಿರಿ ಮಾಡಿ ಮನೆಯಲ್ಲಿ ನೆಮ್ಮದಿ ಇಲ್ಲದಂತೆ ಮಾಡಿದ್ದರಿಂದ ರೋಸಿ ಹೋಗಿ ಪುತ್ರನ ಹತ್ಯೆಗೆ ತಂದೆ ನಿರ್ಧರಿಸಿದ್ದರು ಎಂಬುದು ಬಹಿರಂಗವಾಗಿದೆ.

ಪುತ್ರನ ದುರ್ಗುಣಗಳಿಂದ ರೋಸಿಹೋಗಿದ್ದ ತಂದೆ ಭರತ್‌ ತನಗೆ ಪರಿಚಯದ ಸಲ್ಲಾವುದ್ದೀನ್‌ ಮೌಲ್ವಿ ಮೂಲಕ ಪುತ್ರ ಅಖಿಲ್‌ ಕೊಲೆಗೆ .10 ಲಕ್ಷ ಸುಪಾರಿ ನೀಡಿದ್ದರು ಎಂಬ ಸಂಗತಿ ಪೊಲೀಸ್‌ ತನಿಖೆಯಿಂದ ಗೊತ್ತಾಗಿದೆ. ಇದೀಗ ಆರೋಪಿಗಳು ನೀಡಿದ ಸುಳಿವಿನಂತೆ ಮಗನ ಶವವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಕಲಘಟಗಿ ತಾಲೂಕಿನ ದೇವಿಕೊಪ್ಪದ ಶೆಡ್‌ ಬಳಿ ಶವ ಹೂಳಿರುವ ಮಾಹಿತಿ ಸಿಕ್ಕಿದೆ. ಈ ನಡುವೆ ಪ್ರಕರಣಕ್ಕೆ ಸಂಬಂಧಿಸಿ ತಂದೆ ಭರತ್‌ ಮಹಾಜನಶೇಠ, ಸಲ್ಲಾವುದ್ದೀನ್‌ ಮೌಲ್ವಿ, ಮಹಾಂತೇಶ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆ ಮಾಡಿದ ಪ್ರಮುಖ ಆರೋಪಿ ಸೇರಿ ಮೂವರು ನಾಪತ್ತೆಯಾಗಿದ್ದು, ಪೊಲೀಸರು ಶೋಧ ಕಾರ್ಯ ತೀವ್ರಗೊಳಿಸಿದ್ದಾರೆ.

ಕಿರುಕುಳ ನೀಡ್ತಿದ್ದ ಮಗನ ಕೊಲೆಗೈದು ಪೊಲೀಸರಿಗೆ ಶರಣಾದ ತಂದೆ 

ಹಂತಕರಿಗೆ ಮಗನನ್ನು ಒಪ್ಪಿಸಿದ: ಡಿ.1ರಂದು ಕಲಘಟಗಿ ಬಳಿ ನಡೆಯುತ್ತಿರುವ ಕಾಮಗಾರಿ ವೀಕ್ಷಿಸಿಕೊಂಡು ಬರುವುದಾಗಿ ಹೇಳಿ ಕಾರಿನಲ್ಲಿ ಪುತ್ರನನ್ನು ಕರೆದುಕೊಂಡು ಹೋಗಿ ಹಂತಕರ ಕೈಗೆ ಒಪ್ಪಿಸಿ ಬಂದಿದ್ದರು. ಅಖಿಲ್‌ ಗೆಳೆಯರೊಂದಿಗೆ ಹೋಗಿದ್ದಾನೆ ಎಂದು ಕುಟುಂಬದವರಿಗೆ ಹೇಳಿದ್ದರು. ಎರಡ್ಮೂರು ದಿನವಾದರೂ ಅಖಿಲ್‌ ಮನೆಗೆ ಬಾರದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಕೇಳಿದಾಗ ಸಹೋದರ ಮನೋಜ್‌ ಜತೆಗೂಡಿ ಡಿ.4ರಂದು ಮಗ ನಾಪತ್ತೆಯಾಗಿದ್ದಾನೆಂದು ಕೇಶ್ವಾಪುರ ಪೊಲೀಸ್‌ ಠಾಣೆಗೆ ದೂರು ನೀಡಿ ಬಂದಿದ್ದರು.

ಕುಡುಕ ಮಗನ ಹತ್ಯೆಗೆ ಪೋಷಕರಿಂದಲೇ ಸುಪಾರಿ!

ಡಿ.3ರಂದು ಪೊಲೀಸರ ದಿಕ್ಕು ತಪ್ಪಿಸಲು ಮತ್ತೊಂದು ಹೈಡ್ರಾಮಾ ಮಾಡಿದ್ದರು. ಸಂಜೆ 7.45ರ ಸುಮಾರಿಗೆ ಅಖಿಲ್‌ ಮೊಬೈಲ್‌ನಿಂದ ಇಮೇಲ್‌ ಫೇಸ್‌ ಟೈಮ್‌ ವಿಡಿಯೋ ಕಾಲ್‌ ಮಾಡಿ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆಂದು ಹಿಂದಿಯಲ್ಲಿ ಮಾತನಾಡಿದ 6 ಸೆಕೆಂಡ್‌ನ ವಿಡಿಯೋ ಮಾಡಿ ಕಟ್‌ ಮಾಡಿದಂತೆ ಹಂತಕರು ಮಾಡಿದ್ದರು. ಬಳಿಕ ಆತನ ಫೋನ್‌ ಸ್ವಿಚ್‌ ಆಫ್‌ ಆಗಿದೆ ಎಂದು ಕೇಶ್ವಾಪುರ ಠಾಣೆಯಲ್ಲಿ ಸಲ್ಲಿಸಿದ್ದ ದೂರಿನಲ್ಲಿ ತಿಳಿಸಲಾಗಿತ್ತು. ಆದರೆ, ತನಿಖೆ ಕೈಗೊಂಡ ಪೊಲೀಸರಿಗೆ ಭರತ್‌ ಮಹಾಜನಶೇಠ್‌ ನಡವಳಿಕೆ ಮೇಲೆ ಸಂಶಯ ಬಂದಿದೆ. ಜತೆಗೆ ರೌಡಿಗಳ ಜತೆ ನಂಟಿರುವುದೂ ಗೊತ್ತಾಗಿದೆ. ಬಳಿಕ ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ತಾನೇ ಮಗನ ಕೊಲೆಗೆ .10 ಲಕ್ಷ ಸುಪಾರಿ ಕೊಟ್ಟಿರುವುದಾಗಿ ಬಾಯಿಬಿಟ್ಟಿದ್ದರು.