ಘಟನೆ ಸಂಬಂಧ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಕೊಡಗು ಪೊಲೀಸ್‌ ವರಿಷ್ಠಾಧಿಕಾರಿ ಕೆ.ರಾಮರಾಜನ್‌ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮಡಿಕೇರಿ(ಫೆ.20): ತಂದೆಯೇ ಮಗನನ್ನು ಗುಂಡಿಟ್ಟು ಕೊಂದ ಘಟನೆ ಮಡಿಕೇರಿ ಸಮೀಪದ ಕಟ್ಟೆಮಾಡು ಗ್ರಾಮದಲ್ಲಿ ಭಾನುವಾರ ನಡೆದಿದೆ.

ಮಡಿಕೇರಿ ಸಮೀಪದ ಮರುಗೋಡು ಗ್ರಾ.ಪಂ. ವ್ಯಾಪ್ತಿಯ ಕಟ್ಟೆಮಾಡುವಿನ ನಿವಾಸಿ ನಂದೇಟಿರ ಚಿಟ್ಟಿಯಪ್ಪ (67) ಕೇವಲ 2000 ರು. ವಿಚಾರಕ್ಕೆ ಮಗ ನಿರನ್‌ ತಿಮ್ಮಯ್ಯ(28)ನನ್ನು ಗುಂಡಿಕ್ಕಿ ಕೊಂದಿದ್ದಾನೆ.

ಕೊಡಗು: ಕಾಫಿ ತೋಟದ ನೀರಿನ ತೊಟ್ಟಿಗೆ ಬಿದ್ದು ನರಳಿ ಹೆಣ್ಣಾನೆ ಸಾವು

ಕೊಲೆಯಾದ ನಿರನ್‌ ತಿಮ್ಮಯ್ಯ ಮತ್ತು ಮತ್ತೋರ್ವ ಪುತ್ರ ಪ್ರತೀ ತಿಂಗಳು ತಂದೆ ತಾಯಿಗೆ 2000 ರು. ನೀಡುವುದಾಗಿ ಅವರಲ್ಲೇ ಒಪ್ಪಂದವಾಗಿತ್ತು. ಅದರಂತೆ ನಿರನ್‌ ಕಳೆದ ಜನವರಿಯಲ್ಲಿ 2000 ರು. ನೀಡಿರಲಿಲ್ಲ. ಇದೇ ವಿಚಾರವಾಗಿ ತಂದೆ ಮಗನ ನಡುವೆ ಕಲಹ ಏರ್ಪಟ್ಟಿದ್ದು, ತಂದೆ ಚಿಟ್ಟಿಯಪ್ಪ ತನ್ನ ಬಳಿಯಿದ್ದ ಸಿಂಗಲ್‌ ಬ್ಯಾರಲ್‌ 12 ಬೋರ್‌ ಗನ್ನಿಂದ ಗುಂಡಿಕ್ಕಿದ್ದಾನೆ. ಗುಂಡೇಟಿನಿಂದ ನಿರನ್‌ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಘಟನೆ ಸಂಬಂಧ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಕೊಡಗು ಪೊಲೀಸ್‌ ವರಿಷ್ಠಾಧಿಕಾರಿ ಕೆ.ರಾಮರಾಜನ್‌ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.