Asianet Suvarna News

ಕುಡಿದು ಬಂದು ಜಗಳ: ಹಾರೆಯಿಂದ ಹೊಡೆದು ಮಗನನ್ನೇ ಕೊಂದ ತಂದೆ

* ಧಾರವಾಡದ ಶಿವಗಂಗಾ ನಗರದ ತೆಲಗರ ಓಣಿಯಲ್ಲಿ ನಡೆದ ಘಟನೆ
* ದಿನನಿತ್ಯ ಮದ್ಯ ಸೇವಿಸಿ ಮನೆಯಲ್ಲಿ ಜಗಳವಾಡುತ್ತಿದ್ದ ಮೃತ ಬಸವರಾಜ
* ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪೊಲೀಸರು 

Father Kills Son in Dharwad grg
Author
Bengaluru, First Published Jul 21, 2021, 3:34 PM IST
  • Facebook
  • Twitter
  • Whatsapp

ಧಾರವಾಡ(ಜು.21):  ತಂದೆ- ಮಗನ ಜಗಳ ಕೊಲೆ​ಯಲ್ಲಿ ಅಂತ್ಯ​ಗೊಂಡ ಪ್ರಕರಣ ಇಲ್ಲಿನ ಶಹರ ಠಾಣಾ ವ್ಯಾಪ್ತಿಯ ಶಿವಗಂಗಾ ನಗರದ ತೆಲಗರ ಓಣಿಯಲ್ಲಿ ಸೋಮ​ವಾರ ತಡ​ ರಾತ್ರಿ ಸಂಭವಿಸಿದೆ. 

ಬಸವರಾಜ ಹಿರೇಕುಂಬಿ (36) ಎಂಬಾತನೇ ತಂದೆಯಿಂದ ಕೊಲೆಯಾದ ಪುತ್ರ. ಆತನ ತಂದೆ ಫಕ್ಕೀರಪ್ಪ ಕೊಲೆಗೈದ ಆರೋಪಿ. ದಿನನಿತ್ಯ ಮದ್ಯ ಸೇವಿಸಿ ಬಂದು ಬಸವರಾಜ ಮನೆಯವರೊಂದಿಗೆ ಜಗಳವಾಡುತ್ತಿದ್ದನು. ಹಾಗೆಯೇ, ಮನೆಯವರೊಂದಿಗೆ ಜಗಳವಾಡುತ್ತಿದ್ದ ಸಮಯದಲ್ಲಿ ತಂದೆ ಫಕ್ಕೀರಪ್ಪ ಮಧ್ಯೆ ಪ್ರವೇಶಿಸಿದ್ದಾನೆ. ಈ ಸಂದರ್ಭದಲ್ಲಿ ಜಗಳ ವಿಕೋಪಕ್ಕೆ ತಿರುಗಿದಾಗ ಮಗನನ್ನು ತಂದೆ ಫಕ್ಕೀರಪ್ಪ ಹಾರೆಯಿಂದ ಹೊಡೆದು ಹತ್ಯೆ ಮಾಡಿದ್ದಾನೆ.

ಯಲ್ಲಾಪುರ: ಪರ ಪುರುಷನ ಸಂಗಕ್ಕೆ ಅಡ್ಡಿಯಾದ ಗಂಡನನ್ನೇ ಕೊಂದ ಹೆಂಡ್ತಿ..!

ಮೂರ್ನಾಲ್ಕು ದಿನಗಳ ಹಿಂದೆ ಬಸವರಾಜ ತನ್ನ ಹೆಂಡತಿಯನ್ನು ಹೊಡೆದಿದ್ದನು. ಇದೇ ಕಾರಣಕ್ಕೆ ಶಹರ ಠಾಣೆಯಲ್ಲಿ ಬಸವರಾಜನ ತಂದೆ-ತಾಯಿ ಹಾಗೂ ಮಡದಿ ದೂರು ನೀಡಿದ್ದರು. ಈ ವಿಷಯ ಗೊತ್ತಾಗಿ ಬಸವರಾಜ ಮತ್ತೆ ಕುಡಿದು ಬಂದು ಮನೆಯವರ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದನು. ಸುದ್ದಿ ತಿಳಿಯುತ್ತಿದ್ದಂತೆ ಶಹರ ಠಾಣೆಯ ಪೊಲೀಸ್‌ ಇನ್ಸಪೆಕ್ಟರ್‌ ಸಂಗಮೇಶ ದಿಡಿಗನಾಳ ಸ್ಥಳಕ್ಕೆ ಭೇಟಿ ನೀಡಿದ್ದರು. ಆರೋಪಿ ಫಕ್ಕೀರಪ್ಪನನ್ನು ಪೊಲೀಸರು ಬಂಧಿ​ಸಿ​ದ್ದಾರೆ.
 

Follow Us:
Download App:
  • android
  • ios